HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ನಾಡಹಬ್ಬದ ಪ್ರಯುಕ್ತ ಕಕ್ಕೆಪ್ಪಾಡಿಯವರಿಂದ ಸಾಹಿತ್ಯ ನವಾಹ ಬದಿಯಡ್ಕ: ನವರಾತ್ರಿ - ದಸರಾ ನಾಡಹಬ್ಬದ ಪ್ರಯುಕ್ತ ಈ ವರ್ಷವೂ `ಸಾಹಿತ್ಯ ನವಾಹ' ಎಂಬ ಹೆಸರಿನಲ್ಲಿ ನಿರಂತರ ಒಂತ್ತು ದಿನ ಒಂ`ತ್ತು ಸರಣಿ ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸಿಕೊಡುವುದರ ಮೂಲಕ ಚುಟುಕು ಕವಿ ಸಾಹಿತ್ಯ ಸೇವಕ ಕಕ್ಕೆಪ್ಪಾಡಿ ಶಂಕರನಾರಾಯಣ `ಟ್ ವಿಶಿಷ್ಟತೆಯನ್ನು ಮೆರೆದಿದ್ದಾರೆ. ಕಳೆದ ವರ್ಷದಿಂದ ನವರಾತ್ರಿ ಸಮಯದಲ್ಲಿ ಶಾಲೆಗಳಲ್ಲಿ ದಸರಾ ವಿಶೇಷ ಕಾರ್ಯಕ್ರಮಗಳನ್ನು ನೀಡಲು ಅವರು ಪ್ರಾರಂಭಿಸಿದರು. ನಾಡಹಬ್ಬದ ಆಚರಣೆಯ ಪ್ರಯುಕ್ತ ಅವರು ಒಂಭತ್ತು ದಿನ ಒಂಭತ್ತು ಶಾಲೆಗಳಲ್ಲಿ ನಿರಂತರವಾಗಿ ಸಾಹಿತ್ಯ ಚುಟುಕು ಗೋಷ್ಠಿ ನಡೆಸಿಕೊಟ್ಟರು. ಕಾಸರಗೋಡಿನ ಐದು ಹಾಗೂ ದಕ್ಷಿಣ ಕನ್ನಡದ ನಾಲ್ಕು ಶಾಲೆಗಳಲ್ಲಿ ಕಾರ್ಯಕ್ರಮಗಳು ನಡೆದವು. ಮಡೋನಾ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಹುಡುಗಿಯರ ಪ್ರೌಢ ಶಾಲೆ ನೆಲ್ಲಿಕುಂಜೆ, ಅಗಲ್ಪಾಡಿ ಹಿರಿಯ ಪ್ರಾಥಮಿಕ ಶಾಲೆ, ಬಿಇಎಂ ಹೈಯರ್ ಸೆಕೆಂಡರಿ ಶಾಲೆ ಕಾಸರಗೋಡು, ಹಿರಿಯ ಪ್ರಾಥಮಿಕ ಶಾಲೆ ಏತಡ್ಕ, ಹಿರಿಯ ಪ್ರಾಥಮಿಕ ಶಾಲೆ ಕೋಳ್ಯಾರ್, ಹಿರಿಯ ಪ್ರಾಥಮಿಕ ಶಾಲೆ ದೇಲಂತಬೆಟ್ಟು ಕನ್ಯಾನ, ಹಿರಿಯ ಪ್ರಾಥಮಿಕ ಶಾಲೆ ಕಣಿಯೂರು ಬಂಟ್ವಾಳ, ಇಂಡಿಯನ್ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ ಉಪ್ಪಿನಂಗಡಿ ಎಂಬ ಶಾಲೆಗಳಲ್ಲಿ ಹಾಸ್ಯ ಚುಟುಕು ಅಭಿನಯಗೀತೆ ಕಾರ್ಯಕ್ರಮಗಳು ನಡೆಯಿತು. ಪ್ರತಿಫಲಾಪೇಕ್ಷೆಯಿಲ್ಲದೆ ತಾವೇ ಸ್ವತ: ಶಾಲೆಗಳಿಗೆ ಹೋಗಿ ಸಾಹಿತ್ಯ ಕಾರ್ಯಕ್ರಮಗಳನ್ನು ನೀಡಿ ವಿದ್ಯಾಥರ್ಿಗಳನ್ನು ರಂಜಿಸುವುದಕ್ಕೆ ಪ್ರಸಿದ್ಧರಾದ ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್ 2011 ರಿಂದ ಆರಂಭಿಸಿ ಕಳೆದ ಐದು ವರ್ಷಗಳಲ್ಲಿ ಒಟ್ಟು ಒಂದು ಸಾವಿರದ ನೂರಕ್ಕಿಂತಲೂ ಹೆಚ್ಚು ಸಾಹಿತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ವೃದ್ಧಾಪ್ಯವನ್ನೂ ಆರೋಗ್ಯದ ಸಮಸ್ಯೆಯನ್ನೂ ಲೆಕ್ಕಿಸದೆ ಹಲವು ಬಾರಿ ಕಾಲು ನಡಿಗೆಯಲ್ಲಿ ಹಳ್ಳಿಗಾಡಿನ ಶಾಲೆಗಳಿಗೂ ಸಾಗಿ ವಿದ್ಯಾಥರ್ಿಗಳನ್ನು ರಂಜಿಸಿದ್ದಲ್ಲದೆ ಜ್ಞಾನಾಮೃತವನ್ನು ಉಣಿಸಿದ್ದಾರೆ. ಕಾಸರಗೋಡಿನ ಬಹುತೇಕ ಶಾಲೆಗಳಲ್ಲಿ ಸಾಹಿತ್ಯಗೋಷ್ಠಿ ನಡೆಸಿರುವ ಇವರು ಕನರ್ಾಟಕದ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಮೈಸೂರು ಹಾಗೂ ಬೆಂಗಳೂರು ಜಿಲ್ಲೆಗಳಲ್ಲೂ ಕಾರ್ಯಕ್ರಮ ನೀಡಿದ್ದಾರೆ. ಯಾವುದೇ ಪ್ರತಿಫಲವನ್ನು ಬಯಸದೆ ಗಡಿನಾಡಿನಲ್ಲಿ ಕನ್ನಡದ ಕೈಂಕರ್ಯದಲ್ಲಿ ತೊಡಗಿರುವ ಭಟ್ಟರನ್ನು ಹಲವು ಸಂಘಸಂಸ್ಥೆಗಳು ಸಮ್ಮಾನಿಸಿವೆ. ನವರಾತ್ರಿ ದೀಪಾವಳಿಯಂತಹ ಪರಂಪರಾಗತ ಹಬ್ಬಗಳ ಬಗ್ಗೆ ಜಾಗೃತಿ ಮೂಡಿಸಲು ಹಬ್ಬದ ಸಂದರ್ಭದಲ್ಲಿ ವಿಶೇಷ ಸರಣಿ ಕಾರ್ಯಕ್ರಮಗಳನ್ನು ನೀಡುವ ಇವರು ದೀಪಾವಳಿ ಸಂದರ್ಭದಲ್ಲೂ ಕಾರ್ಯಕ್ರಮ ನೀಡುವ ಯೋಜನೆಯಲ್ಲಿದ್ದಾರೆ. ಆಸಕ್ತ ಶಾಲೆಗಳು 9740940914 ಎಂಬ ದೂರವಾಣಿ ಸಂಖ್ಯೆಯಲ್ಲಿ ಇವರನ್ನು ಸಂಪಕರ್ಿಸಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries