ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 15, 2017
ಮೊಬೈಲ್ ಗ್ರಾಹಕರಿಗೆ ಕಿರಿಕಿರಿಯಾದ ಆಧಾರ್ ಲಿಂಕಿಂಗ್
ದೆಹಲಿ: ಸಿಮ್ ಕಾಡರ್್ಗಳೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡದಿದ್ದಲ್ಲಿ ದೂರವಾಣಿ ಸಂಪರ್ಕ ಸ್ಥಗಿತಗೊಳಿ ಸುವುದಾಗಿ ಮೊಬೈಲ್ ಸೇವಾದಾರ ಸಂಸ್ಥೆಗಳು ತಮ್ಮ ಗ್ರಾಹಕರನ್ನು ಬೆದರಿಸುತ್ತಿವೆ.
ಏರ್ಟೆಲ್, ವೊಡಾಫೋನ್, ಐಡಿಯಾ ಸೇರಿದಂತೆ, ಪ್ರಮುಖ ಮೊಬೈಲ್ ಸೇವಾ ದಾರ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವ ವಿಚಾರವಾಗಿ ನಿರಂತರವಾಗಿ ಸಂದೇಶಗಳನ್ನು ಕಳುಹಿಸುತ್ತಿದೆ. ಫೆಬ್ರವರಿ 6, 2018ರೊಳಗೆ ಭದ್ರತಾ ದೃಷ್ಟಿಯಿಂದ ಸುಪ್ರೀಂ ಕೋಟರ್್ ನೀಡಿ ರುವ ಆದೇಶವನ್ನು ಮುಂದಿಟ್ಟಿರುವ ದೂರವಾಣಿ ಸಂಪರ್ಕ ಇಲಾಖೆ ಸದ್ಯ ಚಾಲ್ತಿ ಯಲ್ಲಿರುವ ಎಲ್ಲಾ ಸಂಪರ್ಕಗಳನ್ನು ಲಿಂಕ್ ಮಾಡಿಸಲು ತಿಳಿಸಿದೆ.
ಆದರೆ ಆಧಾರ್ಅನ್ನು ಕಡ್ಡಾಯಗೊಳಿಸುವಂತಿಲ್ಲ ಎಂದು ಖುದ್ದು ಕೋಟರ್್ ಆದೇಶ ನೀಡಿತ್ತು. ಆದರೆ ಲಿಂಕ್ ಮಾಡಬೇಕೆಂದು ಖಾಸಗಿ ಸೇವಾದಾರರು ಪೀಡಿಸುತ್ತಿರುವುದರಿಂದ ಗ್ರಾಹಕರು ಕಿರಿಕಿರಿಗೆ ಒಳಗಾಗಿದ್ದಾರೆ. ಕೆಲ ಸೇವಾ ದಾರರು ಲಿಂಕ್ ಮಾಡದಿದ್ದಲ್ಲಿ, ಶೀಘ್ರವೇ ಸಂಪರ್ಕ ಕಡಿತ ಮಾಡುವುದಾಗಿ ಬೆದರಿಸುತ್ತಿವೆ. ಫೆಬ್ರವರಿ 6ರವರೆಗೂ ಸಮಯ ನೀಡಿದ್ದರೂ ಇಷ್ಟು ಆತುರವೇಕೆ ಎಂದು ಗ್ರಾಹಕರು ಕೇಳುತ್ತಿದ್ದಾರೆ. ಆಧಾರ್ ಲಿಂಕಿಂಗ್ ಮಾಡಲು ಬೇಕಿರುವ ಸೇವಾ ಕೇಂದ್ರಗಳು ಗುಡ್ಡಗಾಡು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಇಲ್ಲದಿರುವುದು ಸಾಕಷ್ಟು ಸಮಸ್ಯೆ ತಂದಿಟ್ಟಿದೆ.
ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ಸೇವಾದಾರ ಸಂಸ್ಥೆಗಳು, ಫೆಬ್ರವರಿ ವೇಳೆಗೆ ಕೊನೆ ಕ್ಷಣದಲ್ಲಿನ ನೂಕು ನುಗ್ಗಲು ತಪ್ಪಿಸಲು ಆದಷ್ಟು ಬೇಗ ಈ ಕ್ರಿಯೆ ಮುಗಿಸಲು ಗ್ರಾಹಕರಿಗೆ ಸೂಚಿಸುತ್ತಿರುವುದಾಗಿ ತಿಳಿಸಿವೆ. ದೇಶದಲ್ಲಿರುವ 110 ಕೋಟಿ ಮೊಬೈಲ್ ಬಳಕೆದಾರರಲ್ಲಿ ಈಗಾಗಲೇ 50 ಕೋಟಿಯಷ್ಟು ಜನ ಈಗಾಗಲೇ ಆಧಾರ್ ಲಿಂಕಿಂಗ್ ಮಾಡಿದ್ದಾರೆ. ಇದಕ್ಕೆಂದೇ ಸಂಸ್ಥೆಗಳು 1000 ಕೋಟಿ ರು.ನಷ್ಟು ಖಚರ್ು ಮಾಡುತ್ತಿವೆ.