ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 31, 2017
ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿಗೆ ನಾಕ್ ಅಂಗೀಕಾರ
ಮಂಜೇಶ್ವರ: ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿಗೆ ಕೊನೆಗೂ ನಾಕ್ನ ಬಿ ಗ್ರೇಡ್ ಲಭಿಸಿದೆ.
ಈ ಕಾಲೇಜಿಗೆ ನಾಕ್ ಪ್ರತಿನಿಧಿಗಳು ಕೆಲವು ವಾರಗಳ ಹಿಂದೆ ಸಂದಶರ್ಿಸಿ ಕಾಲೇಜಿನ ಕುರಿತಾದ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿದರು. ಜೊತೆಗೆ ಕಾಲೇಜಿನ ಅಧ್ಯಾಪಕ ವೃಂದ, ವಿದ್ಯಾಥರ್ಿಗಳು, ರಕ್ಷಕ ಶಿಕ್ಷಕ ಸಂಘದೊಂದಿಗೆ ಚಚರ್ೆ ನಡೆಸಿದ್ದರು. ಅದರ ಫಲವಾಗಿ ಕಾಲೇಜಿಗೆ ಕೊನೆಗೂ ನಾಕ್ ಅಂಗೀಕಾರ ಲಭಿಸುವಂತಾಗಿದೆ ಎಮದು ಕಾಲೇಜಿನ ಪ್ರಾಂಶುಪಾಲ ಮ್ಯಾಥ್ಯೂ ಜೋಜರ್್ ತಿಳಿಸಿದ್ದಾರೆ. ಮಂಜೇಶ್ವರ ಕಾಲೇಜಿನಲ್ಲಿ 450 ಮಂದಿ ವಿದ್ಯಾಥರ್ಿಗಳು ಕಲಿಯುತ್ತಿದ್ದಾರೆ. 450 ವಿದ್ಯಾಥರ್ಿಗಳು ಮಾತ್ರ ಕಲಿಯುತ್ತಿರುವ ಕಾಲೇಜಿಗೆ ನಾಕ್ ಅಂಗೀಕಾರ ಲಭಿಸುವುದು ಇದು ಪ್ರಥಮವಾಗಿದೆ. ನಾಕ್ ಅಂಗೀಕಾರ ಲಭಿಸಿರುವ ಹಿನ್ನೆಲೆಯಲ್ಲಿ ಈ ಕಾಲೇಜಿಗೆ ಕೇಂದ್ರ ಸರಕಾರದ ಆಥರ್ಿಕ ಮತ್ತು ಇನ್ನಿತರ ಸಹಾಯಗಳೂ ಲಭಿಸಿವೆ. ಹೊಸ ಹಾಗೂ ಉನ್ನತ ಕೋಸರ್್ ಲಭಿಸಲು ಇದು ಸಹಾಯಕವಾಗಲಿದೆ. ನಾಕ್ ಅಂಗೀಕಾರ ಲಭಿಸಿರುವುದು ಕಾಲೇಜಿಗೆ ಹಾಗು ಗಡಿನಾಡಿನ ಜನರಿಗೆ ಭರವಸೆ ಮತ್ತು ಹರ್ಷಕ್ಕೆ ಕಾರಣವಾಗಿದೆ.