HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ನೋಟು ರದ್ದತಿ ಬಳಿಕ ಶೂನ್ಯ ಖಾತೆಗಳಲ್ಲಿ ಭಾರೀ ಪ್ರಮಾಣದಲ್ಲಿ ನಗದು ವಗರ್ಾವಣೆ ನೋಟು ರದ್ದತಿ ಬಳಿಕ ಶೂನ್ಯ ಖಾತೆಗಳಲ್ಲಿ ಭಾರೀ ಪ್ರಮಾಣದಲ್ಲಿ ನಗದು ವಗರ್ಾವಣೆ ಆಗಿದೆ ಎಂದು ಕಾಪರ್ೊರೇಟ್ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ. ಎರಡು ಲಕ್ಷಕ್ಕೂ ಅಧಿಕ ತೆರಿಗೆ ವಂಚಕ ಕಂಪೆನಿಗಳಿದ್ದು (ಷೆಲ್ ಕಂಪೆನಿಗಳು) ಅವುಗಳಲ್ಲಿ 5,800 ಕಂಪೆನಿಗಳ ಖಾತೆಗಳಲ್ಲಿ ನೋಟು ರದ್ದತಿಗೂ ಮುನ್ನ (ನವೆಂಬರ್ 8) ನಗದು ಇರಲೇ ಇಲ್ಲ. ಆ ಬಳಿಕ ಕಂಪೆನಿಗಳ ಖಾತೆಗಳಿಗೆ ?4,552 ಕೋಟಿ ನಗದು ಜಮಾ ಆಗಿದ್ದು, ?4,552 ಕೋಟಿ ತೆಗೆಯಲಾಗಿದೆ. ಕೇವಲ 13 ಬ್ಯಾಂಕ್ಗಳು ಸಕರ್ಾರಕ್ಕೆ ನೀಡಿರುವ ಮಾಹಿತಿಯಿಂದ ಇದು ತಿಳಿದುಬಂದಿದೆ. ಕೆಲವು ಕಂಪೆನಿಗಳ ಹೆಸರಿನಲ್ಲಿ 100ಕ್ಕೂ ಹೆಚ್ಚು ಖಾತೆಗಳಿವೆ. ಒಂದು ಕಂಪೆನಿ ಹೆಸರಿನಲ್ಲಿ 2,134 ಖಾತೆಗಳಿವೆ ಎಂದು ಕಾಪರ್ೊರೇಟ್ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ. ಹಣಕಾಸು ಲೆಕ್ಕಪತ್ರ ಸಲ್ಲಿಸದ ಮತ್ತು ಇತರ ನಿಯಂತ್ರಣ ನಿಯಮಗಳನ್ನು ಪಾಲಿಸದ 2 ಲಕ್ಷಕ್ಕೂ ಅಧಿಕ ಕಂಪೆನಿಗಳ ನೋಂದಣಿಯನ್ನು ಸೆಪ್ಟೆಂಬರ್ನಲ್ಲಿ ರದ್ದು ಮಾಡಲಾಗಿದೆ. ಇದೀಗ ಈ ಕಂಪೆನಿಗಳ ಖಾತೆಗಳ ಪರಿಶೀಲನೆ ನಡೆಸಲಾಗುತ್ತಿದೆ. 2016ರ ನವೆಂಬರ್ 8ರಂದು ಒಂದು ಬ್ಯಾಂಕ್ನಲ್ಲಿ 429 ಕಂಪೆನಿಗಳು ಖಾತೆಯಲ್ಲಿ ನಗದು ಇರಲಿಲ್ಲ. ಆದರೆ ನವೆಂಬರ್ 8ರ ಬಳಿಕ ಆ ಖಾತೆಗಳಲ್ಲಿ ?11 ಕೋಟಿ ಜಮಾ ಮಾಡಿ ಅದನ್ನು ಹಿಂದಕ್ಕೆ ಪಡೆಯಲಾಗಿದೆ. ಖಾತೆಯಗಳನ್ನು ಸ್ಥಗಿತಗೊಳಿಸುವಾಗ ?42 ಸಾವಿರ ಉಳಿಸಲಾಗಿದೆ. ಇನ್ನೊಂದು ಬ್ಯಾಂಕ್ನಲ್ಲಿ 3000 ಕಂಪೆನಿಗಳು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿರುವುದು ಪತ್ತೆಯಾಗಿದೆ. ಈ ಖಾತೆಗಳಲ್ಲಿಯೂ ಒಟ್ಟಾರೆ ?13 ಕೋಟಿ ನಗದು ಇತ್ತು. ಈ ಖಾತೆಗಳಿಗೂ 3,800 ಕೋಟಿ ಜಮಾ ಆಗಿದ್ದು, ಅಷ್ಟೇ ಮೊತ್ತವನ್ನು ಹಿಂದಕ್ಕೆ ಪಡೆಯಲಾಗಿದೆ. ಎಂದು ಸಚಿವಾಲಯ ತಿಳಿಸಿದೆ. ಬಾಂಗ್ಲಾ ಗಡಿಯಲ್ಲಿ ಭದ್ರತೆ ಹೆಚ್ಚಳ:: `ಬಾಂಗ್ಲಾದೇಶದಿಂದ ಭಾರತಕ್ಕೆ ನುಸುಳಲು ರೋಹಿಂಗ್ಯಾ ಸಮುದಾಯದವರು ಬಳಸುತ್ತಿದ್ದ 140 ನುಸುಳು ಸ್ಥಳಗಳನ್ನು ಪತ್ತೆಮಾಡಿ ಅಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ' ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್ಎಫ್) ಮಾಹಿತಿ ನೀಡಿದೆ. ಬಿಎಸ್ಎಫ್ ಮತ್ತು ಬಾರ್ಡರ್ ಗಾಡರ್್ ಬಾಂಗ್ಲಾದೇಶ (ಬಿಜಿಬಿ) ಮುಖ್ಯಸ್ಥರ ಮಧ್ಯೆ ಅಕ್ಟೋಬರ್ 2ರಿಂದ 6ರವರೆಗೆ ನಡೆದ ಸುದೀರ್ಘ ಸಭೆಯಲ್ಲಿ ರೋಹಿಂಗ್ಯಾ ಸಮುದಾಯದವರ ಅಕ್ರಮ ವಲಸೆ ನಿಯಂತ್ರಣ ಸಂಬಂಧ ಮಾತುಕತೆ ನಡೆಸಲಾಗಿದೆ. ಅಕ್ರಮ ವಲಸೆ ನಿಯಂತ್ರಣಕ್ಕೆ ಎರಡೂ ಭದ್ರತಾ ಪಡೆಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಪರಸ್ಪರ ಮಾಹಿತಿ ಹಂಚಿಕೊಂಡಿವೆ. `ಎರಡೂ ಕಡೆಯ ಸ್ಥಳೀಯರ ನೆರವು ಇಲ್ಲದೆ ವಲಸಿಗರು ಗಡಿ ನುಸುಳಲು ಸಾಧ್ಯವಿಲ್ಲ. ಅವರಿಗೆ ನೆರವಾಗುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. 140 ಗಡಿ ನುಸುಳುವಿಕೆ ಸ್ಥಳಗಳಲ್ಲಿ ಅತ್ಯಾಧುನಿಕ ಕಣ್ಗಾವಲು ಉಪಕರಣಗಳನ್ನು ಅಳವಡಿಸಲಾಗಿದೆ' ಎಂದು ಬಿಎಸ್ಎಫ್ ತಿಳಿಸಿದೆ. `ಮ್ಯಾನ್ಮಾರ್ನಿಂದ ಬರುತ್ತಿರುವ ರೋಂಹಿಂಗ್ಯಾ ಮುಸ್ಲಿಮರನ್ನು ನೋಂದಣಿ ಮಾಡಿಕೊಂಡೇ ದೇಶದೊಳಕ್ಕೆ ಬಿಟ್ಟುಕೊಳ್ಳಲಾಗುತ್ತಿದೆ. ನೋಂದಣಿ ಮಾಡಿಸದವರಿಗೆ ಯಾವುದೇ ಸವಲತ್ತು ನೀಡಬೇಡಿ ಮತ್ತು ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಸಕರ್ಾರ ಆದೇಶಿಸಿದೆ. ಭಾರತದ ವಿರುದ್ಧದ ಭಯೋತ್ಪಾದನೆ ನಮ್ಮ ನೆಲದಲ್ಲಿ ನೆಲೆಯೂರಲು ಬಿಡುವುದಿಲ್ಲ' ಎಂದು ಬಿಜಿಬಿ ಸಹ ಭರವಸೆ ನೀಡಿದೆ. ಹಿಂಸಾಚಾರ: 'ಹನಿಪ್ರೀತ್ ಕೈವಾಡ ಸ್ಪಷ್ಟ' ಡೇರಾ ಸಚ್ಚಾ ಸೌಧಾ ಮುಖ್ಯಸ್ಥ ಗುಮರ್ೀತ್ ರಾಮ್ ರಹೀಂ ಸಿಂಗ್ಗೆ ಶಿಕ್ಷೆ ಪ್ರಕಟವಾದ ಸಂದರ್ಭದಲ್ಲಿ, ಪಂಚಕುಲಾದಲ್ಲಿ ಆಗಸ್ಟ್ 25ರಂದು ನಡೆದ ಭಾರಿ ಹಿಂಸಾಚಾರದಲ್ಲಿ ಆತನ ದತ್ತುಪುತ್ರಿ ಹನಿಪ್ರೀತ್ ಇನ್ಸಾನ್ ಕೈವಾಡ ಇದೆ ಎಂಬುದಕ್ಕೆ ಸಾಕ್ಷ್ಯಾಧಾರಗಳಿಗೆ ಎಂದು ಚಂಡೀಗಡ ಪೊಲೀಸರು ತಿಳಿಸಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಗುಮರ್ೀತ್ಗೆ ಶಿಕ್ಷೆ ಪ್ರಕಟವಾದ ದಿನ ನಡೆದ ಹಿಂಸಾಚಾರದಿಂದ 35 ಮಂದಿ ಮೃತಪಟ್ಟಿದ್ದರು. `ಹನಿಪ್ರೀತ್ ವಿಚಾರಣೆ ವೇಳೆ ದಾರಿತಪ್ಪಿಸುತ್ತಿದ್ದು ತನಿಖೆಗೆ ಸಹಕರಿಸುತ್ತಿಲ್ಲ' ಎಂದು ಪಂಚಕುಲಾ ಪೊಲೀಸ್ ಆಯುಕ್ತ ಎ.ಎಸ್.ಚಾವ್ಲಾ ಹೇಳಿದ್ದಾರೆ. `ಈವರೆಗೆ ನಾವು ಪಡೆದ ಸಾಕ್ಷ್ಯಾಧಾರಗಳ ಪ್ರಕಾರ, ಹಿಂಸಾಚಾರದ ಹಿಂದೆ ಹನಿಪ್ರೀತ್ ಕೈವಾಡವಿರುವುದು ಸ್ಪಷ್ಟವಾಗಿದೆ. ಪೊಲೀಸರು ಸಾಕ್ಷ್ಯಾಧಾರ ಮತ್ತು ಇತರ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ' ಎಂದು ಅವರು ವಿವರಿಸಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಡೇರಾ ಮುಖ್ಯಸ್ಥನಿಗೆ ಶಿಕ್ಷೆಯಾದರೆ ಪಂಚಕುಲಾದಲ್ಲಿ ಹಿಂಸಾಚಾರ ನಡೆಸಲು ಕೆಲವು ಡೇರಾ ಸದಸ್ಯರಿಗೆ ? 1.25 ಕೋಟಿ ಹಣ ಹಂಚಲಾಗಿತ್ತು ಎಂಬ ಆರೋಪವನ್ನು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಕೆಲವರು ಮಾಡಿರುವುದಾಗಿ ಚಾವ್ಲಾ ಹೇಳಿದ್ದಾರೆ. ಮರಣದಂಡನೆ ವಿಧಾನ ಬದಲು ಕೇಂದ್ರದ ವಿವರಣೆ ಕೇಳಿದ `ಸುಪ್ರೀಂ' ನವದೆಹಲಿ: ಮರಣದಂಡನೆಯನ್ನು ಗಲ್ಲಿಗೆ ಹಾಕುವ ಮೂಲಕ ಜಾರಿ ಮಾಡುವುದರ ಕಾನೂನಿನ ಮಾನ್ಯತೆ ಬಗ್ಗೆ ವಿವರಣೆ ನೀಡಿ ಎಂದು ಕೇಂದ್ರ ಸಕರ್ಾರಕ್ಕೆ ಸುಪ್ರೀಂ ಕೋಟರ್್ ಸೂಚಿಸಿದೆ. ಗಲ್ಲು ಹಾಕುವುದನ್ನು ಪ್ರಶ್ನಿಸಿ ವಕೀಲ ರಿಷಿ ಮಲ್ಹೋತ್ರಾ ಸಲ್ಲಿಸಿರುವ ಅಜರ್ಿಯಲ್ಲಿ `ಮರಣದಂಡನೆಯನ್ನೂ ಗೌರವಯುತವಾಗಿ ಮತ್ತು ನೋವುಂಟು ಮಾಡದ ರೀತಿಯಲ್ಲಿ ಜಾರಿ ಮಾಡಬೇಕು ಎಂದು ಸಂವಿಧಾನದ 21ನೇ ವಿಧಿ (ಜೀವಿಸುವ ಹಕ್ಕು) ಹೇಳುತ್ತದೆ' ಎಂದು ಪ್ರತಿಪಾದಿಸಿದ್ದರು. ಅಜರ್ಿಯ ಪರಿಶೀಲನೆ ನಡೆಸಿದ ಮುಖ್ಯ ನ್ಯಾಯಮೂತರ್ಿ ದೀಪಕ್ ಮಿಶ್ರಾ ಅವರಿದ್ದ ಪೀಠವು `ಈ ಸಂಬಂಧ ಮೂರು ವಾರಗಳ ಒಳಗೆ ನಿಮ್ಮ ವಿವರಣೆ ನೀಡಿ' ಎಂದು ಕೇಂದ್ರ ಸಕರ್ಾರಕ್ಕೆ ಸೂಚಿಸಿದೆ. ಮರು ವಿಚಾರಣೆಗೆ ಒಪ್ಪಿಗೆ ಮಹಾತ್ಮ ಗಾಂಧಿ ಹತ್ಯೆ ಪ್ರಕರಣದ ಮರುತನಿಖೆಗೆ ಮನವಿ ಮಾಡಿಕೊಂಡಿರುವ ಅಜರ್ಿಯ ಪರಿಶೀಲನೆಗೆ ನೆರವಾಗಲು ಹಿರಿಯ ವಕೀಲ ಮತ್ತು ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅಮರಿಂದರ್ ಶರಣ್ ಅವರನ್ನು ನ್ಯಾಯಾಲಯದ ಸಹಾಯಕರನ್ನಾಗಿ ನೇಮಿಸಿ ಸುಪ್ರೀಂ ಕೋಟರ್್ ಆದೇಶಿಸಿದೆ. ಮುಂಬೈ ನಿವಾಸಿ ಮತ್ತು ಅಭಿನವ ಭಾರತ ಸಂಸ್ಥೆಯ ಟ್ರಸ್ಟಿ ಡಾ.ಪಂಕಜ್ ಫಡ್ನಿಸ್ ಅವರ ಅಜರ್ಿಯ ವಿಚಾರಣೆ ನಡೆಸಿದ ನ್ಯಾಯಮೂತರ್ಿಗಳಾದ ಎಸ್.ಎ.ಬೊಬ್ಡೆ ಮತ್ತು ಎಲ್.ನಾಗೇಶ್ವರ ರಾವ್ ಅವರಿದ್ದ ಪೀಠವು ಈ ನಿಧರ್ಾರ ತೆಗೆದುಕೊಂಡಿದೆ. ವಿಚಾರಣೆಯ ಆರಂಭದಲ್ಲಿ ಪೀಠವು `ಪ್ರಕರಣವು ಬಹಳ ಹಿಂದೆಯೇ ಇತ್ಯರ್ಥವಾಗಿದೆ. ಈಗ ಏನನ್ನೂ ಮಾಡಲು ಸಾಧ್ಯವಿಲ್ಲ' ಎಂದು ಹೇಳಿತು. ಆದರೆ ಫಡ್ನಿಸ್ ಅವರು ಮರುತನಿಖೆಯ ಅಗತ್ಯವನ್ನು ಪೀಠಕ್ಕೆ ಮನವರಿಕೆ ಮಾಡಿಕೊಡಲು ಯತ್ನಿಸಿದರು. `ಹಲವು ಆಯಾಮಗಳಲ್ಲಿ ಮತ್ತೆ ತನಿಖೆ ನಡೆಯಬೇಕಿದೆ. ಇದು ಹಲವು ಸತ್ಯಗಳನ್ನು ಮರೆಮಾಚಿರುವ ದೊಡ್ಡ ಪ್ರಕರಣ. ಪ್ರಕರಣದ ಮರುತನಿಖೆ ಆರಂಭಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮನವರಿಕೆ ಮಾಡಿಕೊಡಲು ಕೆಲವು ದಾಖಲೆಗಳ ಅಗತ್ಯವಿದೆ. ಅವನ್ನು ನ್ಯಾಯಾಲಯದ ಮುಂದೆ ಇರಿಸಲು ಸ್ವಲ್ಪ ಸಮಯಾವಕಾಶ ಬೇಕು' ಎಂದು ಅವರು ಮನವಿ ಮಾಡಿಕೊಂಡರು. ದಾಖಲೆಗಳನ್ನು ನೀಡಲು ಸಮಯಾವಕಾಶ ಕೊಡಬಹುದು. ಆದರೆ ಗಾಂಧೀಜಿ ಹತ್ಯೆಯ ಮರುತನಿಖೆ ಅಗತ್ಯ ಎಂಬುದನ್ನು ನೀವು ಸಾಬೀತು ಮಾಡಬೇಕಾಗುತ್ತದೆ ಎಂದು ಪೀಠ ಹೇಳಿತು. `ನಾಥೂರಾಂ ಗೋಡ್ಸೆ ಮತ್ತು ನಾರಾಯಣ ಆಪ್ಟೆ ಅವರ ಮೇಲ್ಮನವಿಯನ್ನು ಪೂರ್ವ ಪಂಜಾಬ್ ಹೈಕೋಟರ್್ 1949ರಲ್ಲಿ ತಿರಸ್ಕರಿಸಿತ್ತು. ಸುಪ್ರೀಂ ಕೋಟರ್್ ರಚನೆಯಾಗಿದ್ದೇ 1950ರ ಜನವರಿಯಲ್ಲಿ. ಸುಪ್ರೀಂ ಕೋಟರ್್ನಲ್ಲಿ ಈ ಪ್ರಕರಣ ವಿಚಾರಣೆಗೆ ಬಂದೇ ಇಲ್ಲ. ಗಾಂಧಿಯವರತ್ತ ಗುಂಡು ಹಾರಿಸುವಲ್ಲಿ ನಾಥೂರಾಂ ಗೋಡ್ಸೆ ಅಲ್ಲದೆ ಮತ್ತೊಬ್ಬ ವ್ಯಕ್ತಿ ಭಾಗಿಯಾಗಿರಬಹುದು. ಹತ್ಯೆಯ ಹಿಂದೆ ಸಂಘಟನೆಯೊಂದರ ಕೈವಾಡ ಇದ್ದಿರಬಹುದು' ಎಂದು ಫಡ್ನಿಸ್ ಹೇಳಿದರು. `ಗಾಂಧಿ ಹತ್ಯೆಯಲ್ಲಿ ಮೂರನೇ ವ್ಯಕ್ತಿಯೊಬ್ಬ ಭಾಗಿಯಾಗಿದ್ದ ಎಂದು ನೀವು ಹೇಳುತ್ತಿದ್ದೀರಿ. ವಿಚಾರಣೆ ಎದುರಿಸಲು ಆ ವ್ಯಕ್ತಿ ಈಗ ಬದುಕಿದ್ದಾನೆಯೇ? ನಾವು ಯಾವುದೇ ಸಂಘಟನೆಯನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಲು ಸಾಧ್ಯವಿಲ್ಲ. ನೀವು ಹೇಳಿದ ವ್ಯಕ್ತಿ ಬದುಕಿದ್ದಾನೆಯೇ ಇಲ್ಲವೇ ಎಂಬುದು ನಿಮಗೆ ತಿಳಿದಿದೆಯೇ' ಎಂದು ಕೇಳಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಫಡ್ನಿಸ್ ಅವರು, `ಆ ವ್ಯಕ್ತಿ ಬದುಕಿದ್ದಾನೆಯೇ ಇಲ್ಲವೇ ಎಂಬುದು ತಿಳಿದಿಲ್ಲ. ಆದರೆ ಸತ್ಯವನ್ನು ಕಂಡುಕೊಳ್ಳಬೇಕು ಎಂಬುದೇ ಮರುತನಿಖೆಗೆ ಆಗ್ರಹಿಸುತ್ತಿರುವುದರ ಹಿಂದಿನ ಉದ್ದೇಶ' ಎಂದು ವಿವರಣೆ ನೀಡಿದರು. ಪ್ರಕರಣದ ವಿಚಾರಣೆಗೆ ಒಪ್ಪಿಗೆ ಸೂಚಿಸಿದ ಪೀಠ, ಹಿರಿಯ ವಕೀಲ ಅಮರಿಂದರ್ ಶರಣ್ ಅವರನ್ನು ನ್ಯಾಯಾಲಯದ ಸಹಾಯಕರನ್ನಾಗಿ ನೇಮಕ ಮಾಡಿತು. ಅಜರ್ಿಯ ವಿಚಾರಣೆಯನ್ನು ಅಕ್ಟೋಬರ್ 30ಕ್ಕೆ ನಿಗದಿಪಡಿಸಿತು. ಕೊಲಿಜಿಯಂ ಶಿಫಾರಸು ಬಹಿರಂಗಕ್ಕೆ ನಿಧರ್ಾರ ನ್ಯಾಯಾಧೀಶರು ಮತ್ತು ನ್ಯಾಯಮೂತರ್ಿಗಳ ಬಡ್ತಿ, ವಗರ್ಾವಣೆ ಸಂಬಂಧ ಕೇಂದ್ರ ಸಕರ್ಾರಕ್ಕೆ ಸಲ್ಲಿಸಲಾಗುವ ಎಲ್ಲ ಶಿಫಾರಸುಗಳನ್ನು ಸುಪ್ರೀಂ ಕೋಟರ್್ನ ಜಾಲತಾಣದಲ್ಲಿ ಪ್ರಕಟಿಸಲು ಕೊಲಿಜಿಯಂ ನಿರ್ಧರಿಸಿದೆ. `ಕೊಲಿಜಿಯಂ ಪದ್ಧತಿಯಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ತರಲು ಈ ನಿಧರ್ಾರ ತೆಗೆದುಕೊಳ್ಳಲಾಗಿದೆ' ಎಂದು ಆದೇಶ ಪ್ರತಿಯಲ್ಲಿ ವಿವರಿಸಲಾಗಿದೆ. `ಹೈಕೋಟರ್್ ನ್ಯಾಯಮೂತರ್ಿಗಳನ್ನು ಮುಖ್ಯ ನ್ಯಾಯಮೂತರ್ಿಗಳಾಗಿ, ಹೈಕೋಟರ್್ ನ್ಯಾಯಮೂತರ್ಿಗಳನ್ನು ಸುಪ್ರೀಂ ಕೋಟರ್್ ನ್ಯಾಯಮೂತರ್ಿಗಳಾಗಿ ಮತ್ತು ಅಧೀನ ನ್ಯಾಯಾಲಯಗಳ ನ್ಯಾಯಾಧೀಶರನ್ನು ಹೈಕೋಟರ್್ ಪೀಠಕ್ಕೆ ನೇಮಿಸಿ ಬಡ್ತಿ ನೀಡುವ ಸಂಬಂಧ ಕೊಲಿಜಿಯಂ ಸಕರ್ಾರಕ್ಕೆ ಮಾಡುವ ಶಿಫಾರಸುಗಳನ್ನು ಜಾಲತಾಣದಲ್ಲಿ ಪ್ರಕಟಿಸಲಾಗುತ್ತದೆ' ಎಂದು ವಿವರಿಸಲಾಗಿದೆ. ಕೊಲಿಜಿಯಂನ ಈ ನಿಧರ್ಾರ ಈಗಾಗಲೇ ಜಾರಿಯಾಗಿದೆ. ಮದ್ರಾಸ್ ಹೈಕೋಟರ್್ ಮತ್ತು ಕಲ್ಕತ್ತಾ ಹೈಕೋಟರ್್ ಗಳಿಗೆ ಇತ್ತೀಚೆ ಮಾಡಲಾದ ನೇಮಕಾತಿ ಶಿಫಾರಸುಗಳನ್ನು ಸುಪ್ರೀಂ ಕೋಟರ್್ನ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ದೋಕಲಾ ಸಮೀಪ ಚೀನಾ ಸೈನಿಕರ ಠಿಕಾಣಿ:: ನವದೆಹಲಿ: ಇತ್ತೀಚೆಗೆ ಭಾರತ ಮತ್ತು ಚೀನಾ ಯೋಧರು ಮುಖಾಮುಖಿಯಾಗಿ ಬಿಕ್ಕಟ್ಟು ಸೃಷ್ಟಿಯಾಗಿದ್ದ ದೋಕಲಾಕ್ಕಿಂತ 12 ಕಿ.ಮೀ ದೂರದ ಸ್ಥಳದಲ್ಲಿ ಚೀನಾದ ಸೈನಿಕರು ಜಮಾಯಿಸಿದ್ದಾರೆ. ಅಲ್ಲಿ ಈಗಾಗಲೇ ಇರುವ ರಸ್ತೆಯೊಂದನ್ನು ಅಗಲ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೋಕಲಾ ಪ್ರಸ್ಥಭೂಮಿಯಲ್ಲಿ ಚೀನಾ ತನ್ನ ಸೈನಿಕರ ಇರುವಿಕೆಯನ್ನು ಹೆಚ್ಚಿಸುತ್ತಲೇ ಇದೆ. ಇದು ಭಾರತ?ಚೀನಾ ನಡುವೆ ಮತ್ತೆ ಸಂಘರ್ಷಕ್ಕೆ ಕಾರಣವಾಗಬಹುದು ಎನ್ನಲಾಗಿದೆ. ಚುಂಬಿ ಕಣಿವೆಯಲ್ಲಿ ಚೀನಾದ ಅಧಿಕ ಸೈನಿಕರು ಠಿಕಾಣಿ ಹೂಡಿದ್ದಾರೆ ಎಂದು ಭಾರತದ ವಾಯು ಪಡೆ ಮುಖ್ಯಸ್ಥ ಬಿ.ಎಸ್. ಧನೋಆ ಅವರೂ ಹೇಳಿದ್ದರು. ಜನಪ್ರತಿನಿಧಿಗಳ ವಾಕ್ ಸ್ವಾತಂತ್ರ್ಯ: ವಿಚಾರಣೆ ಸಂವಿಧಾನ ಪೀಠಕ್ಕೆ ನವದೆಹಲಿ: ಸಕರ್ಾರದ ಪ್ರತಿನಿಧಿಗಳಾದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಸಾರ್ವಜನಿಕವಾಗಿ ವೈಯಕ್ತಿಕ ಅಭಿಪ್ರಾಯ ಮಂಡಿಸುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಇದೆಯೇ ಅಥವಾ ಇಲ್ಲವೇ ಎಂಬುದರ ವಿಚಾರಣೆ ಇದೀಗ ಸಂವಿಧಾನ ಪೀಠಕ್ಕೆ ವಗರ್ಾವಣೆಯಾಗಿದೆ. ತನಿಖಾ ಹಂತದಲ್ಲಿರುವ ಅಪರಾಧ ಪ್ರಕರಣ ಹಾಗೂ ಇನ್ನಿತರ ಸೂಕ್ಷ್ಮವಿಷಯಗಳ ಬಗ್ಗೆ ಸಕರ್ಾರಿ ಅಧಿಕಾರಿಗಳು ಇಲ್ಲವೇ ಜನಪ್ರತಿನಿಧಿಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ತಮ್ಮ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಇದೆಯೇ ಎಂಬ ಪ್ರಶ್ನೆಯನ್ನು ಹಿರಿಯ ವಕೀಲರಾದ ಹರೀಶ್ ಸಾಳ್ವೆ ಮತ್ತು ಫಾಲಿ ಎಸ್. ನಾರಿಮನ್ ಗುರುವಾರ ಸುಪ್ರೀಂ ಕೋಟರ್್ನಲ್ಲಿ ಎತ್ತಿದರು. ಅವರ ಈ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯ ನ್ಯಾಯಮೂತರ್ಿ ದೀಪಕ್ ಮಿಶ್ರಾ ನೇತೃತ್ವದ ಪೀಠ, ಈ ವಿಷಯವನ್ನು ಐವರು ನ್ಯಾಯಮೂತರ್ಿಗಳ ಸಂವಿಧಾನ ಪೀಠಕ್ಕೆ ಶಿಫಾರಸು ಮಾಡಿತು. ಇದೇ ವೇಳೆ, ಹೆಚ್ಚುತ್ತಿರುವ ಸಾಮಾಜಿಕ ಜಾಲತಾಣಗಳ ದುರ್ಬಳಕೆಯ ಬಗ್ಗೆಯೂ ಪೀಠ ಕಳವಳ ವ್ಯಕ್ತಪಡಿಸಿತು. `ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಸುಳ್ಳು ಮಾಹಿತಿ ಮತ್ತು ಅವಾಚ್ಯ ಶಬ್ದಗಳ ನಿಂದನೆಗಳು ಅಸಹ್ಯ ಎನಿಸುವಷ್ಟು ವಿಜೃಂಭಿಸುತ್ತಿವೆ. ಸಾಮಾಜಿಕ ಜಾಲತಾಣ ನೋಡುವುದನ್ನೇ ಬಿಟ್ಟಿದ್ದೇನೆ' ಎಂದು ನಾರಿಮನ್ ಹೇಳಿದರು.`ನಾನು ಕೂಡ ಟ್ವಿಟರ್ ಖಾತೆ ತೆಗೆದು ಹಾಕಿದ್ದೇನೆ' ಎಂದು ಸಾಳ್ವೆ ತಿಳಿಸಿದರು. ಪ್ರಕರಣ ಹಿನ್ನೆಲೆ: ಉತ್ತರ ಪ್ರದೇಶದ ಬುಲಂದ್ಶಹರ್ ಬಳಿಯ ಹೆದ್ದಾರಿಯಲ್ಲಿ ಕಳೆದ ಜುಲೈನಲ್ಲಿ ತನ್ನ ಪತ್ನಿ ಮತ್ತು ಪುತ್ರಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರರಕಣವನ್ನು ದೆಹಲಿಗೆ ವಗರ್ಾಯಿಸುವಂತೆ ಕೋರಿ ನೋಯ್ಡಾ ನಿವಾಸಿ ಸಲ್ಲಿಸಿದ್ದ ಅಜರ್ಿಯ ವಿಚಾರಣೆಯ ವೇಳೆ ಈ ವಿಷಯ ಚಚರ್ೆಗೆ ಬಂದಿತು. ಈ ಅತ್ಯಾಚಾರ ಪ್ರಕರಣವನ್ನು `ರಾಜಕೀಯ ಸಂಚು' ಎಂದು ಹೇಳಿದ್ದ ಉತ್ತರ ಪ್ರದೇಶದ ಅಂದಿನ ಸಚಿವ ಅಜಂ ಖಾನ್ ವಿರುದ್ಧ ಎಫ್ಐಆರ್ ದಾಖಲಿಸಲು ನಿದರ್ೇಶನ ನೀಡುವಂತೆಯೂ ಅಜರ್ಿದಾರರು ಕೋರಿದ್ದರು. ಕಳೆದ ವರ್ಷ ಜುಲೈ 29ರಂದು ಹೆದ್ದಾರಿಯಲ್ಲಿ ಕಾರನ್ನು ತಡೆದ ದರೋಡೆಕೋರರ ತಂಡ ಬಂದೂಕಿನಿಂದ ಬೆದರಿಸಿ ಕಾರಿನಲ್ಲಿದ್ದ ಮಹಿಳೆ ಮತ್ತು ಆಕೆಯ ಪುತ್ರಿಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಲೇ ಅಜಂ ಖಾನ್ ತಮ್ಮ ಹೇಳಿಕೆಯ ಬಗ್ಗೆ ಬೇಷರತ್ ಕ್ಷಮೆ ಯಾಚಿಸಿದ್ದರು. ಅದನ್ನು ಸುಪ್ರೀಂ ಕೋಟರ್್ ಕೂಡ ಮನ್ನಿಸಿತ್ತು. ವೈಯಕ್ತಿಕ ಅಭಿಪ್ರಾಯಕ್ಕೆ ಅವಕಾಶ ಇಲ್ಲ: ಸಕರ್ಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಚಿವರು ಸಕರ್ಾರದ ಪ್ರತಿನಿಧಿಗಳು. ಹೀಗಾಗಿ ಅವರು ಸಾರ್ವಜನಿಕ ವಿಷಯಗಳ ಬಗ್ಗೆ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಂತಿಲ್ಲ. ಅವರ ವೈಯಕ್ತಿಕ ಅಭಿಪ್ರಾಯಗಳನ್ನು ಸಕರ್ಾರದ ಅಭಿಪ್ರಾಯ ಅಥವಾ ನಿಲುವು ಎಂದು ಪರಿಗಣಿತವಾಗುತ್ತವೆ ಎಂದು ಸಾಳ್ವೆ ತಮ್ಮ ಅಭಿಪ್ರಾಯ ತಿಳಿಸಿದರು. ವೈಯಕ್ತಿಕ ಅಭಿಪ್ರಾಯಕ್ಕೆ ಅವಕಾಶ ಇಲ್ಲ: ಸಕರ್ಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಚಿವರು ಸಕರ್ಾರದ ಪ್ರತಿನಿಧಿಗಳು. ಹೀಗಾಗಿ ಅವರು ಸಾರ್ವಜನಿಕ ವಿಷಯಗಳ ಬಗ್ಗೆ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಂತಿಲ್ಲ. ಅವರ ವೈಯಕ್ತಿಕ ಅಭಿಪ್ರಾಯಗಳನ್ನು ಸಕರ್ಾರದ ಅಭಿಪ್ರಾಯ ಅಥವಾ ನಿಲುವು ಎಂದು ಪರಿಗಣಿತವಾಗುತ್ತವೆ ಎಂದು ಸಾಳ್ವೆ ತಮ್ಮ ಅಭಿಪ್ರಾಯ ತಿಳಿಸಿದರು. ಸಂವಿಧಾನದತ್ತ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಸಭ್ಯತೆ ಮತ್ತು ನೈತಿಕತೆಯ ಚೌಕಟ್ಟನ್ನು ಮೀರದಂತೆ ಇರಲಿ ದೀಪಕ್ ಮಿಶ್ರಾ, ಮುಖ್ಯ ನ್ಯಾಯಮೂತರ್ಿ ಸುಪ್ರೀಂ ಕೋಟರ್್ ಮುಖ್ಯ ನ್ಯಾಯಮೂತರ್ಿ 27 ಸರಕು, ಸೇವೆಗಳ ತೆರಿಗೆ ದರ ಇಳಿಕೆಗೆ ಜಿಎಸ್ಟಿ ಸಭೆ ನಿಧರ್ಾರ ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನೇತೃತ್ವದಲ್ಲಿ ನಡೆದ ಜಿಎಸ್ಟಿ ಮಂಡಳಿ ಸಭೆಯು ವರ್ತಕರು ಮತ್ತು ಗ್ರಾಹಕರ ಅನುಕೂಲಕ್ಕಾಗಿ ಹಲವು ಸುಧಾರಣೆಗಳನ್ನು ಪ್ರಕಟಿಸಿದೆ. ಒಟ್ಟು 27 ಸರಕುಗಳು ಮತ್ತು ಸೇವೆಗಳ ತೆರಿಗೆ ದರವನ್ನು ಇಳಿಸಲಾಗಿದೆ. ರಫ್ತುದಾರರ ಅನುಕೂಲಕ್ಕಾಗಿ ತೆರಿಗೆ ಮರುಪಾವತಿಯನ್ನು ತ್ವರಿತಗೊಳಿಸಲು ನಿರ್ಧರಿಸಲಾಗಿದೆ. ಮಾರ್ಬಲ್ ಮತ್ತು ಗ್ರಾನೈಟ್ ಬಿಟ್ಟು ನೆಲಕ್ಕೆ ಹಾಸಲು ಬಳಸುವ ಕಲ್ಲುಗಳು, ಲೇಖನ ಸಾಮಗ್ರಿ, ಚಪಾತಿ ಮತ್ತು ಕಕ್ರಾ, ಡೀಸೆಲ್ ಎಂಜಿನ್ ಬಿಡಿಭಾಗಗಳು ಮತ್ತು ಪಂಪ್ಗಳು, ಬ್ರಾಂಡ್ರಹಿತ ಕುರುಕಲು ತಿಂಡಿ, ಬ್ರಾಂಡ್ರಹಿತ ಆಯುವರ್ೇದ ಔಷಧಗಳು, ಕೈಮಗ್ಗದ ಬಟ್ಟೆ, ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಯ (ಐಸಿಡಿಎಸ್) ಆಹಾರ ಪೊಟ್ಟಣಗಳು, ರಬ್ಬರ್, ಕಾಗದ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳ ತೆರಿಗೆ ದರವನ್ನು ಶೇ 5ಕ್ಕೆ ಇಳಿಸಲಾಗಿದೆ. ಕೆಲವು ಸೇವೆಗಳು ಮತ್ತು ಕೈಕೆಲಸಗಳನ್ನೂ ಈ ವ್ಯಾಪ್ತಿಗೆ ತರಲಾಗಿದೆ. ಜರಿ ಕಟ್ಟುವುದು, ಗಿಲೀಟು ಆಭರಣಗಳು, ಮುದ್ರಣ ಕೆಲಸಗಳೂ ಶೇ 5ರ ತೆರಿಗೆ ವಿಭಾಗಕ್ಕೆ ಸೇರಲಿವೆ. ಹೆಚ್ಚು ಕಾಮರ್ಿಕರನ್ನು ಬಳಸಿ ನಡೆಸುವ ಸಕರ್ಾರದ ನಿಮರ್ಾಣ ಯೋಜನೆಗಳ ಗುತ್ತಿಗೆಗಳನ್ನು ಶೇ 5ರ ತೆರಿಗೆ ವ್ಯಾಪ್ತಿಗೆ ತರಲಾಗಿದೆ. ನೀರಾವರಿ ಯೋಜನೆಗಳಂತಹ ದೊಡ್ಡ ಕಾಮಗಾರಿ ಇದರಲ್ಲಿ ಸೇರುತ್ತದೆ. ರಾಜಿ ತೆರಿಗೆ ಪದ್ಧತಿಯ (ಕಾಂಪೊಸಿಷನ್ ಸ್ಕೀಮ್) ಮಿತಿಯನ್ನು ?75 ಲಕ್ಷದಿಂದ ?1 ಕೋಟಿಗೆ ಏರಿಸಲಾಗಿದೆ. ಈ ಪದ್ಧತಿ ವ್ಯಾಪ್ತಿಯಲ್ಲಿ ಬರುವವರು ಜಿಎಸ್ಟಿ ಲೆಕ್ಕ ಸಲ್ಲಿಕೆಯ ಸುದೀರ್ಘ ಪ್ರಕ್ರಿಯೆಯನ್ನು ಅನುಸರಿಸುವ ಅಗತ್ಯ ಇಲ್ಲ. ಬದಲಿಗೆ ವಹಿವಾಟಿನ ಶೇ 1ರಿಂದ 5ರಷ್ಟು ತೆರಿಗೆ ಪಾವತಿಸಿದರೆ ಸಾಕು. ವರ್ತಕರಿಗೆ ಶೇ 1, ತಯಾರಕರಿಗೆ ಶೇ 2 ಮತ್ತು ಹೋಟೆಲುಗಳಿಗೆ ಶೇ 5ರಷ್ಟು ತೆರಿಗೆ ಅನ್ವಯವಾಗುತ್ತದೆ. ಆದರೆ ಸೇವೆ ಒದಗಿಸುವವರು ರಾಜಿ ತೆರಿಗೆ ಪದ್ಧತಿ ವ್ಯಾಪ್ತಿಗೆ ಬರುವುದಿಲ್ಲ. *ಟ್ರಾಲಿಂಗ್ ಫಿಶಿಂಗ್* ಎಂದರೆ ಸಮುದ್ರದ ತಳ ಭಾಗದಲ್ಲಿ ಎಲ್ಲ ಜಲಚರಗಳನ್ನೂ ಗುಡಿಸಿಕೊಂಡು ಬರುವ ಬೃಹತ್ ಮೀನುಗಾರಿಕೆ. ಇಸ್ರೋ ಸಂಸ್ಥೆ ಸ್ಯಾಟಲೈಟ್ ಮೂಲಕ ಸಮುದ್ರದ ನೀರಿನ ಉಷ್ಣತೆಯನ್ನು ಗ್ರಹಿಸಿ ಮೀನುಗಳ ಇರುವಿಕೆಯನ್ನೂ ಸೂಚಿಸುವುದರಿಂದ ಟ್ರಾಲಿಂಗ್ ಫಿಶಿಂಗ್ ಈಗ ಶೀಘ್ರ ಮತ್ತು ಲಾಭದಾಯಕ. *ಫುಟ್ಬಾಲ್ ವಿಶ್ವಕಪ್* ಫುಟ್ಬಾಲ್ ವಿಶ್ವಕಪ್ ಅನ್ನು ಈಈಂ ಆಯೋಜಿಸಿದೆ (ಇಂಟನ್ಯರ್ಾಷನಲ್ ಫುಟ್ಬಾಲ್ ಅಸೋಸಿಯೇಶನ್ ಫೆಡರೇಶನ್). ವಿಶ್ವ ಕಪ್ ಅನ್ನು *ಜುಲ್ಸ್ ರಿಮೆಟ್ ಕಪ್* ಎಂದು ಕರೆಯಲಾಗುತ್ತದೆ, ಇದನ್ನು ಫಿಫಾ ಅಧ್ಯಕ್ಷ ಜೂಲ್ಸ್ ರಿಮೆಟ್ ಹೆಸರಿನ ಹೆಸರಿಡಲಾಗಿದೆ. ಮೊದಲ ಫುಟ್ಬಾಲ್ ವಿಶ್ವ ಕಪ್ ಅನ್ನು 1930 ರಲ್ಲಿ ಉರುಗ್ವೆಯವರು ಆಯೋಜಿಸಲಾಗಿತ್ತು 1942 ಮತ್ತು 1946 ರಲ್ಲಿ, ಮಹಾಯುದ್ಧದ ರ ಕಾರಣ ಫುಟ್ಬಾಲ್ ವಿಶ್ವ ಕಪ್ ಆಡಲಿಲ್ಲ. ಬ್ರೆಜಿಲ್ನಲ್ಲಿ ನಡೆಯುವ 20 ನೇ ಫಿಫಾ ವಿಶ್ವಕಪ್, ಜರ್ಮನಿಯು 1-0 ಗೋಲು ಕೊರತೆಯೊಂದಿಗೆ ಅಜರ್ೆಂಟೈನಾವನ್ನು ಸೋಲಿಸಿತು ಇಲ್ಲಿಯವರೆಗೆ ಪ್ರತಿ ವಿಶ್ವಕಪ್ನಲ್ಲಿ ಭಾಗವಹಿಸಿದ ಏಕೈಕ ರಾಷ್ಟ್ರವೆಂದರೆ ಬ್ರೆಜಿಲ್. 2018 ಮತ್ತು 2022 ರ ಫುಟ್ಬಾಲ್ ವಿಶ್ವ ಕಪ್ ರಷ್ಯಾ ಮತ್ತು ಕತಾರ್ ನಲ್ಲಿ ನಡೆಯಲಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries