HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಶ್ರೀ ವೆಂಕಟರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ತರಬೇತಿ ಕೇಂದ್ರ ದ್ವಿತೀಯ ವಾಷರ್ಿಕೋತ್ಸವ ಕಾಸರಗೋಡು: ಗಂಡುಕಲೆ ಎಂದೇ ಪ್ರಸಿದ್ಧವಾಗಿರುವ ಯಕ್ಷಗಾನ ಕಲೆಯು ನಿಂತ ನೀರಲ್ಲ. ಅದು ಕಾಲದೊಂದಿಗೆ ತನ್ನ ಇರವನ್ನು ಪ್ರತಿಪಾದಿಸುತ್ತಾ ಬೆಳೆದು ಬಂದಿದೆ. ಸಾಮಾಜಿಕ ಬದಲಾವಣೆಗಳು ಯಕ್ಷಗಾನದ ಸಾಂಪ್ರದಾಯಿಕ ಚೌಕಟ್ಟಿನ ಮೇಲೆ ಪರಿಣಾಮ ಬೀರಿದೆಯಾದರೂ ತನ್ನತನವನ್ನು ಉಳಿಸಿಕೊಳ್ಳುವಲ್ಲಿ ಈ ಕಲೆಯು ಯಶಸ್ವಿಯಾಗಿದೆ. ವೇಷಭೂಷಣ, ರಂಗಸಜ್ಜಿಕೆಗಳು, ಮಾತಿನ ಶೈಲಿಯಲ್ಲಿ ಉಂಟಾದ ಬೆಳವಣಿಗೆಗಳು ತನ್ನ ಸಾಂಪ್ರದಾಯಿಕ ಸೊಗಡಿನಿಂದ ಯಕ್ಷಗಾನವನ್ನು ಹೊರಗೆಳೆಯುವಲ್ಲಿ ಸಫಲವಾಗಲಿಲ್ಲ. ಇದಕ್ಕೆ ಕಾರಣ ಯಕ್ಷಗಾನ ಕಲಾವಿದರ ಕಲೆಯ ಮೇಲಿನ ಪೂಜನೀಯ ಭಾವನೆ. ಜನರಲ್ಲಿ ಯಕ್ಷಗಾನದ ಮೇಲೆ ಒಲವು ಹಾಗೂ ಆಸಕ್ತಿ ಇನ್ನೂ ಕಡಿಮೆಯಾಗಿಲ್ಲ ಎಂಬುದಕ್ಕೆ ಅಲ್ಲಲ್ಲಿ ಕಂಡುಬರುವ ಯಕ್ಷಗಾನ ತರಬೇತಿ ಕೇಂದ್ರಗಳು ಹಾಗೂ ಅಲ್ಲಿ ಯಕ್ಷಗಾನವನ್ನು ಆಸಕ್ತಿಯಿಂದ ಕಲಿಯುವ ಪುಟಾಣಿಗಳೇ ಸಾಕ್ಷಿ. ಕಾಸರಗೋಡಿನ ಯಕ್ಷಪ್ರೇಮಿಗಳಿಗೆ ವರದಾನವಾಗಿ ಉಚಿತ ಯಕ್ಷಗಾನ ತರಬೇತಿಯು ಕಾಸರಗೋಡು ಶ್ರೀ ವೆಂಕಟರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿದೆ. ಯಕ್ಷಗಾನವೆಂಬ ಕಾಸರಗೋಡಿನ ಹೆಮ್ಮೆಯ ಕಲೆಯನ್ನು ಪೋಷಿಸುವ ಹಾಗೂ ಮುಂದಿನ ತಲೆಮಾರಿಗೆ ತಿಳಿಯಪಡಿಸುವ ಕಾರ್ಯವು ಇಲ್ಲಿ ನಡೆಯುತ್ತಿದೆ. ಯಕ್ಷಗಾನ ಕಲಾವಿದ ಕೆ.ಎನ್.ವೆಂಕಟರಮಣ ಹೊಳ್ಳ ಕಾಸರಗೋಡು ಅವರ ಮುಂದಾಳುತ್ವದಲ್ಲಿ ತಂತ್ರಿವರ್ಯರಾದ ಶ್ರೀ ವಿಷ್ಣು ಅಸ್ರ ಅವರ ದಿವ್ಯಹಸ್ತದಿಂದ ದೀಪಪ್ರಜ್ವಲನೆಗೊಂಡು ಅವರ ಆಶೀವರ್ಾದಿಂದ ಪ್ರಾರಂಭವಾಗಿ ಮುನ್ನಡೆಯುತ್ತಿರುವ ಈ ತರಬೇತಿ ಕೆಂದ್ರದಲ್ಲಿ ಹೆಸರಾಂತ ಯಕ್ಷಗಾನ ಕಲಾವಿದ ರಾಕೇಶ್ ರೈ ಅಡ್ಕ ತರಬೇತಿಯನ್ನು ನೀಡುತ್ತಿದ್ದಾರೆ. ಸುಮಾರು ಮೂವತ್ತಕ್ಕಿಂತಲೂ ಹೆಚ್ಚು ವಿದ್ಯಾಥರ್ಿಗಳು ಈ ಕಲೆಯನ್ನು ಆಸಕ್ತಿಯಿಂದ ಕಲಿಯುತ್ತಿದ್ದು ಈಗಾಗಲೇ ಹಲವಾರು ವೇದಿಕೆಗಳಲ್ಲಿ ತಮ್ಮ ಪ್ರತಿಭೆಯನ್ನೂ ಮೆರೆದಿದ್ದಾರೆ. ಶ್ರೀ ವೆಂಕಟರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ತರಬೇತಿ ಕೇಂದ್ರವು ತನ್ನ ದ್ವಿತೀಯ ವಾಷರ್ಿಕೋತ್ಸವದ ಸಂಭ್ರಮದಲ್ಲಿದೆ. ಈ ಸಂದರ್ಭದಲ್ಲಿ ಯಕ್ಷಗುರು ರಾಕೇಶ್ ರೈ ಅಡ್ಕ ಅವರ ನಿದರ್ೇಶನದಲ್ಲಿ `ಮಾ ನಿಷಾದ' ಎಂಬ ಯಕ್ಷಗಾನ ಪ್ರದರ್ಶನವು ಅಕ್ಟೋಬರ್ ತಿಂಗಳ 15ರಂದು ಆದಿತ್ಯವಾರ ಪೇಟೆ ಶ್ರೀ ವೆಂಕಟರಮಣ ದೇವಾಲಯದ ಸಭಾಂಗಣದಲ್ಲಿ ನಡೆಯಲಿರುವುದು. ಅಪರಾಹ್ನ 2 ಗಂಟೆಗೆ ಸಭಾಕಾರ್ಯಕ್ರಮ ಜರಗಲಿದ್ದು 2.30ರಿಂದ ತರಬೇತಿ ಕೇಂದ್ರದ ವಿದ್ಯಾಥರ್ಿಗಳಿಂದ ಯಕ್ಷಗಾನ ಪ್ರದರ್ಶನವು ಪ್ರಾರಂಭವಾಗುವುದು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀನಿವಾಸ ಬಳ್ಳಮಂಜ, ದೇವಿಪ್ರಸಾದ್ ಆಳ್ವ ತಲಪಾಡಿ, ಚೆಂಡೆಯಲ್ಲಿ ಗೋಪಾಲಕೃಷ್ಣ ನಾವಡ ಮಧೂರು ಹಾಗೂ ಮುರಾರಿ ಕಡಂಬಳಿತ್ತಾಯ, ಮದ್ದಳೆಯಲ್ಲಿ ನೆಕ್ಕರೆಮೂಲೆ ಗಣೇಶ್ ಭಟ್ ಮತ್ತು ಮುರಳಿ ಮಾಧವ ಹಾಗೂ ಚಕ್ರತಾಳದಲ್ಲಿ ಚಂದ್ರಮೋಹನ ಕೂಡ್ಲು ಸಹಕರಿಸಲಿದ್ದಾರೆ. ಮಾನಿಷಾದದ ಮುಮ್ಮೇಳದಲ್ಲಿ ಬ್ರಹ್ಮನಾಗಿ ಕು.ಸುರಭಿ, ದಕ್ಷನಾಗಿ ಕು.ಅನುಶ್ರೀ ಕೆ. ಹಾಗೂ ಮುರಳಿ ನಾವಡ ಮಧೂರು, ರೂಕ್ಷನ ಪಾತ್ರದಲ್ಲಿ ಪ್ರೀತಿ ಎಂ. ಹಾಗೂ ಶ್ರೀಶಾ ನಾವಡ ಬಂದ್ಯೋಡು ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ವಿಕ್ಷಿಪ್ತನಾಗಿ ಗೋಕುಲ್, ಶಿಷ್ಯರಾಗಿ ವೈಶಾಖ್, ಬಾಲಚಂದ್ರ, ರಮ್ಯ, ಶಿವಾಂಕ್, ಶೇಷಾದ್ರಿ, ನಿಖಿಲ್, ಹಿಮಜ ಹಾಗೂ ಸಂದೇಶ ಮಂದಾರ, ಪುಂಗವನ ಪಾತ್ರದಲ್ಲಿ ಕುಸುಮಾಕರ, ಬೇಟೆಗಾರರಾಗಿ ಸಮನ್ವಿತಾ ಗಣೇಶ್, ಕೃಷ್ಣ ಪ್ರಕಾಶ್ ನಾವಡ, ಜಯರಾಜ್ ಮುಂತಾದವರು ಕಾಣಿಸಿಕೊಳ್ಳುವರು. ಸೈರಿಣಿಯಾಗಿ ಪ್ರತಿಭಾವಂತ ಯಕ್ಷಗಾನ ಕಲಾವಿದೆ ಅನನ್ಯ ರೈ ಪಾತ್ರವಹಿಸಿದರೆ ವಾಲ್ಮೀಕಿಯಾಗಿ ಸಾವಿತ್ರಿ ಎಸ್ ರಾವ್, ಕ್ರೌಂಚ ಪಕ್ಷಿಗಳಾಗಿ ಸಮನ್ವಿತಾ ಹಾಗೂ ಕೌಶಿಕ್, ಬೇಟೆಗಾರನಾಗಿ ತಿರುಮಲೇಶ್ ಪಾತ್ರ ನಿರ್ವಹಿಸುವರು. `ದ್ರನ ಪಾತ್ರದಲ್ಲಿ ಕಾತರ್ಿಕ್ ಬಿ, ಮಡಿವಾಳನಾಗಿ ಸಂದೇಶ್, ಆತನ ಹೆಂಡತಿಯಾಗಿ ಸಂದೀಪ್ ಶೆಟ್ಟಿ ದೋಟ, ಶ್ರೀರಾಮನಾಗಿ ಯಕ್ಷಗಾನ ಕಲಾವಿದೆ ವೃಂದಾ ಕೊನ್ನಾರ್ ಕಾಣಿಸಿಕೊಳ್ಳಲಿದ್ದಾರೆ. ಕಾಸರಗೋಡಿನ ಪ್ರತಿಭಾವಂತ ಕಲಾವಿದೆ ಕು.ಮಹಿಮಾ ಎಸ್.ರಾವ್ ಸೀತೆಯ ಪಾತ್ರವನ್ನು ಹಾಗೂ ಗಡಿನಾಡಿನ ಅನು`ವೀ ಕಲಾವಿದೆಯಾಗಿರುವ ಕು.ಮೈತ್ರಿ `ಟ್ ಮವ್ವಾರ್ ಲಕ್ಷ್ಮಣನಾಗಿ ಯಕ್ಷಪ್ರೇಮಿಗಳ ಮನತಣಿಸಲಿರುವರು. ಯಕ್ಷರಂಗ ಕಂಡ ಅದ್ಭುತ ಕಲಾವಿದರಲ್ಲಿ ಒಬ್ಬರು ಯಕ್ಷಗುರು ರಾಕೇಶ್ ರೈ ಅಡ್ಕ. ತನ್ನ ಶ್ರದ್ಧೆ, ಆಸಕ್ತಿ ಹಾಗೂ ಕಠಿಣ ಪರಿಶ್ರಮದಿಂದ ಯಕ್ಷಗಾನರಂಗದಲ್ಲಿ ಖ್ಯಾತರಾದವರು. ಕಟೀಲು ಮೇಳದ ಕಲಾವಿದ. ಯಕ್ಷಗಾನ ನಾಟವೈ`ವದ ಮೂಲಕ ಪ್ರೇಕ್ಷಕರಿಗೆ ವಿಸ್ಮಯವನ್ನುಂಟುಮಾಡಿ ಅವರ ಅಭಿಮಾನವನ್ನು ಗಳಿಸಿಕೊಂಡಿದ್ದಾರೆ. ದೇಶ ವಿದೇಶಗಳಲ್ಲಿ ಯಕ್ಷಕಲೆಯ ಕಂಪನ್ನು ಪಸರಿಸುವುದರೊಂದಿಗೆ ತನ್ನ ಜ್ಞಾನವನ್ನು ಇತರರಿಗೂ ನೀಡಿ ಮುನ್ನಡೆಸುವ ಸಹೃದಯಿ. ನೂರಾರು ಶಿಷ್ಯರನ್ನು ಹೊಂದಿರುವ ಯಕ್ಷಗುರು. ಕಾಸರಗೋಡು ಸೇರಿದಂತೆ ಕನರ್ಾಟಕದ ಹತ್ತುಹಲವು ಕಡೆಗಳಲ್ಲಿ ಯಕ್ಷಗಾನ ತರಬೇತಿಯನ್ನು ನೀಡುತ್ತಿದ್ದಾರೆ. ಅವರು ಮುನ್ನಡೆಸುವ ತರಗತಿಗಳಲ್ಲಿ ದಿನದಿಂದ ದಿನಕ್ಕೆ ವಿದ್ಯಾಥರ್ಿಗಳ ಸಂಖ್ಯೆಯು ಗಣನೀಯವಾಗಿ ಹೆಚ್ಚಾಗುತ್ತಿರುವುದು ಕಂಡುಬರುತ್ತದೆ. ಇದಕ್ಕೆ ಕಾರಣ ರೈಗಳ ತರಗತಿಯಲ್ಲಿ ಕಂಡುಬರುವ ಶಿಸ್ತು ಹಾಗೂ ಹೆಜ್ಜೆಗಳ ದೃಢತೆ. ಇಂತಹ ಅಪ್ರತಿಮ ಅನುಭವೀ ಕಲಾವಿದ ಈ ತರಬೇತಿ ಕೇಂದ್ರದಲ್ಲಿ ಗುರುವಾಗಿರುವುದು ಇಲ್ಲಿನ ವಿದ್ಯಾಥರ್ಿಗಳ ಹಾಗೂ ಯಕ್ಷಪ್ರೇಮಿಗಳ ಭಾಗ್ಯ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries