ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 07, 2017
ಮಾದರಿಯಾದ ಶಿಕ್ಷಕರು-ಬಡ ವಿದ್ಯಾಥರ್ಿಗಳಿಗೆ ವಸ್ತ್ರದ ನೆರವಿನ ಹಸ್ತ
ಕುಂಬಳೆ: ಸರಕಾರ ಬಡ ವಿದ್ಯಾಥರ್ಿಗಳ ವಿದ್ಯಾಭ್ಯಾಸ ಸೌಕರ್ಯಕ್ಕೆ ನೆರವಿನ ಮಹಾಪೂರವನ್ನೇ ವ್ಯವಸ್ಥೆಗೊಳಿಸುವುದಾದರೂ ಕೆಲವು ಯೋಜನೆಗಳು ಅರ್ಥವಿಲ್ಲದೆ ಅಪರಿಪೂರ್ಣವಾಗಿ ಯಶಸ್ವಿಯಾಗದ ಉದಾಹರಣೆಗಳೂ ಇವೆ. ಈ ಪೈಕಿ ಶಾಲಾ ಬಡ ವಿದ್ಯಾಥರ್ಿಗಳಿಗೆ ಸರಕಾರ ಒದಗಿಸುವ ಶಾಲಾ ಉಚಿತ ಸಮವಸ್ತ್ರವೂ ಒಂದು.
ಶಾಲಾ ಸಮವಸ್ತ್ರವನ್ನು ಸರಕಾರ ಪೂರೈಸುತ್ತಿವೆಯಾದರೂ, ಲಭಿಸಿದ ಬಟ್ಟೆಯನ್ನು ಹೊಲಿಸಿ ಧರಿಸುವ ಆಥರ್ಿಕ ದೃಢತೆ ಇಲ್ಲದವರೂ ಸಮಾಜದಲ್ಲಿರುವರು. ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅತಿ ಬಡತನ ವಗ್ಧ ವಿದ್ಯಾಥರ್ಿಗಳಿದ್ದು, ಇವರಿಗೆ ಒದಗಿಸಿದ ಬಟ್ಟೆಗಳನ್ನು ಹೊಲಿಸುವಲ್ಲಿ ಸಂಕಷ್ಟವನ್ನು ಗಮನಿಸಿ, ಶಾಲಾ ಶಿಕ್ಷಕ ವೃಂದದವರೇ ಸಮವಸ್ತ್ರ ಹೊಲಿಸಿ ಮಾದರಿಯಾಗಿರುವುದು ಶ್ಲಾಘನೆಗೆ ಪಾತ್ರವಾಗಿದೆ.
ಶಾಲಾ ಅಸಂಬ್ಲಿಯಲ್ಲಿ ನಿರಂತರವಾಗಿ ಕೆಲವು ವಿದ್ಯಾಥರ್ಿಗಳು ಸಮವಸ್ತ್ರ ಧರಿಸದಿರುವುದನ್ನು ಗಮನಿಸಿ ಶಿಕ್ಷಕರು ಈ ಬಗ್ಗೆ ಅಂತಹ ವಿದ್ಯಾಥರ್ಿಗಳ ಬಗ್ಗೆ ಅಧ್ಯಯನ ನಡೆಸಿ ಅವರ ಸಮಸ್ಯೆಯನ್ನು ಮನಗಂಡು ಅಧ್ಯಾಪಕರೇ ಪರಸ್ಪರ ಕೈಜೋಡಿಸಿ ಸಮವಸ್ತ್ರ ತಯಾರಿಸಿ ಕೊಡುವ ನಿಧರ್ಾರ ಮಾಡಿದರು. ಮುಖ್ಯೋಪಾಧ್ಯಾಯ ಸಿ.ಮನೋಜ್ ಕುಮಾರ್, ಶಾಲಾ ನೌಕರ ಸಂಘದ ಕಾರ್ಯದಶರ್ಿ ಕೆ.ವಿ.ಶ್ರೀನಿವಾಸ್, ಶಿಕ್ಷಕರಾದ ಮಿಥುಲಾ, ರೀನಾ ಫಯಾಸ್ ನೇತೃತ್ವದಲ್ಲಿ ಸಮವಸ್ತ್ರ ಹೊಲಿಸಿ ಗುರುವಾರ ವಿತರಿಸಲಾಯಿತು. ಮಂಜೇಶ್ವರ ಬ್ಲಾಕ್ ಯೋಜನಾಧಿಕಾರಿ ವಿಜಯಕುಮಾರ್ ಶಿಕ್ಷಕರ ನೆರವಿನಿಂದ ಹೊಲಿಸಲಾದ ಸಮವಸ್ತ್ರಗಳನ್ನು ವಿತರಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ರಹಿಮಾನ್ ಮೀಪಿರಿ, ಪ್ರಭಾರ ಪ್ರಾಂಶುಪಾಲ ಟಿ.ವಿ.ರಜನಿ ಉಪಸ್ಥಿತರಿದ್ದು ಶುಭಹಾರೈಸಿದರು. 20 ಮಂದಿ ವಿದ್ಯಾಥರ್ಿಗಳಿಗೆ ಉಚಿತ ಸಮವಸ್ತ್ರ ಹೊಲಿಸಿ ಈ ಮೂಲಕ ನೀಡಲಾಯಿತು.