ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 11, 2017
ಭೂಸುಧಾರಣೆ ಮಸೂದೆಗೆ ಶೀಘ್ರ ಒಪ್ಪಿಗೆ
ನವದೆಹಲಿ: ಭೂ ಸುಧಾರಣೆ ಕಾಯ್ದೆ ಭಾಗವಾದ `ವಾಸಿಸುವವನೇ ಮನೆಯ ಒಡೆಯ' ಮಸೂದೆಗೆ ಶೀಘ್ರದಲ್ಲೇ ರಾಷ್ಟ್ರಪತಿಯ ಅಂಗೀಕಾರ ದೊರೆಯಲಿದೆ ಎಂದು ವಿಧಾನ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಹೇಳಿದರು.
ವಿಧಾನಸೌಧದ ವಜ್ರಮಹೋತ್ಸವ ಸಮಾರಂಭಕ್ಕೆ ಆಹ್ವಾನ ನೀಡಲು ಹೋದ ವೇಳೆ, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮಸೂದೆಗೆ ಅಂಗೀಕಾರ ನೀಡುವ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಖಾಸಗಿ ಹಾಗೂ ಸಕರ್ಾರಿ ಜಮೀನಿನಲ್ಲಿ ಮನೆ, ಗುಡಿಸಲು ನಿಮರ್ಿಸಿಕೊಂಡು ವಾಸಿಸುತ್ತಿರುವ ಲಂಬಾಣಿ, ಹಕ್ಕಿಪಿಕ್ಕಿ ಮತ್ತು ಬುಡಕಟ್ಟು ಸಮುದಾಯದ ಜನರಿಗೆ ಅನುಕೂಲ ಕಲ್ಪಿಸಲೆಂದೇ ವಿಧಾನಸಭೆಯಲ್ಲಿ ಸವರ್ಾನುಮತದೊಂದಿಗೆ ಮಸೂದೆ ಮಂಡಿಸಲಾಗಿದೆ. ರಾಷ್ಟ್ರಪತಿಯ ಅಂಗೀಕಾರ ದೊರೆತಲ್ಲಿ ಹಿಂದುಳಿದ, ಅಭಿವೃದ್ಧಿ ಕಾಣದ ಈ ಸಮುದಾಯದ ಜನತೆಗೆ ಸಾಕಷ್ಟು ನೆರವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು