ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 31, 2017
ಬದಿಯಡ್ಕ : ಪಳ್ಳತ್ತಡ್ಕ ಹವ್ಯಕ ವಲಯದ ಕೃಷಿವಿಭಾಗದ ನೇತೃತ್ವದಲ್ಲಿರುವ ದಂಬೆಮೂಲೆ `ಗೋಕುಲ' ಸಾವಯವ ಗೊಬ್ಬರ ತಯಾರಿಕಾ ಘಟಕಕ್ಕೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಮಕ್ಕಳು ಭೇಟಿಯಿತ್ತು ಸಂಪೂರ್ಣ ಮಾಹಿತಿಯನ್ನು ಕಲೆಹಾಕಿದರು.
ಈ ಸಂದರ್ಭದಲ್ಲಿ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ ನೆಕ್ಕರೆಕಳೆಯ ಮಕ್ಕಳಿಗೆ ಮಾಹಿತಿಯನ್ನು ನೀಡುತ್ತಾ ಸ್ವದೇಶೀ ಗೋತಳಿ ಹಾಗೂ ವಿದೇಶೀ ಗೋತಳಿಯ ವ್ಯತ್ಯಾಸಗಳು ಹಾಗೂ ದೇಶೀಯ ಗೋತಳಿಯ ಸಂವರ್ಧನೆಯ ಅವಶ್ಯಕತೆಯನ್ನು ವಿವರಿಸಿದರು. ಗೋಸಾಕಣೆಯಲ್ಲಿ ಆಥರ್ಿಕ ಸ್ವಾವಲಂಬನೆಯ ಬಗ್ಗೆ ಪ್ರಶ್ನೋತ್ತರದ ಮೂಲಕ ಮಕ್ಕಳಲ್ಲಿ ಕುತೂಹಲ ಮೂಡಿಸುವ ಪ್ರಯತ್ನ ಮಾಡಿದರು. 70ಶೇಕಡಾ ದೇಶೀಯ ತಳಿಯ ಸಗಣಿ, ಹೊಂಗೆ ಹಿಂಡಿ, ಕಹಿಬೇವು, ಶಿಲಾರಂಜಕಗಳನ್ನೊಳಗೊಂಡ, ಮಣ್ಣಿನ ಫಲವತ್ತತೆಯನ್ನು ಅಭಿವೃದ್ಧಿಪಡಿಸುವ ಅತ್ಯುತ್ತಮ ಸಾವಯವ ಗೊಬ್ಬರ ತಯಾರಿಯನ್ನು ವೀಕ್ಷಿಸಿದ ಮಕ್ಕಳಲ್ಲಿ ಸಂಚಾಲಕ ದಂಬೆಮೂಲೆ ನಾರಾಯಣ ಭಟ್ ಪ್ರಶ್ನೆಗಳನ್ನು ಕೇಳಿ ವಿಜೇತರಿಗೆ ಬಹುಮಾನವನ್ನು ವಿತರಿಸಿದರು. ಅಧ್ಯಾಪಕ ಪವನ್ ನಾಯಕ್, ನವ್ಯ ಕುಡುವ, ಸುಪ್ರೀತ ಎಂ ನೇತೃತ್ವ ವಹಿಸಿದರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಕಲಿಕೆಗೆ ಪೂರಕವಾದಂತಹ, ಮುಂದಿನ ಬದುಕಿಗೆ ಆವಶ್ಯವೂ ಆದಂತಹ ಇಂತಹ ಸಂದರ್ಶನಗಳಿಂದ ನಮ್ಮ ಜ್ಞಾನ ಸಂಪಾದನೆಯನ್ನು ಹೆಚ್ಚಿಸಿಕೊಳ್ಳೋಣ ಎಂದು ಹೇಳಿ, ಸಂಘಟಕರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಗೋವುಗಳಿಗೆ ಆರತಿಯನ್ನು ಬೆಳಗಿದ ಮಕ್ಕಳು ಅನುಭವವನ್ನು ಹಂಚಿಕೊಂಡರು.