ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 11, 2017
ಮುಳ್ಳೇರಿಯ : ಮುಳ್ಳೇರಿಯ ಹವ್ಯಕ ಮಂಡಲದ ಕುಂಬಳೆ ವಲಯದ ಮಾತೃವಿಭಾಗ ಪ್ರಮುಖರಾದ ಶಿವಕುಮಾರಿ ಕುಂಚಿನಡ್ಕ ಇವರ ಮನೆಯ ಪರಿಸರದಲ್ಲಿ ಬೆಳೆದಿದ್ದ ಹುಲ್ಲನ್ನು ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವುಗಳಿಗೆ ಮೇವಿನ ರೂಪದಲ್ಲಿ ನೀಡಲಾಯಿತು. ಮುಳ್ಳೇರಿಯ ಮಂಡಲದ ಮಾತೃವಿಭಾಗ ಪ್ರಧಾನರಾದ ಕುಸುಮ ಪೆಮರ್ುಖ ಮೇವು ಕೊಯ್ಲು ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಲಯ ಸೇವಾ ವಿಭಾಗ ಪ್ರಮುಖರಾದ ಸೂರ್ಯನಾರಾಯಣ ಬಿ ನೇತೃತ್ವದಲ್ಲಿ ಕುಂಬಳೆ, ಗುಂಪೆ, ಪಳ್ಳತ್ತಡ್ಕ ವಲಯಗಳ ಸೇವಾಬಿಂದುಗಳು, ಮಂಡಲ ವಿದ್ಯಾಥರ್ಿವಾಹಿನಿ ಪ್ರಧಾನ ಕೇಶವ ಪ್ರಸಾದ ಎಡೆಕ್ಕಾನ, ಕುಂಬಳೆ ವಲಯ ಅಧ್ಯಕ್ಷ ಬಾಲಕೃಷ್ಣ ಶರ್ಮ, ಕಾರ್ಯದಶರ್ಿ ಎಸ್. ಗೋಪಾಲಕೃಷ್ಣ ಭಟ್, ಘಟಕ ಪ್ರಮುಖರಾದ ಗುರುಮೂತರ್ಿ, ಮಹಾಬಲ ಶರ್ಮ, ಸಿ.ಎಚ್.ಗೋಪಾಲಕೃಷ್ಣ ಭಟ್, ಅನೀಶ ಹಿಳ್ಳೆಮನೆ, ಅನಿರುದ್ಧ, ವಿದ್ಯಾಕುಮಾರಿ ಪಳ್ಳತ್ತಡ್ಕ, ಪೆಮರ್ುಖ ಈಶ್ವರ ಭಟ್, ಜಯಶ್ರೀ ಮೈರ್ಕಳ, ಕಿರಣಾ ಮೂತರ್ಿ, ಸಾವಿತ್ರಿ ಅಮ್ಮ ಭಾಗವಹಿಸಿದ್ದರು.