ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 10, 2017
ಛಾಯಾಗ್ರಹಣವು ಪತ್ರಿಕೆಯ ಬೆನ್ನೆಲುಬು- ಅಖಿಲೇಶ್ ನಗುಮುಗಂ
ಬದಿಯಡ್ಕ: ಪತ್ರಿಕೆಗಳು ಉತ್ತಮ ಸಮಾಜದ ರೂಪಿಸುವಿಕೆಯಲ್ಲಿ ತನ್ನದೇ ಮಹತ್ತರ ಪಾತ್ರ ವಹಿಸಿವೆ. ಜನಸಾಮಾನ್ಯರ ಅಗತ್ಯ ಮತ್ತು ಅನಿವಾರ್ಯ ಬೇಡಿಕೆಗಳನ್ನು ಸರಕಾರ ಸಹಿತ ಅಧಿಕಾರಿ ವರ್ಗದ ಮುಂದಿಡುವ ಸಮೂಹ ಮಾಧ್ಯಮಗಳ ಜನಪರ ಕಾಳಜಿ ಪ್ರಜಾಪ್ರಭುತ್ವ ರಾಷ್ಟ್ರದ ಮೈಲುಗಲ್ಲುಗಳು ಎಂದು ಹಿರಿಯ ಆಂಗ್ಲ ಪತ್ರಕರ್ತ ಜೋಜರ್್ ಪೊಯ್ಕಲ್ (ಇಂಡಿಯನ್ ಎಕ್ಸ್ಪ್ರೆಸ್ ಪ್ರಿನ್ಸಿಪ್ಪಲ್ ಕರಸ್ಪೋಂಡೆಂಟ್) ಅಭಿಪ್ರಾಯ ವ್ಯಕ್ತಪಡಿಸಿದರು.
ಕೇರಳ ಕೇಂದ್ರೀಯ ವಿಶ್ವ ವಿದ್ಯಾನಿಲಯ ಪೆರಿಯದ ಸಾಮಾಜಿಕ ಅಧ್ಯಯನ ವಿಭಾಗವು ಬದಿಯಡ್ಕ ಪೆರಡಾಲ ಕೊರಗ ಕಾಲನಿಯಲ್ಲಿ ನಡೆಸುತ್ತಿರುವ ನಲಿಪುಗ ಕಲ್ಪುಗ ಸಪ್ತದಿನ ಶಿಬಿರದಲ್ಲಿ 'ಪತ್ರಿಕೆ ಹಾಗೂ ಪತ್ರಿಕಾ ಛಾಯಾಗ್ರಹಣ' ಎಂಬ ವಿಷಯದ ಕುರಿತು ಶಿಬಿರಾಥರ್ಿಗಳೊಂದಿಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಸಂವಾದದಲ್ಲಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು ಸಮೂಹ ಮಾಧ್ಯಮಗಳು ಪ್ರತಿಯೊಂದು ಕ್ಷೇತ್ರದಲ್ಲಿ ನಡೆಯುವ ಆಗುಹೋಗುಗಳನ್ನು ಕ್ಷಣಾರ್ಧದಲ್ಲಿ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ತಾಂತ್ರಿಕ ಬೆಳವಣಿಗೆಗಳು ಮಾಧ್ಯಮ ರಂಗದ ಬೆಳವಣಿಗೆಗೆ ವರದಾನವಾಗಿ ಪರಿಣಮಿಸಿದೆ. ಆಧುನೀಕರಣದ ಪ್ರಭಾವ ಪತ್ರಿಕಾರಂಗ ಹಾಗೂ ಇನ್ನಿತರ ಮಾಧ್ಯಮಗಳ ಮೇಲೆ ನಿಯಂತ್ರಣವನ್ನು ಸಾಧಿಸಿದೆಯಾದರೂ ಪತ್ರಿಕಾ ರಂಗವನ್ನು ಪೂರ್ಣವಾಗಿ ತನ್ನ ಹಿಡಿತದಲ್ಲಿರಿಸುವಲ್ಲಿ ಯಶಸ್ವಿಯಾಗಿಲ್ಲ ಎಂದು ಅವರು ತಿಳಿಸಿದರು. ತನ್ನ ಪ್ರತಿಬದ್ಧತೆಗಳ ನಡುವೆಯೂ ಸಾಮಾಜಿಕ ಬದಲಾವಣೆಗೆ ರಹದಾರಿಯಾಗುವ ಸಮೂಹ ಮಾಧ್ಯಮಗಳು ಸಾಮಾನ್ಯ ಜನರ ಜೀವನದ ಗತಿಯನ್ನು ಬದಲಾಯಿಸುವಲ್ಲಿ ಮಹತ್ತರವಾದ ಪಾತ್ರವನ್ನು ಕಾಯ್ದುಕೊಂಡಿದೆ ಎಂದು ತಿಳಿಸಿದ ಅವರು ಅಭಿವೃದ್ದಿ ಪತ್ರಿಕೋಧ್ಯಮ ಇನ್ನಷ್ಟು ಬಲಗೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಉಪಸ್ಥಿತರಿದ್ದ ಮಾಧ್ಯಮ ಛಾಯಾಗ್ರಾಹಕ ಅಖಿಲೇಶ್ ನಗುಮುಗಂ ಸಂವಾದದಲ್ಲಿ ಮಾತನಾಡಿ, ಛಾಯಾಗ್ರಹಣವು ಪತ್ರಿಕೆಯ ಬೆನ್ನೆಲುಬು. ಒಂದು ಪತ್ರಿಕೆಯಲ್ಲಿ ಅಕ್ಷರಗಳಿಗಿಂತ ವೇಗವಾಗಿ ವಾತರ್ೆಗಳನ್ನು ಗ್ರಹಿಸುವಲ್ಲಿ ಛಾಯಾಚಿತ್ರಗಳು ನೆರವಾಗುತ್ತವೆ. ಆದರೆ ಛಾಯಾಗ್ರಾಹಕ ಹಾಗೂ ಓದುಗ ಅಥವಾ ನೋಡುಗನ ಮನೋಭಾವ ಮತ್ತು ಒಂದು ಛಾಯಾಚಿತ್ರವನ್ನು ನೋಡಿ ಅಥರ್ೈಸಿಕೊಳ್ಳುವ ರೀತಿ ಬೇರೆ ಬೇರೆಯಾಗಿದ್ದಾಗ ಕೆಲವೊಮ್ಮೆ ಅದು ಚಚರ್ೆಗೆ, ಸಮಸ್ಯೆಗೆ ಹೇತುವಾಗುವುದನ್ನು ಛಾಯಾಗ್ರಾಹಕ ನೆನಪಲ್ಲಿರಿಸಬೇಕು ಎಂದು ತಿಳಿಸಿದರು. ಸುದ್ದಿಗಳಿಗೆ ಜೀವ ತುಂಬುವ ಛಾಯಾಚಿತ್ರಗ್ರಹಣ ಕಲಾವಂತಿಕೆಯಾಗಿದ್ದು, ಪ್ರತಿನಿತ್ಯದ ಕಲಿಕೆ ಮತ್ತು ಚಾಕಚಕ್ಯತೆಯ ಗ್ರಹಣ ತಪಸ್ಸಾಗಿ ಸ್ವೀಕರಿಸಿದಾಗ ಯಶ ಬೆಂಬತ್ತಿಬರುತ್ತದೆ ಎಂದು ತಿಳಿಸಿದರು.
ಪತ್ರಿಕಾಮಾಧ್ಯಮ ರಂಗದ ಸಿದ್ಧಾಂತ, ಸಾಧ್ಯತೆ, ಪ್ರತ್ಯೇಕತೆ, ಸಮಾಜದೊಂದಿಗಿನ ಬಾಂಧವ್ಯ ಮುಂತಾದ ವಿಷಯಗಳ ಕುರಿತಾಗಿ ಪ್ರಸ್ತುತ ಶಿಬಿರದಲ್ಲಿ ಚಚರ್ಿಸಲಾಯಿತು.ಶಿಬಿರಾಧಿಕಾರಿ ಡಾ. ಲಕ್ಷ್ಮೀ ಜಿ, ಸಹ ಪ್ರಾಧ್ಯಾಪಕ ಡಾ.ರಂಜಿತ್ ಪಿಳ್ಳೆ ಉಪಸ್ಥಿತರಿದ್ದರು.