ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 10, 2017
ಮಜೀರ್ಪಳ್ಳ-ಕೋಳ್ಯೂರು ರಸ್ತೆ ದುರಸ್ತಿಗಾಗಿ ಪಿಎಂಗೆ ದೂರು
ಪ್ರಧಾನಿ ಕಚೇರಿಯಿಂದ ಜಿಲ್ಲಾಧಿಕಾರಿಗೆ ನಿದರ್ೇಶ
ಮಂಜೇಶ್ವರ: ರಸ್ತೆಯ ಶೋಚನೀಯ ಸ್ಥಿತಿಗೆ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿ ದೈಗೋಳಿ ಬಳಿಯ ಬಲಿಪಗುಳಿ ನಿವಾಸಿಯೋರ್ವರು ಪ್ರಧಾನಮಂತ್ರಿಗೆ ಪತ್ರ ಬರೆದಿದ್ದು, ಅದಕ್ಕೆ ಪ್ರತ್ಯುತ್ತರವಾಗಿ ಕಾಸರಗೋಡು ಜಿಲ್ಲಾಧಿಕಾರಿಗೆ ಪ್ರಧಾನಮಂತ್ರಿ ಕಚೇರಿಯಿಂದ ನಿದರ್ೇಶನ ಬಂದಿದೆ.
ಮೀಂಜ ಗ್ರಾಮ ಪಂಚಾಯತು ವ್ಯಾಪ್ತಿಯ ಮಜೀರ್ಪಳ್ಳ ಜಂಕ್ಷನ್ನಿಂದ ಕೋಳ್ಯೂರು ವರೆಗಿನ ಲೋಕೋಪಯೋಗಿ ರಸ್ತೆಯಲ್ಲಿ ಸಂಚಾರ ಅಸಾಧ್ಯವಾಗಿದ್ದು, ಈ ಕುರಿತು ಬಲಿಪಗುಳಿ ನಿವಾಸಿ, ಕೂಲಿ ಕಾಮರ್ಿಕ ಜಯಪ್ರಕಾಶ್ (27) ಅವರು ಒಂದೂವರೆ ತಿಂಗಳ ಹಿಂದೆ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಪ್ರತ್ಯುತ್ತರವಾಗಿ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿತ್ತು. ಜಿಲ್ಲಾಧಿಕಾರಿ ಕಚೇರಿಯಿಂದ ಜಯಪ್ರಕಾಶ್ರಿಗೆ ಪ್ರಧಾನಮಂತ್ರಿಯ ನಿದರ್ೇಶ ಲಭಿಸಿದ ಬಗ್ಗೆ ತಿಳಿಸಲಾಗಿದೆ.
ಮಜೀರ್ಪಳ್ಳ ಜಂಕ್ಷನ್ನಿಂದ ಕೋಳ್ಯೂರಿಗೆ 3 ಕಿಲೋ ಮೀಟರ್ ದೂರವಿದ್ದು, ಈ ರಸ್ತೆಯ ಎರಡೂ ಕಡೆ ನೀರು ಕಟ್ಟಿ ನಿಲ್ಲುವಲ್ಲಿ ಕಾಂಕ್ರಿಟೀಕರಣ ನಡೆಸಲಾಗಿದೆ. ಆದರೆ ಉಳಿದ ಕಡೆಗಳಲ್ಲಿ ಸಂಚಾರವೇ ದುಸ್ತರವಾಗಿದೆ. ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನ, ಕೋಳ್ಯೂರು ಶಾಲೆಗೆ ತೆರಳುವವರ ಸಹಿತ ನೂರಾರು ಮಂದಿ ದಿನಂಪ್ರತಿ ಸಂಚರಿಸುವ ಈ ರಸ್ತೆಯ ದುಸ್ಥಿತಿ ಪರಿಹರಿಸಲು ಸ್ಥಳೀಯ ಜನಪ್ರತಿನಿಧಿಗಳು ಮುಂದಾಗದಿರುವುದರಿಂದ ಜಯಪ್ರಕಾಶ್ ಅವರು ಪ್ರಧಾನಿಗೆ ದೂರು ಕೊಟ್ಟಿದ್ದರು.
ಇನ್ನಾದರೂ ಈ ರಸ್ತೆಯು ಸಂಚಾರಯೋಗ್ಯಗೊಳ್ಳಬಹುದೇ ಎಂಬ ನಿರೀಕ್ಷೆ ಜನರಲ್ಲಿದೆ.