ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 20, 2017
ಮಂಜೇಶ್ವರ: ರಾಷ್ಟ್ರಕವಿ ಗೋವಿಂದ ಪೈ ನಿವಾಸವನ್ನು ನಿತ್ಯ ಸಾಂಸ್ಕೃತಿಕ ಕಲಾ ಕೇಂದ್ರವನ್ನಾಗಿಸಲು ಕೇರಳ, ಕನರ್ಾಟಕ ಸರಕಾರಗಳು ಮುಂದಾಗಬೇಕೆಂದು ಮಾಜಿ ಶಾಸಕ ನ್ಯಾಯವಾದಿ ಸಿ.ಎಚ್. ಕುಞಂಬು ಅಭಿಪ್ರಾಯಪಟ್ಟರು. ಮಂಜೇಶ್ವರದ ಕೀತರ್ಿಯನ್ನು ವಿಶ್ವಮಾನ್ಯಕ್ಕೆ ಏರಿಸಿದ ಮೇರು ಕವಿಯ ನಿವಾಸದಲ್ಲಿ ಪ್ರತಿನಿತ್ಯ ಎಂಬಂತೆ ಕಾರ್ಯಕ್ರಮಗಳು ನಡೆಯಬೇಕು. ಬಹುಭಾಷೆಗಳ ಪಾಂಡಿತ್ಯ ಹೊಂದಿ ಸಕಲ ಭಾಷೆಗಳನ್ನೂ ಗೌರವಿಸುತ್ತಿದ್ದ ಕವಿಯ ಮಂಟಪದಲ್ಲಿ ಎಲ್ಲ ಭಾಷೆಗಳ ಕಾರ್ಯಕ್ರಮಗಳಿಗೂ ಸ್ಥಾನ ಮಾನ ಸಿಗುವಂತಾಗಲಿ. ಇದಕ್ಕೆ ಸರ್ವರ ಬೆಂಬಲ ಅಗತ್ಯ ಎಂದು ಅವರು ಕರೆ ನೀಡಿದರು.
ಕೇರಳ ತುಳು ಅಕಾಡೆಮಿ, ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಸಮಿತಿ ಹಾಗೂ ಟ್ರಸ್ಟ್ಗಳ ಸಂಯುಕ್ತ ನೇತೃತ್ವದಲ್ಲಿ ಕವಿ ಮಂಟಪದಲ್ಲಿ ಎರಡು ದಿನಗಳ ಕಾಲ ಜರಗಿದ ದೀಪಾವಳಿ ಸಾಂಸ್ಕೃತಿಕ ಉತ್ಸವದ ದ್ವಿತೀಯ ದಿನವಾದ ಗುರುವಾರ ನಡೆದ "ದೀಪಾವಳಿಾಚರಣೆ ಮಹತ್ವ" ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಉತ್ಸವಾಚರಣೆಗಳು ಸೌಹಾರ್ದದ ಕೊಂಡಿಯಾಗಬೇಕು. ಜಾತಿ-ಧರ್ಮ-ಭಾಷೆಗಳ ಎಲ್ಲೆ ಮೀರಿ ಈ ರೀತಿಯ ಆಚರಣೆಗಳಲ್ಲಿ ಸರ್ವರೂ ಸಹೋದರತೆಯ ಭಾವದಿಂದ ಬೆರೆಯುವಾಗಲಷ್ಟೇ ನಾಡಿನ ಸಾಂಸ್ಕೃತಿಕ - ಸಾಮಾಜಿಕ ಉನ್ನತಿ ಸಾಧ್ಯವಾಗುವುದು. ಈ ನಿಟ್ಟಿನಲ್ಲಿ ಇಂಥಾ ಕಾರ್ಯಕ್ರಮಗಳು ಬಹಳ ಮಹತ್ವ ಹೊಂದಿದೆ ಎಂದು ಅವರು ಶ್ಲಾಘಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಹಿರಿಯ ಸಾಹಿತಿ, ಕಲಾವಿದ ಡಾ. ರಮಾನಂದ ಬನಾರಿ ಅವರು ಮಾತನಾಡಿ, ಆಧುನಿಕ ಭರಾಟೆಯ ಯುಗದಲ್ಲಿ ಗೋವಿಂದ ಪೈಗಳ ಬದುಕು - ಸಾಧನೆಯನ್ನು ನೆನಪಿಸಿ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅಭಿನಂದನೀಯ ಎಂದರು.
ಮಂಗಳೂರು ರಾಮಕೃಷ್ಣ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಕಿಶೋರ್ ಕುಮಾರ್ ರೈ ಅವರು "ದೀಪಾವಳಿ ಮಹತ್ವ" ಎಂಬ ವಿಷಯದಲ್ಲಿ ವಿಚಾರ ಮಂಡಿಸಿದರು. ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು, ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದಶರ್ಿ ಕೆ.ಆರ್. ಜಯಾನಂದ ಮೊದಲಾದವರು ಮಾತನಾಡಿದರು. ತುಳು ಅಕಾಡೆಮಿ ಸದಸ್ಯ ಎಂ. ಉಮೇಶ ಸಾಲಿಯಾನ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉತ್ಸವ - ಹಬ್ಬಾಚರಣೆಗಳಲ್ಲಿ ಸರ್ವರೂ ಜೊತೆಗೂಡಿದಾಗ ಮಾತ್ರವೇ ಕಾರ್ಯಕ್ರಮವು ಅರ್ಥಪೂರ್ಣಗುವುದು. ಈ ನಿಟ್ಟಿನಲ್ಲಿ ಕೇರಳ ತುಳು ಅಕಾಡೆಮಿಯು ಮುಂದಿನ ದಿನಗಳಲ್ಲಿ ವೈವಿಧ್ಯಪೂರ್ಣ ಸಾಂಸ್ಕೃತಿಕ ಉತ್ಸವಗಳನ್ನು ಹಮ್ಮಿಕೊಳ್ಳುವುದಾಗಿಯೂ, ಅಕಾಡೆಮಿಯನ್ನು ಕ್ರಿಯಾಶೀಲ ಅಧ್ಯಯನ ಕೇಂದ್ರವನ್ನಾಗಿ ಮಾರ್ಪಡಿಸುವುದಾಗಿಯೂ ಅವರು ಹೇಳಿದರು.
ಗಿಳಿವಿಂಡು ಯೋಜನೆಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕೆ, ಕಮಲಾಕ್ಷ ವಂದಿಸಿದರು. ಕನರ್ಾಟಕ ಜಾನಪದ ಪರಿಷತ್ತಿನ ಕೇರಳ ಘಟಕ ಕೋಶಾಧಿಕಾರಿ, ಪತ್ರಕರ್ತ ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು.