ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 10, 2017
ಕ್ಯಾಂಪ್ಕೋದಿಂದ ನೆರವು ಹಸ್ತಾಂತರ
ಬದಿಯಡ್ಕ: ಹೃದ್ರೋಗದಿಂದ ಬಳಲುತ್ತಿರುವ ಮುಗು ನಿವಾಸಿ ಮಹಾಲಿಂಗ ವಿ ಯವರಿಗೆ ನೀಚರ್ಾಲು ಕ್ಯಾಂಪ್ಕೋ ಶಾಖೆಯ ವತಿಯಿಂದ ಚಿಕಿತ್ಸಾ ಧನ ಸಹಾಯದ ನೆರವನ್ನು ಸೋಮವಾರ ನೀಚರ್ಾಲು ಕ್ಯಾಂಪ್ಕೋ ಶಾಖಾ ಪರಿಸರದಲ್ಲಿ ಸೋಮವಾರ ವಿತರಿಸಲಾಯಿತು.
ಕ್ಯಾಂಪ್ಕೋದ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ ಚಿಕಿತ್ಸಾ ನೆರವಿಗೆ 50 ಸಾವಿರ ರೂ.ಗಳನ್ನು ಮಹಾಲಿಂಗ ವಿ.ಯವರಿಗೆ ಹಸ್ತಾಂತರಿಸಿದರು. ಬಳಿಕ ಅವರು ಮಾತನಾಡಿ, ಕೃಷಿಕರ ಉತ್ಪನ್ನಗಳ ವ್ಯವಹಾರಕ್ಕೆ ಮಾತ್ರ ಕ್ಯಾಂಪ್ಕೋ ಸೀಮಿತವಾಗಿಲ್ಲ. ಅದು ಕೃಷಿ, ಕೃಷಿಕರ ಸಮಗ್ರ ಅಭಿವೃದ್ದಿಗೆ ವಿವಿಧ ಯೋಜನೆಗಳನ್ನು ನಿರ್ವಹಿಸುತ್ತಿದ್ದು, ಸದಸ್ಯ ಬೆಳೆಗಾರರ ನೋವು-ನಲಿವುಗಳಿಗೆ ಸ್ಪಂಧಿಸುವುದು ಎಂದು ತಿಳಿಸಿದರು.
ಕ್ಯಾಂಪ್ಕೋದ ಪದಾಧಿಕಾರಿಗಳಾದ ಸತೀಶ್ಚಂದ್ರ ಭಂಡಾರಿ ಕೋಳಾರು, ಕೆ.ಬಾಲಕೃಷ್ಣ ರೈ ಬಾನೊಟ್ಟು, ಪದ್ಮರಾಜ ಪಟ್ಟಾಜೆ, ಎಂ.ಕೆ.ಶಂಕರನಾರಾಯಣ ಭಟ್ ಕಿದೂರು, ಹಿರಿಯ ಪ್ರಬಂಧಕ ಬಾಬು ಎಂ, ವಿಭಾಗೀಯ ಪ್ರಬಂಧಕ ಮುರಳೀಧರ ಪಿ.ವಿ ಮೊದಲಾದವರು ಉಪಸ್ಥಿತರಿದ್ದರು. ಕ್ಯಾಂಪ್ಕೋದ ನೀಚರ್ಾಲು ಶಾಖಾ ಪ್ರಬಂಧಕ ಜೋಸೆಫ್ ಮ್ಯಾಥ್ಯು ಸ್ವಾಗತಿಸಿ, ವಂದಿಸಿದರು