ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 17, 2017
ಪ್ರಸಿದ್ದ ಕಾವೇರಿ ತೀರ್ಥ ಮಿಂದು ಪುನೀತರಾದ ಭಕ್ತರು- ನೂತನ ವ್ಯವಸ್ಥೆಗೆ ಶರಣಾದ ಭಕ್ತರು
ಕುಂಬಳೆ: ಕುಂಬಳೆ ಸೀಮೆಯ ಪ್ರಸಿದ್ದ ನಾಲ್ಕು ದೇವಾಲಯಗಳಲ್ಲಿ ಒಂದಾದ ಮುಜುಂಗಾವು(ಕಾವು)ಶ್ರೀಪಾರ್ಥಸಾರಥಿ ಶ್ರೀಕೃಷ್ಣ ದೇವಾಲಯದಲ್ಲಿ ತೀರ್ಥ ಅಮಾವಾಸ್ಯೆಯ ಭಾಗವಾಗಿ ಸಾವಿರಾರು ವರ್ಷಗಳಿಂದ ನಡೆದು ಬರುತ್ತಿರುವ ಕಾವೇರಿ ತೀರ್ಥ ಸ್ನಾನ ಮಂಗಳವಾರ ಸಹಸ್ರಾರು ಭಕ್ತರ ಸಾಂಪ್ರದಾಯಿಕ ಶ್ರದ್ದಾ ಭಕ್ತಿಯಿಂದ ನೆರವೇರಿತು.
ಮುಂಜಾನೆುಂದಲೇ ಭಕ್ತರು ಇಲ್ಲಿಗೆ ತಲುಪುತ್ತಿದ್ದು, ದೇವರಿಗೆ ಕಾವೇರಿ ತೀಥದಿಂದ ಅಭಿಷೇಕ ಮಾಡಿದ ಬಳಿಕ ತೀರ್ಥಸ್ನಾನ ಆರಂಭಗೊಂಡಿತು. ಕಾವೇರಿ ಸಂಕ್ರಮಣದಂದು ಪ್ರತಿವರ್ಷ ಇಲ್ಲಿ ತೀರ್ಥಸ್ನಾನ ನಡೆಯುತ್ತಿದೆ.
ಈ ವರ್ಷ ಸುಮಾರು 56 ಸಾವಿರಕ್ಕೂ ಮಿಕ್ಕಿದ ಕರಾವಳಿ ಜಿಲ್ಲೆಯಾದ್ಯಂತದ ತೌಳವ ಜನ ಸಹಿತ ಅನೇಕರು ಭಾಗವಹಿಸಿದರು. ಇಲ್ಲಿಗೆ ತಲುಪುವ ಭಕ್ತರಿಗೆ ಸಕಲ ವ್ಯವಸ್ಥೆಗಳನ್ನು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕುಂಬಳೆ ಸೀಮೆಯ ಮಾಯಿಪ್ಪಾಡಿ ಅರಸ ವಂಶಸ್ತರು ಸುಸೂತ್ರವಾಗಿ ನಿರ್ವಹಿಸಿದರು. ಕ್ಷೇತ್ರ ಸಮಿತಿ ಜೊತೆಗೆ ಪೊಲೀಸರು, ಅಗ್ನಿ ಶಾಮಕದಳ, ಸ್ವಯಂ ಸೇವಕರು, ಸ್ಥಳದಲ್ಲಿದ್ದರು. ಕಾಸರಗೋಡು, ಉಪ್ಪಳ, ಅಗ್ನಿಶಾಮಕದಳ ಹಾಗೂ ಮಹಿಳಾ, ಪುರುಷ ಪೊಲೀಸರು ಭದ್ರತೆಯ ಕಾರ್ಯ ನೋಡಿಕೊಂಡರು. ಅಗ್ನಿ ಶಾಮಕದಳದ ಲೈಫ್ ಜಾಕೆಟ್, ಡಿಂಗಿ ಬೋಟ್ ಸಹಿತ ಸಕಲ ಸಿದ್ಧತೆಯನ್ನು ಏರ್ಪಡಿಸಿತ್ತು. ಕನರ್ಾಟಕ ಸಹಿತ ವಿವಿೆಡೆಗಳಿಂದ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಹರಕೆಯ ರೂಪದಲ್ಲಿ ಪವಿತ್ರ ಕೆರೆಯಲ್ಲಿ ಸ್ನಾನಗೈದು ಪಾವನರಾದರು.
ಹೊಸ ವ್ಯವಸ್ಥೆಗೆ ಶರಣೆಂದ ಭಕ್ತರು:
ಶ್ರೀಕ್ಷೇತ್ರದ ಅಭಿವೃದ್ದಿ ಚಟುವಟಿಕೆಗಳ ರೂವಾರಿ ಮೂಡಕೋಣಮ್ಮೆ ಸುಬ್ರಾಯ ಭಟ್ ರವರು ಕಳೆದ ವರ್ಷದ ವರೆಗೆ ಶ್ರೀಕ್ಷೇತ್ರದ ಆಡಳಿತ ನಡೆಸಿದ್ದರು. ಆದರೆ ಕಳೆದ ಕೆಲವು ತಿಂಗಳುಗಳ ಹಿಂದೆ ಅವರು ಮೃತರಾದ ಕಾರಣ ಶ್ರೀಕ್ಷೇತ್ರದ ನಿರ್ವಹಣೆಯ ಹೊಣೆ ಮಾಯಿಪ್ಪಾಡಿ ಅರಮನೆಯ ಸುಪಧರ್ಿಗೆ ಒಳಪಟ್ಟಿತು. ಪ್ರಸುತ ಮಂಗಳವಾರ ನಡೆದ ಕಾವೇರಿ ಸ್ನಾನದ ಉತ್ಸವ ಅರಮನೆಯ ಪಾಲಿಗೆ ಮೊದಲ ಕಾರ್ಯಕ್ರಮ. ಅದರ ಭಾಗವಾಗಿ ಶ್ರೀಕ್ಷೇತ್ರದ ಕಾರ್ಯನಿರ್ವಹಣೆಯ ಸುಗಮಕ್ಕಾಗಿ ತೀರ್ಥ ಸ್ನಾನಕ್ಕೆ ರೂ.30 ಸೇವಾ ಶುಲ್ಕ ವಿಧಿಸಿದ್ದರು. ಇದು ಕೆಲವರ ಅವಕೃಪೆಗೆ ಕಾರಣವಾಗಿ ಮಂಗಳವಾರ ಇದರ ಪ್ರತಿಭಟನೆ ನಿರೀಕ್ಷಿಸಲಾಗಿತ್ತು. ಆದರೆ ಮಂಗಳವಾರದ ಪರ್ವ ದಿನ ಆಡಳಿತ ವರ್ಗ ಉತ್ತಮ ನಿರ್ವಹಣೆಯ ವ್ಯವಸ್ಥೆ ಕಲ್ಪಿಸಿರುವುದನ್ನು ಮನಗಂಡು ಭಕ್ತರು ಸಹಕರಿಸಿ, ವ್ಯವಸ್ಥೆಗೆ ಹೊಂದಿಕೊಮಡರು.
ಭಕ್ತರಿಗೆ 11.30 ರಿಂದ ಭೋಜನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಬಿಳ್ತಿಗೆ ಅನ್ನ, ಸಾರು, ಸಾಂಬಾರು, ಪಲ್ಯ, ಪಾಯಸದ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆಯಿತು. ಅಪರಾಹ್ನ 4 ಗಂಟೆಯ ವರೆಗೂ ಊಟದ ವ್ಯವಸ್ಥೆ ಏರ್ಪಡಿಸಲಾಗಿತ್ತು.