ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 15, 2017
`ಸ್ವಚ್ಛ ಭಾರತ' ಹಾಗೂ `ಗಿವ್ ಇಟ್ ಅಪ್'ಗೆ ಥೇಲರ್ ಪ್ರಶಂಸೆ
ದೆಹಲಿ: ಅರ್ಥಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಗೆ ಭಾಜನರಾದ ರಿಚಡರ್್ ಥೇಲರ್ ತಮ್ಮ ನಡ್ಜ್ ಸಿದ್ಧಾಂತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಗಿವ್ ಇಟ್ ಅಪ್ ಹಾಗೂ 'ಸ್ವಚ್ಛ ಭಾರತ ಅಭಿಯಾನಗಳನ್ನು ಉದಾಹರಿಸಿದ್ದಾರೆ.
ಆರೋಗ್ಯ, ಸಮೃದ್ಧಿ ಹಾಗೂ ಸಂತೋಷದ ಕುರಿತು ಬರೆದಿರುವ ನಡ್ಜ್ ಪುಸ್ತಕದಲ್ಲಿ ಥೇಲರ್ ಹಾಗೂ ಹಾರ್ವಡರ್್ ವಿವಿಯ ಕಾನೂನು ವಿಭಾಗದ ಪ್ರಾಂಶುಪಾಲ ಕಾಸ್ ಸನ್ಸ್ಟೀನ್ ನಾಗರಿಕರ ಸಾಮಾಜಿಕ ಬದುಕಿನ ಸುಧಾ ರಣೆಗೆ ಬೇಕಿರುವ ತೀಮರ್ಾನ ಗಳನ್ನು ತೆಗೆದುಕೊಳ್ಳಲು ಬೇಕಿರುವ ವಾತಾವರಣ ನಿಮರ್ಿಸುವ ಕುರಿತು ಬರೆದಿದ್ದಾರೆ.
ಸಾಮಾಜಿಕ ಬದಲಾವಣೆಗೆ ಪ್ರತಿಯೊಬ್ಬರ ಕೊಡುಗೆಯ ಮಹತ್ವ ಸಾರುವ ಎಲ್ಪಿಜಿ ಸಬ್ಸಿಡಿಯನ್ನು ಸ್ವಯಂಪ್ರೇರಿತವಾಗಿ ಬಿಟ್ಟು ಕೊಡುವ ಗಿವ್ ಇಟ್ ಅಪ್ ಹಾಗೂ ಸ್ವಚ್ಚ ಭಾರತ ಗಳಂಥ ಉದಾಹರಣೆ ನೀಡಲಾಗಿದೆ. ಗಿವ್ ಇಟ್ ಅಪ್ ಹಾಗೂ ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಳ್ಳಲು ಮೋದಿ, ಈ ಹಿಂದೆ ಯಾವ ಪ್ರಧಾನಿಯೂ ಮಾಡದ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಸ್ವಚ್ಛ ಭಾರತ ಅತ್ಯಂತ ದೊಡ್ಡ ಮಟ್ಟದಲ್ಲಿ ಜನತೆಗೆ ಉತ್ತೇಜನ ನೀಡಿದ್ದಾರೆ ಎಂದು ನೀತಿ ಆಯೋಗದ ಮಾಜಿ ಉಪ ಚೇರ್ಮನ್ ಅರವಿಂದ್ ಪನ ಗಾರಿಯಾ ಹೇಳಿದ್ದಾರೆ.
ಸಾಮಾಜಿಕ ಹಾಗೂ ಪರಿಸರಕ್ಕೆ ಸಂಬಂಧಪಟ್ಟ ಆದ್ಯತೆಗಳನ್ನು ಸರಕಾರ ಆಯ್ಕೆ ಮಾಡಿಕೊಂಡರೂ ತಮ್ಮ ಒಳಿತಿಗಾಗಿ ಖುದ್ದು ಪ್ರತಿಯೊಬ್ಬ ನಾಗರಿಕರೂ ಉತ್ತಮ ನಿಧರ್ಾರ ತೆಗೆದುಕೊಳ್ಳಬೇಕಿದೆ ಎಂದು ಥೇಲರ್ ಹೇಳಿದ್ದಾರೆ.