ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 07, 2017
ಸಂಪ್ರದಾಯ ಬದ್ಧತೆಯಿಂದ ಸಂಸ್ಕೃತಿಯ ಉಳಿವು - ಮನು ಪಣಿಕ್ಕರ್
ಬದಿಯಡ್ಕ; ಕಾಲ ಎಷ್ಟೇ ಬದಲಾದರೂ ನಾವು ಅನುಸರಿಸಿಕೊಂಡು ಬಂದಿರುವ ಆಚರಣೆಗಳಲ್ಲಿ ಭೂತಾರಾಧನೆ ಹಾಗೂ ದೈವಾರಾಧನೆ ಮೊದಲಾದ ನಮ್ಮ ವಿಶ್ವಾಸಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆಗುವುದೂ ಇಲ್ಲ. ನಮ್ಮ ಸಂಸ್ಕೃತಿ ಬಹಳ ವಿಶಿಷ್ಟ ಹಾಗೂ ಪವಿತ್ರವಾದುದು. ಇದನ್ನು ಎತ್ತಿಹಿಡಿಯುವಲ್ಲಿ ಹೊಸ ತಲೆಮಾರು ಕಟಿಬದ್ದರಾಗಬೇಕು ಎಂದು ಖ್ಯಾತ ದೈವ ಕಲಾವಿದ, ಕನರ್ಾಟಕ ಜಾನಪದ ಲೋಕ ಪ್ರಶಸ್ತಿ ಪಡೆದ ಮನುಪಣಿಕ್ಕರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪೆರಿಯ ಕೇಂದ್ರೀಯ ವಿಶ್ವವಿದ್ಯಾಲಯದ ಸಮಾಜ ಅಧ್ಯಯನ ವಿಭಾಗ ಬದಿಯಡ್ಕದಲ್ಲಿ ಹಮ್ಮಿಕೊಂಡಿರುವ "ನಲಿಪುಗ, ಕಲ್ಪುಗೊ" ಸಪ್ತದಿನ ಅಧ್ಯಯನ ಶಿಬಿರದಲ್ಲಿ ಗುರುವಾರ ಶಿಬಿರಾಥರ್ಿಗಳೊಂದಿಗೆ ವಿಶೇಷ ಸಂವಾದ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯರು ಅನುಸರಿಸಿಕೊಂಡು ಬಂದ ಅಲಿಖಿತ ನಿಯಮಗಳ ಒಳಮರ್ಮವನ್ನು ಅರಿತು ಅದನ್ನು ಪಾಲಿಸಬೇಕು. ಸಂಪ್ರದಾಯಬದ್ದವಾಗಿ ಬದುಕಿದಾಗ ಸಂಸ್ಕೃತಿ ಸಂಪ್ರದಾಯ ನಂಬಿಕೆ ವಿಶ್ವಾಸಗಳು ಉಳಿಯುತ್ತವೆ ಹಾಗೂ ಸಂರಕ್ಷಿಸಲ್ಪಡುತ್ತವೆ. ಆಗ ಮಾತ್ರ ಮುಂದಿನ ಜನಾಂಗಕ್ಕೂ ಈ ಆಚರಣೆಗಳ ಹಿಂದಿನ ಮಹತ್ವ ಹಾಗೂ ಅದನ್ನು ಮುನ್ನಡಿಸಿಕೊಂಡು ಹೋಗುವ ಅಗತ್ಯ ಮನವರಿಕೆಯಾಗುತ್ತದೆ ಎಂದು ಅವರು ತಿಳಿಸಿದರು.
ದೈವ ಕಲಾರೂಪದ ಪ್ರಸ್ತುತಿ ಹಾಗೂ ಪ್ರಾಧಾನ್ಯತೆಯ ಕುರಿತಾಗಿ ವ್ಯಗ್ಯಚಿತ್ರಕಾರರಾದ ವಿರಾಜ್ ಅಡೂರು ಮಾತನಾಡಿದರು. ಅಧ್ಯಯನ ಶಿಬಿರದ ಅಧಿಕಾರಿ ಡಾ.ಲಕ್ಷ್ಮೀ ಉಪಸ್ಥಿತರಿದ್ದರು. ಕೇಂದ್ರೀಯ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ರಂಜಿತ್ ಪಿಳ್ಳೆ ಸ್ವಾಗತಿಸಿ, ವಿದ್ಯಾಥರ್ಿನಿ ಫಸಿದಾ ವಂದಿಸಿದರು.