ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 16, 2017
ಚೆನ್ನೈ-ಬೆಂಗಳೂರು-ಮೈಸೂರು ಕಾರಿಡಾಗರ್ೆ ಚೀನಾ ನಿರುತ್ಸಾಹ
ಮುಂಬಯಿ: ಚೆನ್ನೈ-ಬೆಂಗಳೂರು-ಮೈಸೂರು ನಡುವೆ ನಿಮರ್ಿಸಲು ಉದ್ದೇಶಿಸಲಿರುವ ಮಹತ್ವಾಕಾಂಕ್ಷಿ ಹೈಸ್ಪೀಡ್ ರೈಲ್ವೆ ಕಾರಿಡಾರ್ ಯೋಜನೆ ನೆನೆಗುದಿಗೆ ಬೀಳುವ ಹಾದಿಯಲ್ಲಿದೆ.
ಚೆನ್ನೈ-ಮೈಸೂರು ಸೇರಿದಂತೆ ದಕ್ಷಿಣ ಭಾರತದಲ್ಲಿ 9 ಹೈಸ್ಪೀಡ್ ಯೋಜನೆಗಳ ಅನುಷ್ಠಾನಕ್ಕೆ ಅತ್ಯುತ್ಸಾಹ ತೋರಿಸಿದ್ದ ಚೀನಾ ಇದೀಗ ನಿರುತ್ಸಾಹ ತೋರಿಸುತ್ತಿದೆ. ಸಾಧ್ಯಾಸಾಧ್ಯತೆ ವರದಿ ಸಿದ್ಧಪಡಿಸಿ ಒಂದು ವರ್ಷವೇ ಕಳೆದರೂ ಅದು ಮುಂದಿನ ಹೆಜ್ಜೆ ಇಟ್ಟಿಲ್ಲ. ಇದಕ್ಕೆ ಭಾರತ ಮತ್ತು ಚೀನಾದ ನಡುವೆ ಬಿಗಿಗೊಳ್ಳುತ್ತಿರುವ ಡೋಕ್ಲಾಂ ಗಡಿ ಬಿಕ್ಕಟ್ಟು ಕಾರಣವೆಂದು ಹೇಳಲಾಗುತ್ತಿದೆ.
ಒಂಬತ್ತು ಯೋಜನೆಗಳ ಪೈಕಿ ಒಂದಾದ ಚೆನ್ನೈ-ಬೆಂಗಳೂರು-ಮೈಸೂರು ಕಾರಿಡಾರ್ ಯೋಜನೆಗೆ ಸಂಬಂಧಿಸಿ ನಡೆಸಿದ ಯಾವುದೇ ಪತ್ರ ವ್ಯವಹಾರಕ್ಕೂ ಚೀನಾದ ಸಚಿವಾಲಯ ಸ್ಪಂದಿಸುತ್ತಿಲ್ಲ. 2016ರಲ್ಲಿ ಚೀನಾದ ರೈಲ್ವೆ ಎಯರ್ುಯಾನ್ ಎಂಜಿನಿಯರಿಂಗ್ ಗ್ರೂಪ್ ಕಂಪನಿ ಅಂತಿಮ ವರದಿಯನ್ನು ಸಲ್ಲಿಸಿದ್ದು, ಮುಂದಿನ ಸುತ್ತಿನಲ್ಲಿ ಮುಖಾಮುಖಿ ಮಾತುಕತೆ ನಡೆಸುವುದಾಗಿ ಹೇಳಿತ್ತು. ಆದರೆ, ಇದುವರೆಗೂ ದಿನಾಂಕ ನಿಗದಿ ಮಾಡಲಾಗಿಲ್ಲ ಎಂದು ಸಂಚಾರ ನಿದರ್ೇಶನಾಲಯದ ಪ್ರಕಟಣೆಯೊಂದು ತಿಳಿಸಿದೆ. ದಿಲ್ಲಿಯಲ್ಲಿರುವ ಚೀನಾ ರಾಯಭಾರ ಕಚೇರಿ ಮೂಲಕ ಸಂಪಕರ್ಿಸುವ ಪ್ರಯತ್ನವೂ ವಿಫಲಗೊಂಡಿದೆ.
ಡೋಕ್ಲಾಂ ಬಿಕ್ಕಟ್ಟು ಕಾರಣ:
ಜೂನ್ 16ರಿಂದ ಆಗಸ್ಟ್ 28ರವರೆಗಿನ ಚೀನಾದ ಮತ್ತು ಭಾರತದ ನಡುವೆ ಇದ್ದ ಡೋಕ್ಲಾಮ್ ಗಡಿ ಬಿಕ್ಕಟ್ಟು ಮತ್ತು ಈಗಲೂ ಇರುವ ಉದ್ವಿಗ್ನ ಸ್ಥಿತಿಗಳೇ ಯೋಜನೆ ವಿಳಂಬಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಯಾಕೆಂದರೆ, ಆರಂಭದಲ್ಲಿ ಚೀನಾ ಈ ಯೋಜನೆಯ ಬಗ್ಗೆ ಅಪಾರವಾದ ಆಸಕ್ತಿಯನ್ನು ತಳೆದಿತ್ತು ಮಾತ್ರವಲ್ಲ , ಒಂಬತ್ತು ಯೋಜನೆಗಳಿಗೆ ಸಹಯೋಗ ನೀಡುವುದಾಗಿ ಪ್ರಕಟಿಸಿತ್ತು.
ಚೀನಾ ಬೆಂಬಲ ಸಿಗದಿದ್ದರೆ ರೈಲ್ವೆಯಿಂದಲೇ ನಿರ್ವಹಣೆ?
ಈ ನಡುವೆ, ಒಂದೊಮ್ಮೆ ಚೀನಾ ಈ ಯೋಜನೆಯಿಂದ ಹಿಂದೆ ಸರಿದರೂ ಭಾರತವೇ ಯೋಜನೆಯನ್ನು ಪೂರ್ಣಗೊಳಿಸುವ ಬಗ್ಗೆ ವಿಶ್ವಾಸವನ್ನು ಹೊಂದಿದೆ. ಅಥವಾ ಬೇರೆ ದೇಶದ ಸಹಯೋಗವನ್ನು ಪಡೆಯುವ ಸಾಧ್ಯತೆಗಳಿವೆ. ಮುಂಬಯಿ-ಅಹಮದಾಬಾದ್ ಹೈ ಸ್ಪೀಡ್ ರೈಲು ಯೋಜನೆಯನ್ನು ಆರಂಭದಲ್ಲಿ ಚೀನಾವೇ ವಹಿಸಿಕೊಂಡಿತ್ತು. ಬಳಿಕ ಅದನ್ನು ಜಪಾನ್ಗೆ ವಹಿಸಲಾಯಿತು.
ಏನಿದು ಕಾರಿಡಾರ್?
ಚೆನ್ನೈ-ಬೆಂಗಳೂರು-ಮೈಸೂರು ಕಾರಿಡಾರ್ನ ಉದ್ದ: 482 ಕಿ.ಮೀ.
ಉಪಯೋಗ: ರೈಲ್ವೆ ಕಾರಿಡಾರ್ ನಿಮರ್ಾಣವಾದರೆ ರೈಲುಗಳ ವೇಗವನ್ನು ಈಗಿರುವ 80 ಕಿ.ಮೀ.ನಿಂದ 160 ಕಿ.ಮೀ.ಗೆ ಏರಿಸಬಹುದು.
ಸಮಯ ಉಳಿತಾಯ :
ಚೆನ್ನೈ-ಬೆಂಗಳೂರು ಪ್ರಯಾಣದ ಅವಧಿ 6 ಗಂಟೆಯಿಂದ 3 ಗಂಟೆಗೆ ಇಳಿಯಲಿದೆ. ಬೆಂಗಳೂರಿನಿಂದ ಮೈಸೂರಿಗೆ 75 ನಿಮಿಷದಲ್ಲಿ ತಲುಪಬಹುದು