ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 20, 2017
ಏಕದಿನ ಶ್ರೇಯಾಂಕ: ಕೊಹ್ಲಿಯನ್ನು ಹಿಂದಿಕ್ಕಿದ ಎಬಿಡಿ
ನವದೆಹಲಿ : ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಏಕದಿನ ಬ್ಯಾಟ್ಸ್ ಮನ್ ಗಳ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದ್ದು, ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್ ಮನ್ ಎಬಿಡಿ ವಿಲಿಯಸರ್್ ಮತ್ತೊಮ್ಮೆ ಅಗ್ರ ಸ್ಥಾನಕ್ಕೇರಿದ್ದಾರೆ.
ಎಬಿಡಿ ಏಕದಿನ ದಾಖಲೆ ಮುರಿದ ವಿರಾಟ್ ಕೊಹ್ಲಿ
ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ 104 ಎಸೆತಗಳಲ್ಲಿ 176 ರನ್ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿ ಐಸಿಸಿ ನಂ 1 ಬ್ಯಾಟ್ಸ್ ಮನ್ ಪಟ್ಟ ಅಲಂಕರಿಸಿದರು.
ಪ್ರಸ್ತುತ 879 ಪಾಯಿಂಟ್ ಹೊಂದಿರುವ ಎಬಿಡಿ ಅಗ್ರಸ್ಥಾನದಲ್ಲಿದ್ದು, 877 ಪಾಯಿಂಟ್ಸ್ ಗಳಿಸಿರುವ ಭಾರತದ ನಾಯಕ ವಿರಾಟ್ ಎರಡನೇ ಸ್ಥಾನದಲ್ಲಿದ್ದಾರೆ.
ಆಸೀಸ್ ನ ಡೇವಿಡ್ ವಾರ್ನರ್ (3), ಪಾಕಿಸ್ತಾನದ ಬಾಬರ್ ಅಜಮ್ (4), ಕ್ವಿಂಟನ್ ಡಿ ಕಾಕ್ ಹಾಗೂ ಇಂಗ್ಲೆಂಡ್ ನ ಜೋ ರೂಟ್ ಈ ಇಬ್ಬರು 5ನೇ ಸ್ಥಾನದಲ್ಲಿದ್ದಾರೆ.
ಇನ್ನು ಭಾರತದ ರೋಹಿತ್ ಶಮ್ 7 ಮತ್ತು ಮಹೇಂದ್ರ ಸಿಂಗ್ ದೋನಿ 12ನೇ ಸ್ಥಾನದಲ್ಲಿದ್ದಾರೆ. ಬಾಂಗ್ಲಾದೇಶ ವಿರುದ್ಧ 3 ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 2-0 ಗೆಲ್ಲುವ ಮೂಲಕ ಭಾರತವನ್ನು ಹಿಂದಿಕ್ಕಿ ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತ್ತು.