HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಮಂಜೇಶ್ವರ: ಮಹಾಕವಿ ಗೋವಿಂದ ಪೈಯವರ ಸಾಹಿತ್ತಿಕ ಕೊಡುಗೆ ಅಪಾರ ಮತ್ತು ಮಹತ್ತರ. ತುಳುನಾಡಿನ ಭಾಗವಾದ ಮಂಜೇಶ್ವರದಲ್ಲಿ ಸಾಂಸ್ಕೃತಿಕ ಹಾಗೂ ಸಾಹಿತ್ತಿಕ ರಂಗದ ಅಭ್ಯುದಯಕ್ಕೆ ಸ್ಮಾರಕ ಸಹಿತ ಕೇರಳ ತುಳು ಅಕಾಡೆಮಿ ಕಾರ್ಯ ಚಟುವಟಿಕೆಗಳು ಪ್ರೋತ್ಸಾಹ ನೀಡಲಿವೆ ಎಂದು ಕಾಸರಗೋಡು ಸಂಸದ ಪಿ.ಕರುಣಾಕರನ್ ಹೇಳಿದರು. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕೇಂದ್ರ ಹಾಗೂ ಕೇರಳ ತುಳು ಅಕಾಡೆಮಿ ಜಂಟಿ ಆಶ್ರಯದಲ್ಲಿ ಗಿಳಿವಿಂಡುವಿನಲ್ಲಿ ನಡೆದ ಎರಡು ದಿನಗಳ ದೀಪಾವಳಿ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸ್ಮಾರಕದಲ್ಲಿ ಪ್ರತಿನಿತ್ಯ ಕಾಲ ಪೋಷಣೆಯಂತಹ ಕಾರ್ಯಕ್ರಮ ನಡೆಯುತ್ತಿರಬೇಕು.ಮೂಲಭೂತ ಅಗತ್ಯತೆಗಳನ್ನು ತಕ್ಷಣವೆ ಅಧಿಕೃತರ ಗಮನಕ್ಕೆ ತಂದು ವರದಿ ರೂಪಿಸಿದಲ್ಲಿ ಹೊಸ ಯೋಜನೆಗಳನ್ನು ಪೂರೈಸಲು ಸಿದ್ಧ ಎಂದರು. ವಿದ್ಯಾಥರ್ಿ, ಕಲಾ ತಂಡಗಳಿಗೆ ಅಗತ್ಯವಾದ ಬಯಲುರಂಗ ಮಂದಿರದ ನಿಮರ್ಾಣ ಕಾರ್ಯಕ್ಕೆ ಸೂಕ್ತ ಮೊತ್ತವನ್ನು ಸಂಸದರ ನಿಧಿ ಮೂಲಕ ಮೀಸಲಿಡುವುದಾಗಿ ಹೇಳಿದರು. ಭಾರತ ಉತ್ಸವದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸ್ಮಾರಕಕೇಂದ್ರದಲ್ಲಿ ಆಯೋಜಿಸಲು ಕೇರಳ ಹಾಗೂ ಕನರ್ಾಟಕ ರಾಜ್ಯ ಸಂಸ್ಕೃತಿ ಇಲಾಖೆಗಳ ಮೂಲಕ ಸಹಾಯ ಪಡೆಯುವುದಾಗಿ ತಿಳಿಸಿದರು. ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ ಮೂಲಕ ರಕ್ಷಣೆ ಗಿಟ್ಟಿಸಿಕೊಡುವ ಕಾರ್ಯ ಮುನ್ನಡೆಯುತ್ತಿದೆ.ತುಳು ಭಾಷೆ ಅರಿಯದ ತಾನು ಪ್ರಸ್ತಾಪಿಸಿದ ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆಗಿಟ್ಟಿಸುವ ಕಾರ್ಯಕ್ಕೆ ದ.ಕ, ಉಡುಪಿ ಸಹಿತ ಒಟ್ಟು 21 ಮಂದಿ ಸಂಸದರು ಬೆಂಬಲ ಸೂಚಿಸಿದ್ದಾರೆ ಎಂದರು. ವರ್ಷಗಳ ಹಿಂದೆ ಬದಿಯಡ್ಕದ ಹೃದಯ ಭಾಗದಲ್ಲಿ ನಡೆದ ತುಳು ಸಾಂಸ್ಕೃತಿಕ ಯಾತ್ರೆಯಲ್ಲಿನ ಠರಾವು ಮಂಡನೆಯ ಮೂಲಕ ನಿಶ್ಚಯಿಸಿದ್ದ ತುಳು ಅಕಾಡೆಮಿ ಸ್ಥಾಪನೆಯು ಕೈಗೂಡಿದ್ದು, ತುಳು ಭವನ ನಿಮರ್ಾಣದ ರೂಪುರೇಶೆ ಸಿದ್ಧವಾಗಿದೆ. 21 ಲಕ್ಷ ರೂ. ಮೊತ್ತವನ್ನು ಕೇರಳ ಹಣಕಾಸು ಇಲಾಖೆಯ ಮೂಲಕ ಕಾಯ್ದಿರಿಸಲಾಗಿದೆ ಎಂದರು. ಜಿಲ್ಲಾಧಿಕಾರಿ ಅನುಪಸ್ಥಿತಿಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಮಾರಕ ಸಮಿತಿ ಸದಸ್ಯ, ಮಂಜೇಶ್ವರ ಬ್ಲಾ.ಪಂ ಸದಸ್ಯ ಕೆ.ಆರ್ಜಯಾನಂದ ಮಾತನಾಡಿ ಹಲವರ ಶ್ರಮದ ಫಲವಾಗಿ ಸ್ಮಾರಕ ಹಾಗೂ ಸ್ಮಾರಕದಲ್ಲಿನ ಕಾರ್ಯ ಚಟುವಟಿಕೆಗಳು ಸಾರ್ಥಕತೆಯತ್ತ ಮುನ್ನಡೆಯುತ್ತಿವೆ. ಧರ್ಮ ನಿರಪೇಕ್ಷತೆಯೊಂದಿಗೆ, ಕಾರ್ಯಕ್ರಮಗಳು ಫಲಕಾರಿಯಾಗಲು ಜನಸಹಭಾಗಿತ್ವ ಅತೀ ಮುಖ್ಯ ಎಂದರು. ಜನವರಿ ತಿಂಗಳಿನಲ್ಲಿ ಸ್ಮಾರಕ ಕೇಂದ್ರದಲ್ಲಿ ದಕ್ಷಿಣ ಭಾರತ ಬಹುಭಾಷಾ ಕವಿಗೋಷ್ಠಿಯನ್ನು ಆಯೋಜಿಸಲಾಗುವುದಾಗಿ ಹೇಳಿದರು. ಸಾಹಿತಿಕ, ಸಾಂಸ್ಕೃತಿಕ ಅಭಿರುಚಿಯುಳ್ಳ ಮಂಜೇಶ್ವರದ ಕವಿಸ್ಮಾರಕ ಸಮುಚ್ಚಯದಲ್ಲಿ ಭಾರತ ಉತ್ಸವನ್ನು ಆಯೋಜಿಸಲು ಪೂರ್ಣ ಸಹಕಾರ ನೀಡುವಂತೆ ಸಂಸದರಲ್ಲಿ ವಿಜ್ಞಾಪಿಸಿದರು. ಕಾರ್ಯಕ್ರಮದಲ್ಲಿ ಬ್ಲಾ.ಪಂ ಅಧ್ಯಕ್ಷ ಎ.ಕೆ.ಎಂ ಅಶ್ರಫ್, ಕೇರಳ ತುಳು ಅಕಾಡೆಮಿ ಕಾರ್ಯದಶರ್ಿ ಬಾಲಕೃಷ್ಣ ಶೆಟ್ಟಿಗಾರ್, ಸಾಹಿತಿ ಡಾ.ರಮಾನಂದ ಬನಾರಿ, ರಾಮಕೃಷ್ಣ ಕಡಂಬಾರ್ ಉಪಸ್ಥಿತರಿದ್ದರು. ನಾಟ್ಯ ನಿಲಯ ಬಾಲಕೃಷ್ಣ ಮಂಜೇಶ್ವರ ಬಳಗದಿಂದ ನೃತ್ಯ ಆಕರ್ಷಣಂ, ಬೆಂಗಳೂರು ರಂಗ ಪಯಣದಿಂದ ಗುಲಾಬಿ ಗ್ಯಾಂಗು ನಾಟಕ ಪ್ರದರ್ಶನಗೊಂಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries