HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಪೆರಡಾಲ ಸರಕಾರಿ ಶಾಲೆಯಲ್ಲಿ ದಸರಾ ನಾಡಹಬ್ಬ=ಹಬ್ಬಗಳನ್ನು ಆಚರಿಸುವ ಮೂಲಕ ವಿದ್ಯಾಥರ್ಿಗಳಲ್ಲಿ ಸದ್ಬುದ್ಧಿ -ಕಾಸರಗೋಡು ಚಿನ್ನಾ ಬದಿಯಡ್ಕ: ಹಬ್ಬಗಳನ್ನು ಶಾಲೆಗಳಲ್ಲಿ ಆಚರಿಸುವ ಮೂಲಕ ವಿದ್ಯಾಥರ್ಿಗಳಲ್ಲಿ ಸದ್ಬುದ್ಧಿಯನ್ನು ಪ್ರೇರೇಪಿಸಲು ಸಾಧ್ಯವಾಗುತ್ತದೆ ಎಂದು ಖ್ಯಾತ ನಟ, ನಿದರ್ೇಶಕ, ರಂಗಕಮರ್ಿ ಕಾಸರಗೋಡು ಚಿನ್ನಾ ಹೇಳಿದರು. ಪೆರಡಾಲ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ದಸರಾ ನಾಡಹಬ್ಬ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಹಬ್ಬವು ಹಬ್ಬದ ದಿನದಂದು ಮಾತ್ರವಲ್ಲ, ಪ್ರತಿದಿನವೂ ನಮಗೆ ನೆನಪಾಗಬೇಕು. ಪ್ರತಿಯೊಂದು ದಿನವೂ ನಮ್ಮ ಒಳಗಿನ ಮಹಿಷಾಸುರನನ್ನು ನಾಶ ಮಾಡಬೇಕು. ನಮ್ಮೊಳಗಿರುವ ರಾಕ್ಷಿಸೀ ಪ್ರವೃತ್ತಿಯನ್ನು ಕಳಕೊಳ್ಳುವ ಮೂಲಕ ಮನುಷ್ಯರಾಗಬೇಕು ಎಂದವರು ಹೇಳಿದರು. ರಂಗಚಿನ್ನಾರಿ ಸಂಸ್ಥೆಯ ವತಿಯಿಂದ ಶಾಲಾ ವಿದ್ಯಾಥರ್ಿಗಳಿಗಾಗಿ ಗೀತಗಾಯನ ತರಬೇತಿಯನ್ನು ಆಯೋಜಿಸುವ ಭರವಸೆ ನೀಡಿದರು. ಶಾಲೆಯ ಮುಖ್ಯೋಪಾಧ್ಯಾಯ ರಾಜಗೋಪಾಲ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಗ್ರಾಮ ಪಂಚಾಯತು ಸದಸ್ಯೆ ಶಾಂತ, ಶಾಲೆಯ ರಕ್ಷಕ ಶಿಕ್ಷಕ ಸಮಿತಿಯ ಅಧ್ಯಕ್ಷ ಅಬ್ದುಲ್ ರಹಮಾನ್ ಹಾಜಿ ಅನ್ನಡ್ಕ, ಉಪಾಧ್ಯಕ್ಷರಾದ ರಾಮ ಎಂ, ಶಾಲಾ ನೌಕರ ಸಂಘದ ಕಾರ್ಯದಶರ್ಿ ಚಂದ್ರಹಾಸ ನಂಬಿಯಾರ್, ಅಧ್ಯಾಪಕ ಚಂದ್ರಶೇಖರ ನಾಡಹಬ್ಬದ ಆಚರಣೆಯ ಮಹತ್ವವನ್ನು ವಿವರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸದ್ದಿಲ್ಲದ ಸಮಾಜ ಸೇವಕ, ಚಿನ್ಮಯ ವಿದ್ಯಾಲಯದ ನಿವೃತ್ತ ಶಿಕ್ಷಕ ಕಲಾವಿದ ಶಂಕರ ಅವರನ್ನು ಗೌರವಿಸಲಾಯಿತು. ಶಾಲೆಯಿಂದ ವಗರ್ಾವಣೆಗೊಂಡ ಸಂದರ್ಭದಲ್ಲಿ ರಾಜಿ ಫಿಲಿಫ್ ಟೀಚರ್ ವಿದ್ಯಾಥರ್ಿಗಳಿಗೆ ನೀಡಿದ ಐದು ಸಾವಿರ ರೂ. ಮೌಲ್ಯದ ಪುಸ್ತಕಗಳನ್ನು ಶಾಲೆಯ ಗ್ರಂಥಾಲಯಕ್ಕೆ ಹಸ್ತಾಂತರಿಸಲಾಯಿತು. ನಾಡಹಬ್ಬದ ಅಂಗವಾಗಿ ನಡೆಸಿದ ವಿವಿಧ ಸ್ಪಧರ್ೆಗಳಲ್ಲಿ ವಿಜೇತರಾದ ವಿದ್ಯಾಥರ್ಿಗಳಿಗೆ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಾಸರಗೋಡಿನ ಖ್ಕಾತ ಗಾಯಕ ಕಿಶೋರ್ ಪೆರ್ಲ ಅವರಿಂದ ರಾಗ ರಸ ಮಂಜರಿ ಹಾಗು ಶಾಲೆಯ ವಿದ್ಯಾಥರ್ಿಗಳಿಂದ ಜನಪದ ನೃತ್ಯ ನಡೆಯಿತು. ಗೀತಾ ಎಂ. ಭಟ್, ಸ್ಮಿತಾ ಸರಳಿ ಮೊದಲಾದವರು ಉಪಸ್ಥಿತರಿದ್ದರು. ದಿವ್ಯಗಂಗಾ ಪಿ. ಸ್ವಾಗತಿಸಿ, ಅಧ್ಯಾಪಕ ರಿಶಾಬ್ ಪಿ.ಎಂ.ಎ. ವಂದಿಸಿದರು. ಅಧ್ಯಾಪಕ ಶ್ರೀಧರ ಭಟ್ ಹಾಗು ಜಯಲತಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾಥರ್ಿನಿಯರು ಪ್ರಾರ್ಥನೆ ಹಾಡಿದರು. ವಿಶೇಷ ಆಕರ್ಷಣೆ : ಚಿನ್ಮಯ ವಿದ್ಯಾಲಯದ ನಿವೃತ್ತ ಡ್ರಾಯಿಂಗ್ ಶಿಕ್ಷಕ ಶಂಕರ ಎಸ್. ಅವರ ಕೈಚಳಕದಿಂದ ರೂಪುಗೊಂಡ ಮಹಿಷಾಸುರ ಹಾಗೂ ಮಹಿಷಾಸುರ ಮದರ್ಿನಿ ಕಾರ್ಯಕ್ರಮದ ವಿಶೇಷ ಆಕರ್ಷಣೆಯ ಕೇಂದ್ರವಾಗಿದ್ದರು. ವಿದ್ಯಾಥರ್ಿನಿ ಸುಮಲತಾ ಮಹಿಷಾಸುರ ಮದರ್ಿನಿಯಾಗಿಯೂ ವಿದ್ಯಾಥರ್ಿ ಮಧುಕಾಂತ್ ಮಹಿಷಾಸುರನಾಗಿಯೂ ಕಾಣಿಸಿಕೊಂಡರು. ನಾಡಗೀತೆಯೊಂದಿಗೆ ಆರಂಭಗೊಂಡ ರಾಗರಸ ಮಂಜರಿ ಕೇಳುಗರನ್ನು ಮಂತ್ರಮುಗ್ಧಗೊಳಿಸಿತು. ಕನ್ನಡದ ರಾಷ್ಟ್ರಕವಿಗಳ ರಚನೆಗಳನ್ನು ಸಂಯೋಜಿಸಿ ಹಾಡಿದ ಗಾಯಕರ ಕಂಠ ಸಿರಿ ಮನಸೂರೆಗೊಂಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries