ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 14, 2017
ಕಾಸರಗೋಡು: ದೀಪಾವಳಿಯಂದು ತುಳುನಾಡ ಬಲಿಯೇಂದ್ರ ಪರ್ಬ ಆಚರಿಸುವ ಬಗ್ಗೆ ಚಚರ್ಿಸಲು ನಾಗರಿಕರ ಸಮಾಲೋಚನಾ ಸಭೆ ಬದಿಯಡ್ಕದಲ್ಲಿ ಇತ್ತೀಚೆಗೆ ನಡೆಯಿತು. ಲಕ್ಷ್ಮಣ ಪ್ರಭು ಕರಿಂಬಿಲ ಅವರು ಅಧ್ಯಕ್ಷತೆ ವಹಿಸಿದ್ದರು. ಡಾ. ಬೇ.ಸೀ ಗೋಪಾಲಕೃಷ್ಣ ಭಟ್, ಸುಂದರ ಬಾರಡ್ಕ, ಬಾಲಕೃಷ್ಣ ಅಚ್ಚಾಯಿ, ಡಾ. ನರೇಶ್ ಮುಳ್ಳೇರಿಯಾ, ಶ್ರೀಶ ಕುಮಾರ ಪಂಜಿತ್ತಡ್ಕ, ದಿನೇಶ್ ಬೊಳುಂಬು ಮೊದಲಾದವರು ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.
ಅಕ್ಟೋಬರ್ 18 ರಂದು ಬದಿಯಡ್ಕದಲ್ಲಿ ತುಳುನಾಡಿನ ಪರಂಪರಾಗತ ಪದ್ಧತಿಯಲ್ಲಿ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಾರ್ವಜನಿಕ ಬಲಿಯೇಂದ್ರ ಪರ್ಬ ಆಚರಿಸಲು ತೀಮರ್ಾನಿಸಲಾಯಿತು. ಬಲಿಯೇಂದ್ರ ಪರ್ಬದ ಯಶಸ್ಸಿಗೆ ಸರ್ವರ ಸಹಕಾರವನ್ನು ಕೋರಲಾಗಿದ್ದು ಆಸಕ್ತರೆಲ್ಲರೂ ಹಬ್ಬದಲ್ಲಿ ಮುಕ್ತವಾಗಿ ಪಾಲ್ಗೊಳ್ಳಬಹುದಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ 9633876833 ಅಥವಾ 9349749719 ದೂರವಾಣಿ ಸಂಖ್ಯೆಗಳಲ್ಲಿ ಸಂಪಕರ್ಿಸಬಹುದು ಎಂದು ಸಂಘಟಕರು ತಿಳಿಸಿರುವರು.