HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಸಂಚಾರಿ ಯಕ್ಷಗಾನ ತಂಡದ ವಿಶೇಷ ದೀಪಾವಳಿ ಪ್ರದರ್ಶನ. ಬದಿಯಡ್ಕ: ಕೊಲ್ಲಂಗಾನದ ಶ್ರೀದುಗರ್ಾಪರಮೇಶ್ವರಿ ಯಕ್ಷಗಾನ ತಂಡದವರಿಂದ ಅ.8 ರಿಂದ ವಿವಿಧೆಡೆಗಳಲ್ಲಾಗಿ ಸಂಚಾರಿ ಮನೆಮನೆ ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದು, ಬುಧವಾರ ಪುದುಕೋಳಿ ಸುಬ್ರಹ್ಮಣ್ಯ ಭಟ್ರ ಮನೆಯದಲ್ಲಿ ಯಕ್ಷಮಿತ್ರರು ಮಾನ್ಯ ಬಳಗದ ಸಹಯೋಗದಲ್ಲಿ ಒಂದು ಗಂಟೆಗಳ ದೀಪಾವಳಿ ವಿಶೇಷ ಯಕ್ಷಗಾನ ಪ್ರದರ್ಶನ ನಡೆಯಿತು. ಕಾರ್ಯಕ್ರಮವನ್ನು ದೀಪ ಪುದುಕೋಳಿ ಸುಬ್ರಹ್ಮಣ್ಯ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಶ್ವೇತಕುಮಾರ ಚರಿತ್ರೆಯ ಆಯ್ದ ಆಖ್ಯಾಯಿಕೆ ಪ್ರದರ್ಶನಗೊಂಡಿತು. ಹಿಮ್ಮೇಳದಲ್ಲಿ ಭಾಗವತರಾಗಿ ಚಂದ್ರಶೇಖರ ಪೆರಾಜೆ, ಚೆಂಡೆ-ಮದ್ದಳೆಯಲ್ಲಿ ಈಶ್ವರ ಮಲ್ಲ, ಉದಯ ಕಂಬಾರು, ಮುಮ್ಮೇಳದಲ್ಲಿ ಶ್ವೇತಕುಮಾರನಾಗಿ ಪ್ರದೀಪ ಮೂಡಬಿದ್ರೆ, ತ್ರೈಲೋಕ್ಯ ಸುಂದರಿಯಾಗಿ ಮಹೇಶ್ ಎಡನೀರು ಪಾತ್ರಗಳನ್ನು ಮನಮೋಹಕವಾಗಿ ತುಂಬಿದರು. ರಂಗಸಹಾಯಕರಾಗಿ ನಾರಾಯಣ ಉಳ್ಳೋಡಿ, ಸತೀಶ್ ನೀಚರ್ಾಲು ಸಹಕರಿಸಿದರು. ಖ್ಯಾತ ಕಲಾವಿದ ಶಬರೀಶ ಮಾನ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ಸಂಚಾರಿ ಯಕ್ಷಗಾನ ತಂಡ ಈಗಾಗಲೇ ಮಾನ್ಯ, ಚುಕ್ಕಿನಡ್ಕ, ಉಳ್ಳೋಡಿ, ಮುಂಡೋಡು, ಎಪರ್ೆಕಟ್ಟೆ, ತಲ್ಪನಾಜೆ ಪರಿಸರದ ಮನೆಗಳಲ್ಲಿ ಪ್ರದರ್ಶನ ನೀಡಿದ್ದು, ಅ.25ರ ತನಕ ಸರಣಿ ಕಾರ್ಯಕ್ರಮ ನಡೆಸಲಿದೆ. ದಿನವೊಂದಕ್ಕೆ ಸುಮಾರು 15 ರಿಂದ 20 ಮನೆಗಳಿಗೆ ತೆರಳಿ ಐದು-ಹತ್ತು ನಿಮಿಷಗಳ ಪ್ರದರ್ಶನ ನೀಡಲು ಸಾಧ್ಯವಾಗುತ್ತಿದ್ದು, ಪ್ರೀತ್ಯಾದಾರಗಳಿಂದ ಮನೆಯವರು ನೀಡುವ ಕಲಾಕಾಣಿಕೆ ಸ್ವೀಕರಿಸುವರು. ಬದಿಯಡ್ಕ-ನೀಚರ್ಾಲು-ಮಾನ್ಯ ಪರಿಸರದಲ್ಲಿ ತಂಡವೊಂದು ಇದೇ ಮೊತ್ತಮೊದಲ ಬಾರಿಗೆ ಇಂತಹ ಪ್ರದರ್ಶನ ನೀಡುತ್ತಿದ್ದು, ಎಲ್ಲರಿಂದ ಮುಕ್ತ ಪ್ರಶಂಸೆ ವ್ಯಕ್ತವಾಗಿದೆ. ಯುವ ಸಮೂಹ ಮತ್ತು ಆಧುನಿಕ ಕುಟುಂಬಗಳಿಗೆ ಯಕ್ಷಗಾನವನ್ನು ಮುಟ್ಟಿಸುವ ಯತ್ನದ ಭಾಗವಾಗಿ ಈ ವರ್ಷದಿಂದ ಸಂಚಾರಿ ಯಕ್ಷಗಾನ ತಂಡ ಮುನ್ನಡೆಸಲಾಗುತ್ತಿದೆ ಎಂದು ತಂಡದ ಸಂಚಾಲಕ ಶಬರೀಶ ಮಾನ್ಯ ವಿಜಯವಾಣಿಗೆ ತಿಳಿಸಿರುವರು. ಈ ಸಂದರ್ಭ ಯಕ್ಷಗಾನ ಪ್ರದರ್ಶನಕ್ಕೂ ಮೊದಲು ಯುವ ಸಾಹಿತಿ ಶಾಂತಾ ರವಿ ಕುಂಟಿನಿ ತಮ್ಮ ಸಾಹಿತ್ಯ ಕೃತಿಗಳ ಸಿಡಿ ಹೊತ್ತಗೆಯ ಬಗ್ಗೆ ಮಾತನಾಡಿದರು.ಬಳಿಕ ಸ್ವರಚಿತ ಕವಿತಾ ವಾಚನ-ಸಾಹಿತ್ಯ ಸಂವಾದ ನಡೆಸಿದರು. ಯಕ್ಷಮಿತ್ರರು ಮಾನ್ಯದ ವಿಜಯಕುಮಾರ್ ಮಾನ್ಯ, ವಿಷ್ಣುಮೂತರ್ಿ ಸೇವಾ ಸಮಿತಿಯ ಶ್ರೀಕೃಷ್ಣ ಭಟ್ ಪುದುಕೋಳಿ ಮೊದಲಾದವರು ಉಪಸ್ಥಿತರಿದ್ದರು.ಜ್ಯೋತಿಷಿ ಕೃಷ್ಣಮೂತರ್ಿ ಪುದುಕೋಳಿ ಸ್ವಾಗತಿಸಿ, ಪ್ರೊ.ಎ.ಶ್ರೀನಾಥ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries