ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 10, 2017
ಉಳಿಯದಲ್ಲಿ ಧನ್ವಂತರಿ ಜಯಂತಿ
ಮಧೂರು: ಉಳಿಯದಲ್ಲಿ ಅ.17 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಧನ್ವಂತರಿ ಜಯಂತಿ ನಡೆಯಲಿದೆ.
ಅಂದು ಬೆಳಗ್ಗೆ 6 ಗಂಟೆಗೆ ಗಣಪತಿ ಹೋಮ, ಪವಮಾನ ಅಭಿಷೇಕ, ಧನ್ವಂತರಿ ದೇವರ ಪೂಜೆ, ಧನ್ವಂತರಿ ಹೋಮ, 10 ರಿಂದ ಮೂರು ಭಜನಾ ತಂಡಗಳಿಂದ ಭಜನೆ, ಮಧ್ಯಾಹ್ನ 12 ಕ್ಕೆ ಮಧ್ಯಾಹ್ನ ಪೂಜೆ, 1 ರಿಂದ ವಿಟ್ಲ ತಂಡದಿಂದ ತಾಳಮದ್ದಳೆ, ಸಂಜೆ ಸಭಾ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಕೊಂಡೆವೂರಿನ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ಉಪಸ್ಥಿತರಿದ್ದು ಆಶೀವರ್ಚನ ನೀಡಲಿದ್ದಾರೆ. 4.30 ರಿಂದ ಉಳಿಯ ಸಂಘದ ಸದಸ್ಯರಿಂದ ತಾಳಮದ್ದಳೆ ಗದಾಪರ್ವ, ರಾತ್ರಿ 8 ಕ್ಕೆ ಮಹಾಪೂಜೆ ಜರಗಲಿದೆ.