ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 30, 2017
ಪ್ರತಿ ಮಣ್ಣಿನ ಕಣ ಕಣದಲ್ಲೂ ರಾಮ ನಾಮವು ಪ್ರತಿಧ್ವನಿಸಬೇಕು
ಪೆರ್ಲ: ವೇದರಾಶಿಗಳಿಂದ ಪರಿಪೂರ್ಣವಾದ ಈ ದೇಶದ ಪ್ರಬಲವಾದ ಎರಡು ಕೈಗಳು ರಾಮಾಯಣ ಮತ್ತು ಮಹಾಭಾರತವಾಗಿದೆ. ಈ ಬಲಿಷ್ಠ ಕೈಗಳಿಂದ ನಮ್ಮ ಭಾರತ ಸುಸ್ಥಿರವಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಪ್ರತಿ ಮನೆ ಮನೆಯಲ್ಲಿ ರಾಮಾಯಣ ಅನುರಣಿಸಬೇಕು, ಪ್ರತಿ ಮಣ್ಣಿನ ಕಣ ಕಣದಲ್ಲೂ ರಾಮ ನಾಮವು ಪ್ರತಿಧ್ವನಿಸಬೇಕು ಎಂಬ ಉದ್ದೇಶದಿಂದ ರಾಮಾಯಣವನ್ನು ಪಾರಾಯಣ ಮಾಡಬೇಕೆಂಬ ಆದೇಶವನ್ನು ನೀಡಿದರು ಎಂದು ವಿದ್ವಾನ್ ಕೇಕಣಾಜೆ ಕೇಶವ ಭಟ್ ನುಡಿದರು.
ಅವರು ಬಜಕೂಡ್ಲು ಅಮೃತಧಾರಾ ಗೋಶಾಲೆಯ `ಸಾಕೇತ' ಮಂಟಪದಲ್ಲಿ ಮುಳ್ಳೇರಿಯ ಹವ್ಯಕ ಮಂಡಲದ ನೇತೃತ್ವದಲ್ಲಿ ಕಳೆದ 9 ದಿನಗಳಿಂದ ನಡೆದುಬರುತ್ತಿರುವ ಶ್ರೀ ಮದ್ವಾಲ್ಮೀಕೀ ರಾಮಾಯಣ ಪಾರಾಯಣ ನವಾಹದ ಅಂಗವಾಗಿ ನಡೆದ ಶ್ರೀ ರಾಮ ಪಟ್ಟಾಭಿಷೇಕ ಮಹೋತ್ಸವದ ಧರ್ಮ ಸಭೆ ಯಲ್ಲಿ ಉಪನ್ಯಾಸವನ್ನು ನೀಡಿದರು.
ಪಾರಾಯಣದಿಂದ ದೇಶಕ್ಕೆ ಸುಖವಾಗಬೇಕು. ಸ್ವಸ್ಥ ದೇಶ, ಸ್ವಸ್ಥ ಗ್ರಾಮ, ಸ್ವಸ್ಥ ಕುಟುಂಬ ನಿಮರ್ಾಣವಾಗಬೇಕಾದರೆ ಸ್ವಸ್ಥ ವ್ಯಕ್ತಿಯ ನಿಮರ್ಾಣವಾಗಬೇಕು ಎಂಬುದೇ ಶ್ರೀ ಮದ್ವಾಲ್ಮೀಕಿ ರಾಮಾಯಣ ನವಾಹದ ಘನವಾದ ಉದ್ದೇಶವಾಗಿದೆ. ನಾವು ನಿತ್ಯ ಜೀವನದಲ್ಲಿ ಅನುಭವಿಸುವ ಸಮಸ್ಥ ದು:ಖಗಳಿಗೆ ಶ್ರೀ ಮದ್ವಾಲೀಕೀ ರಾಮಾಯಣದಲ್ಲಿ ಉತ್ತರವಿದೆ. ಸ್ವಸ್ಥ ಸಮಾಜ ನಿಮರ್ಾಣವಾಗ ಬೇಕಾದರೆ ಅಲ್ಲಿ ಸ್ತ್ರೀಯರು ಹಾಗೂ ಪುರುಷರು ಸಂಸ್ಕಾರವಂತರಾಗಿರಬೇಕು. ಎಲ್ಲಿ ರಾಮ ನಾಮ ಕೇಳುತ್ತದೆಯೋ ಅಲ್ಲಿ ನಮಗೆ ಜಯಪ್ರಾಪ್ತಿ ಎಂದರು.
ಮುಳ್ಳೇರಿಯ ಮಂಡಲ ಕಾರ್ಯದಶರ್ಿ ಬಾಲಸುಬ್ರಹ್ಮಣ್ಯ ಸರ್ಪಮಲೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಶ್ರೇಷ್ಠ ವೈದಿಕರ ನೇತೃತ್ವದಲ್ಲಿ ಬೆಳಗ್ಗೆ ಪಟ್ಟಾಭಿಷೇಕ ಯಜ್ಞ, ಪಟ್ಟಾಭಿಷೇಕ ಮಹೋತ್ಸವ ನಡೆಯಿತು. ರಾಜೋಪಚಾರ, ಅಷ್ಟಾವಧಾನ ಸೇವೆ, ವಿವಿಧ ವಲಯಗಳ, ಶ್ರೀ ಮಠದ ಅಂಗ ಸಂಸ್ಥೆಗಳಿಂದ ಹಾಗೂ ಅನೇಕ ಭಕ್ತರು ಶ್ರೀ ರಾಮನಿಗೆ ಕಪ್ಪಕಾಣಿಕೆಯನ್ನು ಸಮರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ರಾಮಾಯಣ ಪಾರಾಯಣ ಸಮಿತಿಯ ವತಿಯಿಂದ ಗೋಶಾಲೆಗೆ ಸಹಾಧನವನ್ನು ನೀಡಲಾಯಿತು.
ಬಜಕೂಡ್ಲು ಗೋಶಾಲೆಯ ಗೌರವಾಧ್ಯಕ್ಷ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ವೇದಮೂತರ್ಿ ಪಳ್ಳತ್ತಡ್ಕ ಪರಮೇಶ್ವರ ಭಟ್, ಮಹಾಮಂಡಲಾಧ್ಯಕ್ಷೆ ಈಶ್ವರಿ ಬೇರ್ಕಡವು, ಕಾರ್ಯದಶರ್ಿ ಹರಿಪ್ರಸಾದ ಪೆರಿಯಪ್ಪು, ಬಾಲಸುಬ್ರಹ್ಮಣ್ಯ ಭಟ್ ಬೆಂಗಳೂರು, ಗೋವಿಂದ ಬಳ್ಳಮೂಲೆ, ರಾಮಾಯಣ ನವಾಹ ಸಮಿತಿ ಅಧ್ಯಕ್ಷ ಬಿ.ಜಿ.ರಾಮ ಭಟ್, ಮುಳ್ಳೇರಿಯ ಮಂಡಲಾಧ್ಯಕ್ಷ ಪ್ರೊ.ಶ್ರೀಕೃಷ್ಣ ಭಟ್, ಕುಮಾರ ಸುಬ್ರಹ್ಮಣ್ಯ ಪೈಸಾರಿ, ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ, ನವನೀತ ಪ್ರಿಯ ಕೈಪಂಗಳ, ವೇದಮೂತರ್ಿ ಕೇಶವಪ್ರಸಾದ ಕೂಟೇಲು, ಮೊದಲಾದವರು ಮಾತನಾಡಿದರು.