ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 16, 2017
ಬದಿಯಡ್ಕದಲ್ಲಿ ತುಳುನಾಡ ಬಲಿಯೇಂದ್ರ ಹಬ್ಬ ಅ.18ಕ್ಕೆ
ಬದಿಯಡ್ಕ: ಸಂಸ್ಕೃತಿಪ್ರಿಯ ನಾಗರಿಕರ ಒಗ್ಗೂಡುವಿಕೆಯಿಂದ ಅಕ್ಟೋಬರ್ 18ರಂದು ಬುಧವಾರ ಬದಿಯಡ್ಕದಲ್ಲಿ ಸಾರ್ವಜನಿಕ ತುಳುನಾಡ ಬಲಿಯೇಂದ್ರ ಪರ್ಬವನ್ನು ಆಚರಿಸಲು ತೀಮರ್ಾನಿಸಲಾಗಿದೆ. ಕಾರ್ಯಕ್ರಮ ಸಂಜೆ ನಾಲ್ಕು ಗಂಟೆಗೆ ನವಜೀವನ ಹಿರಿಯ ಪ್ರೌಢಶಾಲೆಯ ಹಿಂಭಾಗದಲ್ಲಿರುವ ಮೈದಾನದಲ್ಲಿ ಜರುಗಲಿರುವುದು. ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ. ಎನ್. ಕೃಷ್ಣ ಭಟ್ ಸಮಾರಂಭಕ್ಕೆ ಚಾಲನೆ ನೀಡಲಿರುವರು. ಸಂಸ್ಕೃತಿ ಚಿಂತಕ ಗೋಪಾಲಕೃಷ್ಣ ವಾಂತಿಚ್ಚಾಲು ಬಲಿಯೇಂದ್ರ ಹಬ್ಬದ ಬಗ್ಗೆ ವಿಶೇಷೋಪನ್ಯಾಸ ನೀಡಲಿರುವರು. ಪರಂಪರಾಗತ ರೀತಿಯಲ್ಲಿ ಬಲಿಯೇಂದ್ರನ ಸ್ಥಾಪನೆ, ಬಲಿಯೇಂದ್ರನನ್ನು ಕರೆಯುವುದು ಹಾಗೂ ಹೂಹಾರಗಳ ಸಮರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾಥರ್ಿಗಳಿಂದ ಜಾನಪದ ವೈಭವ ಹಾಗೂ ವಿವಿಧ ತಂಡಗಳಿಂದ ಜಾನಪದ ಕುಣಿತ ಜರುಗಲಿರುವುದು. ಸಭಿಕರಿಗೆ ಪ್ರಸಾದರೂಪದಲ್ಲಿ ಸಿರಿ ಅವಲಕ್ಕಿ, ಪಾನಕ ವಿತರಿಸಲಾಗುವುದು. ಕಾರ್ಯಕ್ರಮವು ಹಣತೆಗಳ ಬೆಳಕಿನಲ್ಲಿ ನಡೆಯಲಿರುವುದು. ಜಾತಿ, ಮತ, ಭಾಷಾಭೇದವಿಲ್ಲದೆ ಎಲ್ಲ ಸಾರ್ವಜನಿಕರಿಗೆ ಹಬ್ಬದಲ್ಲಿ ಮುಕ್ತವಾಗಿ ಪಾಲ್ಗೊಳ್ಳಲು ಹಾಗೂ ಬಲಿಚಕ್ರವತರ್ಿಗೆ ಹೂ ಹಾರ ಅವಲಕ್ಕಿಗಳನ್ನು ಸಮಪರ್ಿಸಲು ಅವಕಾಶವಿದೆ. ಹಣತೆಗಳಿರುವವರು ಮನೆಯಿಂದ ಹಣತೆಗಳನ್ನು ತಂದು ದೀಪಾವಳಿ ಹಬ್ಬದಲ್ಲಿ ಉರಿಸಿ ಸಾಮೂಹಿಕ ಬೆಳಕಿನ ಆಚರಣೆಯಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸಲಾಗಿದೆ. ಊರ ಪರವೂರ ಮಹನೀಯರ ಪಾಲ್ಗೊಳ್ಳುವಿಕೆ, ಸಹಕಾರವನ್ನು ಸಂಘಟಕರು ಅಪೇಕ್ಷಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ದೂ.ಸಂ: 9633876833 ಅಥವಾ 9349749719 ಗಳಿಗೆ ಕರೆಮಾಡಬಹುದು.