ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 06, 2017
*ವಿಶ್ವ ಪ್ರಾಣಿ ದಿನ*
ವಿಶ್ವ ಪ್ರಾಣಿ ದಿನವು ಅಂತಾರಾಷ್ಟ್ರೀಯ ಜಾಗೃತ ದಿನವಾಗಿದೆ. ಮಾನವರಿಂದ ಪ್ರಾಣಿಗಳಿಗೆ ಉಂಟಾಗುವ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಈ ದಿನವನ್ನು ಆಚರಿಸಲಾಗುತ್ತದೆ. ಪ್ರಾಣಿಗಳನ್ನು ಮತ್ತು ಸಾಕು ಪ್ರಾಣಿಗಳನ್ನು ಜನರು ಕೆಟ್ಟ ಪರಿಸ್ಥಿಯಲ್ಲಿ ಇರಿಸಿಕೊಳ್ಳುವುದೂ ಅಲ್ಲದೆ ಅವುಗಳನ್ನು ನಿರ್ಲಕ್ಷಿಸುತ್ತಿದ್ದಾರೆ.
ಜರ್ಮನ್ ಯಹೂದಿ, ಲೇಖಕರಾದ *ಹೆನ್ರಿಕ್ ಝಿಮ್ಮರ್ಮನ್* ಅವರು ಪ್ರಾಣಿಗಳಿಗೆ ಮೀಸಲಾಗಿರುವ ದಿನವನ್ನು ಪ್ರಾರಂಭಿಸಬೇಕೆಂದು 1931ರಲ್ಲಿ ಫ್ಲಾರೆನ್ಸ್ನಲ್ಲಿ ನಡೆದ ಪರಿಸರ ವಿಜ್ಞಾನಿಗಳ ಸಮಾವೇಶದಲ್ಲಿ ಅಜರ್ಿಯೊಂದನ್ನು ಸಲ್ಲಿಸಿದ್ದರು. ಇವರು ಪ್ರಾಣಿಗಳ ಹಕ್ಕುಗಳಿಗಾಗಿ ಅನೇಕ ವರ್ಷ ಹೋರಾಡಿದರು. ಇವರ ಸಲಹೆಯ ಮೇರೆಗೆ ವಿಶ್ವ ಪ್ರಾಣಿ ದಿನವನ್ನು ಜಾರಿಗೆ ತರಲಾಯಿತು. ವಿಶ್ವ ಪ್ರಾಣಿ ದಿನದಂದು ಜಾಗತಿಕ ಆಧಾರದ ಮೇಲೆ ಪ್ರಾಣಿಗಳ ಹಕ್ಕುಗಳನ್ನು ಬೆಂಬಲಿಸಬೇಕು. ಅವುಗಳನ್ನು ಜೀವಿಗಳಂತೆ ಪರಿಗಣಿಸಬೇಕು. ಆಹಾರ ಉತ್ಪನ್ನವಾಗಿ ನೋಡಬಾರದು. ಅವುಗಳಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸುವುದು, ಸರಿಯಾಗಿ ಆಹಾರ ನೀಡುವುದು, ಜೀವಿಸಲು ಸಾಕಷ್ಟು ಸ್ಥಳಾವಕಾಶ ಕೊಡುವುದು ಹಾಗೂ ಪ್ರೀತಿಯನ್ನು ತೋರಿಸಬೇಕು ಎಂಬುದೇ ಈ ದಿನದ ಆಚರಣೆಯ ಉದ್ದೇಶವಾಗಿದೆ. ವಿಶ್ವ ಪ್ರಾಣಿ ದಿನವಾದ ಇಂದು ನೀವು ಪ್ರಾಣಿಗಳ ಮೇಲೆ ಕ್ರೂರವಾಗಿ ವತರ್ಿಸುವವರ ವಿರುದ್ಧ ಹೋರಾಡಬೇಕು