ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 29, 2017
ವೀರೇಂದ್ರ ಹೆಗ್ಗಡೆ ಕಾರ್ಯಗಳನ್ನು ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ
ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ಭಾನುವಾರ ಒಂದು ದಿನದ ಕನರ್ಾಟಕ ಪ್ರವಾಸ ಕೈಗೊಂಡಿದ್ದು ಧರ್ಮಸ್ಥಳದ ಉಜಿರೆಯಲ್ಲಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
: ಉಜಿರೆಗೆ ಆಗಮಿಸಿದ ನರೇಂದ್ರ ಮೋದಿ
ಭಾನುವಾರ ಬೆಳಿಗ್ಗೆ ದೆಹಲಿಯಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮೋದಿಗೆ ವಿವಿಧ ಮುಖಂಡರು ಸ್ವಾಗತ ನೀಡಿದರು. ಕನರ್ಾಟಕ ಸರಕಾರದ ಪರ ಸಚಿವ ಯು.ಟಿ ಖಾದರ್, ಕೇಂದ್ರ ಸಚಿವ ಅನಂತಕುಮಾರ್, ಡಿ.ಸದಾನಂದ ಗೌಡ ಮಾಜಿ ಸಚಿವ ನಾಗರಾಜ ಶೆಟ್ಟಿ, ಮೇಯರ್ ಕವಿತಾ ಸನಿಲ್ ಮೊದಲಾದವರು ಸ್ವಾಗತಿಸಿದರು.
ಬಳಿಕ ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳಕ್ಕೆ 10.45ಕ್ಕೆ ಆಗಮಿಸಿ ಶ್ರೀದೇವರ ದರ್ಶನಗೈದರು. ಈ ಸಂದರ್ಭ ಡಾ.ವೀರೇಂದ್ರ ಹೆಗ್ಗಡೆ, ಮಾಜಿ ಮುಖ್ಯಂತ್ರಿ ಬಿ.ಎಸ್ ಯಡಿಯೂರಪ್ಪ, ಸಚಿವ ಅನಂತಕುಮಾರ್, ಸಹಿತ ಗಣ್ಯರು ಉಪಸ್ಥಿತರಿದ್ದರು. ದೇವಳದ ಒಳಗೆ ಶಟರ್್, ಬನಿಯನ್ ಬಿಚ್ಚಿ ಸಾಂಪ್ರದಾಯಿಕ ಕ್ರಮದಲ್ಲಿ ಪೂಜೆ ಸಲ್ಲಿಸಿದರು. ಧರ್ಮಸ್ಥಳದ ಧಮರ್ಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಶಾಲು ಹೊದಿಸಿ, ಸರಸ್ವತಿ ವಿಗ್ರಹ ನೀಡಿ ಮೋದಿ ಅವರನ್ನು ಸನ್ಮಾನಿಸಿದರು. ಧಮರ್ಾಧಿಕಾರಿಯಾಗಿ 50 ವರ್ಷ ಪೂರ್ಣಗೊಳಿಸಿದ ವೀರೇಂದ್ರ ಹೆಗ್ಗಡೆ ಅವರನ್ನು ಮೋದಿ ಸನ್ಮಾನಿಸಿದರು.
ಬಳಿಕ ಉಜಿರೆಗೆ ಪ್ರಯಾಣ ಬೆಳೆಸಿದರು.
ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿನ ಬೃಹತ್ ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಫಲಾನುಭವಿಗಳಿಗೆ 'ರೂಪೆ ಕಾಡರ್್' ವಿತರಿಸಿದರು. ಇದು ಸ್ವ ಸಹಾಯ ಗುಂಪುಗಳಿಗೆ ನಗದು ರಹಿತ ಡಿಜಿಟಲ್ ವಹಿವಾಟು ನಡೆಸಲು ಅವಕಾಶ ನೀಡುತ್ತದೆ.
ಸಾರಿಗೆ ಬಸ್ಸುಗಳಲ್ಲಿ ಕಸದ ಬುಟ್ಟಿ, ಧರ್ಮಸ್ಥಳದಲ್ಲಿ ವಿನೂತನ ಪ್ರಯೋಗ.
ಮೋದಿ ಭಾಷಣದ ಮುಖ್ಯಾಂಶಗಳು
* ನಮೋ ಮಂಜುನಾಥ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ನರೇಂದ್ರ ಮೋದಿ
* ಕಳೆದ ವಾರ ಆದಿ ಶಂಕರಾಚಾರ್ಯರು ಸ್ಥಾಪಿಸಿದ ಕೇದಾರನಾಥಕ್ಕೆ ಭೇಟಿ ನೀಡಿದ್ದೆ. ಈ ಬಾರಿ ದಕ್ಷಿಣದ ಮಂಜುನಾಥನ ದರ್ಶನ ಮಾಡುವ ಅವಕಾಶ ಸಿಕ್ಕಿದೆ. ಇದು ನನ್ನ ಸೌಭಾಗ್ಯ
* ಹೆಗ್ಗಡೆ ಅವರಂಥಹ ವ್ಯಕ್ತಿಯ ಮುಂದೆ ನಾನು ತುಂಬಾ ಚಿಕ್ಕವನು. ಅವರನ್ನು ಸನ್ಮಾನಿಸುವ ಅರ್ಹತೆ ನನಗಿದೆಯೇ?
ಧರ್ಮಸ್ಥಳದಲ್ಲಿ ನಗದು ರಹಿತ ಪಾವತಿ ಸೌಲಭ್ಯ
* ವೀರೇಂದ್ರ ಹೆಗ್ಗಡೆ ಅವರನ್ನು ನಾನು ಹಲವು ಬಾರಿ ಭೇಟಿ ಮಾಡಿದ್ದೇನೆ ಅವರ ಮುಖದಲ್ಲಿನ ನಗು ಹಾಗೆಯೇ ಇದೆ. ಒಂದು ಧಾಮರ್ಿಕ ಕ್ಷೇತ್ರ ಹೇಗಿರಬೇಕು? ಎಂಬುದಕ್ಕೆ ಧರ್ಮಸ್ಥಳ ಮಾದರಿಯಾಗಿದೆ
ಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ ಕನ್ನಡ ಡಿಂಡಿಮ
* ಡಾ.ವೀರೇಂದ್ರ ಹೆಗ್ಗಡೆ ಅವರು ಬಡವರ, ಮಹಿಳೆಯರ ಅಭಿವೃದ್ಧಿ ಮಾಡಿದ್ದಾರೆ. ಅವರ ಕಾರ್ಯ ಎಲ್ಲರಿಗೂ ಆದರ್ಶ ಪ್ರಾಯ
* ದೇಶದ ತುಂಬಾ ನಡೆಯುತ್ತಿರುವ ಕೌಶಾಲ್ಯಾಭಿವೃದ್ಧಿ ಕಾರ್ಯಗಳಿಗೆ ಧರ್ಮಸ್ಥಳ ಸ್ಫೂತರ್ಿಯಾಗಿದೆ.
* ಜನಪರ ಕಾರ್ಯಗಳನ್ನು ಅನುಷ್ಠಾನ ಮಾಡುವುದನ್ನು ಹೆಗ್ಗಡೆ ಅವರಿಂದ ಕಲಿಯಬೇಕು ಎಂದು ಹೇಳಿದ ಮೋದಿ ಹೆಗ್ಗಡೆ ಅವರ ಕಾರ್ಯಗಳನ್ನು ಶ್ಲಾಘಿಸಿದರು.
* ಗ್ರಾಮೀಣ ವಿಕಾಸ ಯೋಜನೆಗಳು, ಬಡವರು ಮತ್ತು ಮಹಿಳೆಯರ ಅಭಿವೃದ್ಧಿಗೆ ವೀರೇಂದ್ರ ಹೆಗ್ಗಡೆ ಅವರು ಮಾಡಿರುವ ಕಾರ್ಯಗಳು ಆದರ್ಶವಾಗಿವೆ.
* ವೀರೇಂದ್ರ ಹೆಗ್ಗಡೆ ಅವರು ಧಮರ್ಾಧಿಕಾರಿಗಳಾಗಿ 50 ವರ್ಷ ಪೂರೈಸಿದ್ದಾರೆ. ಅವರ ಧಾಮರ್ಿಕ ಮತ್ತು ಸಾಮಾಜಿಕ ಕಾರ್ಯಗಳಿಗೆ ನಾನು ನಮನ ಸಲ್ಲಿಸುತ್ತೇನೆ.
* ನಗದು ರಹಿತ ವ್ಯವಹಾರಕ್ಕೆ ಜನರು ಮುಂದಾಗಬೇಕು. ಧರ್ಮಸ್ಥಳದಲ್ಲಿ ಆರಂಭವಾದ ಯೋಜನೆಗಳು ಹಳ್ಳಿ-ಹಳ್ಳಿಗೆ ತಲುಪಿವೆ
* ಈ ಕ್ಷೇತ್ರದಲ್ಲಿ ನಾವು ಪರಿಸರ ಸಂರಕ್ಷಣೆ ಮಾಡೋಣ, ನೀರನ್ನು ಉಳಿಸೋಣ ಎಂದು ಸಂಕಲ್ಪ ಮಾಡೋಣ.
* ಕ್ಯಾಶ್ ಲೆಸ್ ಯೋಜನೆಯನ್ನು ಹಲವರು ಪ್ರಶ್ನಿಸಿದರು. ನೋಟು ನಿಷೇಧದ ಬಗ್ಗೆ ಟೀಕೆ ಮಾಡಿದರು. ನಾವು ಮುಂದಿನ ಪೀಳಿಗೆಯ ಬಗ್ಗೆ ಆಲೋಚನೆ ಮಾಡಿ ಯೋಜನೆಯನ್ನು ಜಾರಿಗೆ ತಂದೆವು.
*ಹೆಗ್ಗಡೆಯವರು ನಿಷ್ಕಾಮ ಕರ್ಮಯೋಗಿ.
ಇನ್ನಷ್ಟು ಸುದ್ದಿಗಳು ಬಳಿಕ.....