HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಉತ್ಸವಾಚರಣೆಗಳು ಮಾನವೀಯತೆ ಮೈಗೂಡಲು ಸಹಕಾರಿ: ಶಾಸಕ ರಝಾಕ್ ಮಂಜೇಶ್ವರ: ಉತ್ಸವಾಚರಣೆಗಳಿಂದ ಜನರಲ್ಲಿ ಮಾನವೀಯತೆ ಹಾಗೂ ಸಹಕಾರಿ ಮನೋಭಾವ ಬೆಳೆಯುತ್ತಿರುವುದಾಗಿ ಮಂಜೇಶ್ವರ ಶಾಸಕ ಪಿ.ಬಿ. ಅಬ್ದುಲ್ ರಜಾಕ್ ಅಭಿಪ್ರಾಯಪಟ್ಟರು. ಆಧುನಿಕ ಭರಾಟೆಯ ಯುಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುವ ಮೂಲಕ ಯುವ ಪೀಳಿಗೆಯಲ್ಲಿ ಸಾಂಸ್ಕೃತಿಕ, ಸಾಮಾಜಿಕ ಕಾಳಜಿ ಹುಟ್ಟಿಕೊಳ್ಳಲು ಸಹಕಾರಿ. ಈ ನಿಟ್ಟಿನಲ್ಲಿ ಜಾತಿ ಧರ್ಮ ಬೇಧವಿಲ್ಲದೆ ನಡೆಯುತ್ತಿರುವ ದೀಪಾವಳಿ ಸಾಂಸ್ಕೃತಿಕ ಉತ್ಸವ ಅರ್ಥಪೂರ್ಣ ಹಾಗೂ ಅನುಕರಣೀಯ ಎಂದು ಅವರು ಹೇಳಿದರು. ಕೇರಳ ತುಳು ಅಕಾಡೆಮಿಯ ಆಶ್ರಯದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಸಮಿತಿ ಹಾಗೂ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ಗಳ ಸಹಕಾರದೊಂದಿಗೆ ಮಂಜೇಶ್ವರದ ಗೋವಿಂದ ಪೈ ನಿವಾಸ ಗಿಳಿವಿಂಡುವಿನಲ್ಲಿ ನಡೆಯುತ್ತಿರುವ ದ್ವಿದಿನ ದೀಪಾವಳಿ ಸಾಂಸ್ಕೃತಿಕ ಉತ್ಸವವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಗ್ರಾಮ ಪಂಚಾಯತು ಅಧ್ಯಕ್ಷ ಅಬ್ದುಲ್ ಅಜೀಜ್ ಹಾಜಿ ವಹಿಸಿದರು. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಪಿ. ಎಸ್. ಪುಣಿಂಚಿತ್ತಾಯ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆಯಿತ್ತು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾಧಿಕಾರಿ ಕೆ. ಜೀವನ್ ಬಾಬು ಅವರು ಕೇರಳದ ಸಾಂಸ್ಕ್ರತಿಕ ಭೂಮಿಕೆಗೆ ಕಾಸರಗೋಡಿನ ಕೊಡುಗೆ ಅನನ್ಯವಾದುದು. ಯಕ್ಷಗಾನದಂಥ ಕಲೆಗಳು ಕಾಸರಗೋಡಿನ ಸಾಂಸ್ಕೃತಿಕ ಸಮೃದ್ಧಿಗೆ ಸಾಕ್ಷಿ ಎಂದು ಅಭಿಪ್ರಾಯಪಟ್ಟರು. ಮಂಜೇಶ್ವರ ಮದನಂತೇಶ್ವರ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಡಾ. ಅನಂತ ಕಾಮತ್, ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಬಿ.ಎಂ. ಅನಂತ ಮೊದಲಾದವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿದರು. ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದಶರ್ಿ ಕೆ. ಆರ್ ಜಯಾನಂದ ಸ್ವಾಗತಿಸಿ, ರಾಮಕೃಷ್ಣ ಕಡಂಬಾರ್ ವಂದಿಸಿದರು. ಕನರ್ಾಟಕ ಜಾನಪದ ಪರಿಷತ್ತಿನ ಕೇರಳ ಘಟಕ ಕೋಶಾಧಿಕಾರಿ, ಪತ್ರಕರ್ತ ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು. ದೀಪಾವಳಿ ಸಾಂಸ್ಕೃತಿಕ ಉತ್ಸವದ ಅಂಗವಾಗಿ ಬುಧವಾರ ಪೂವರ್ಾಹ್ನ ಸ್ಥಳಿಯ ಎಸ್.ಎ.ಟಿ ಶಾಲಾ ವಿದ್ಯಾಥರ್ಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಬಳಿಕ ಮೀಯಪದವು ವಿದ್ಯಾವರ್ಧಕ ಶಾಲಾ ವಿದ್ಯಾಥರ್ಿಗಳಿಂದ ಯಕ್ಷಗಾನ ಕೂಟ, ಇನ್ನಿತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಕಣ್ವತೀರ್ಥ ನಮ್ಮವರು ತಂಡದವರಿಂದ "ನಮ್ಮ ಸಂಸ್ಕ್ರತಿ" ವಿಶೇಷ ಕಾರ್ಯಕ್ರಮ, ಬಳಿಕ ಬೆಂಗಳೂರು ರಂಗ ಪಯಣ ತಂಡದವರಿಂದ ಗಿರೀಶ್ ಕಾನರ್ಾಡ್ ವಿರಚಿತ 'ಒಂದಾನೊಂದು ಕಾಲದಲ್ಲಿ' ನಾಟಕ ಪ್ರದರ್ಶನ ನಡೆಯಿತು. ನೂರಾರು ಮಂದಿ ಭಾಗವಹಿಸಿದರು. ಗುರುವಾರ ಸಾಯಂಕಾಲ ಉತ್ಸವದ ಸಮಾರೋಪಗೊಂಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries