ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 14, 2017
ಬ್ಲೂವೇಲ್ನಂತಹ ಆಟ ತಡೆಯಲು ತಜ್ಞರ ಸಮಿತಿ ರೂಪಿಸಿ: ಸುಪ್ರೀಂ ಕೋಟರ್್
ಹೊಸದಿಲ್ಲಿ: ಆತ್ಮಹತ್ಯೆಗೆ ಕಾರಣವಾಗುವ ಬ್ಲೂವೇಲ್ ಚಾಲೆಂಜ್, ಚೋಕಿಂಗ್ ಗೇಮ್, ಸಾಲ್ಟ್ ಆ?ಯಂಡ್ ಐಸ್ ಚಾಲೆಂಜ್, ಫಯರ್ ಚಾಲೆಂಜ್, ಕಟ್ಟಿಂಗ್ ಚಾಲೆಂಜ್, ಐಬಾಲ್, ಚಾಲೆಂಜ್ ಆ?ಯಂಡ್ ಹ್ಯೂಮನ್ ಎಂಬ್ರಾಯ್ಡರಿ ಮೊದಲಾದ ಆಟಗಳನ್ನು ತಡೆಯಲು ತಜ್ಞರ ಸಮಿತಿಯೊಂದನ್ನು ರೂಪಿಸುವಂತೆ ಸುಪ್ರೀಂ ಕೋಟರ್್ ಶುಕ್ರವಾರ ಕೇಂದ್ರ ಸರಕಾರಕ್ಕೆ ನಿದರ್ೇಶಿಸಿದೆ.
ಫಯರ್ವಾಲ್ಗಳನ್ನು ಸೃಷ್ಟಿಸಲು ಸರಕಾರ ತಜ್ಞರ ಸಮಿತಿ ರೂಪಿಸಬೇಕು ಹಾಗೂ ಅಕ್ಟೋಬರ್ 27ರ ಮೊದಲು ಪ್ರತಿಕ್ರಿಯೆ ದಾಖಲಿಸಬೇಕು ಎಂದು ಮುಖ್ಯ ನ್ಯಾಯಮೂತರ್ಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಹೇಳಿದೆ. ಇದೇ ರೀತಿಯ ಮನವಿಗೆ ಸಂಬಂಧಿಸಿ ಮುಂದೆ ಯಾವುದೇ ಕಲಾಪಕ್ಕೆ ಅವಕಾಶ ನೀಡದಂತೆ ಉಚ್ಚ ನ್ಯಾಯಾಲಯವನ್ನು ನಿರ್ಬಂಧಿಸಿದೆ.
ಹೋರಾಟಗಾತರ್ಿ ಹಾಗೂ ನ್ಯಾಯವಾದಿ ಸ್ನೇಹಾ ಕಲೀಟಾ ಸಲ್ಲಿಸಿದ ಮನವಿ ವಿಚಾರಣೆ ನಡೆಸಿದ ಸುಪ್ರೀಂ ಕೋಟರ್್ ಈ ನಿದರ್ೇಶನ ನೀಡಿದೆ.
ಅನೈತಿಕ, ಜೀವ ಬೆದರಿಕೆ ಒಡ್ಡುವ, ಅಪಾಯಕಾರಿ ವಚರ್ುವಲ್ ಆನ್ಲೈನ್ ಗೇಮ್ ಅನ್ನು ಸೋಸಲು ಅಥವಾ ತಡೆಯಲು ಭಾರತದಲ್ಲಿ ಬ್ರೈನ್ ಸ್ಕಾನರ್ನೊಂದಿಗೆ ಡಿಎನ್ಎಸ್ ಬ್ಲಾಕಿಂಗ್ ವಾಲ್ ಅಥವಾ ಪ್ರತಿ ಕೇಬಲ್ ಲ್ಯಾಂಡಿಂಗ್ ಸ್ಟೇಷನ್ನಲ್ಲಿ ಫಯರ್ವಾಲ್ನಂತಹ ತಡೆಗಳನ್ನು ರೂಪಿಸಬೇಕು ಎಂದು ಸರಕಾರಕ್ಕೆ ನಿದರ್ೇಶನ ನೀಡಬೇಕು ಎಂದು ಅವರು ಮನವಿಯಲ್ಲಿ ಕೋರಿದ್ದರು.