ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 14, 2017
ಪ್ರಧಾನಿ ವಿರುದ್ಧ ಅಸಭ್ಯ ಪದ ಬಳಕೆ: ಕ್ಷಮೆ ಕೋರಿದ ರೋಷನ್ ಬೇಗ್
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅಸಭ್ಯ ಪದ ಬಳಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ರೋಷನ್ ಬೇಗ್ ಕ್ಷಮೆಯಾಚಿಸಿದ್ದಾರೆ.
ಸದ್ಯ ಪ್ರಧಾನಿ ಬಗ್ಗೆ ಕೆಟ್ಟ ಪದ ಬಳಕೆ ಮಾಡಿ ವಿವಾದದಲ್ಲಿ ಸಿಲುಕಿರುವ ವಕ್ಫ್ ಸಚಿವ ರೋಷನ್ ಬೇಗ್, ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಕ್ಷಮೆಯಾಚಿಸಿದ್ದಾರೆ.ದೇಶದ ಪ್ರಧಾನಿ ಮೋದಿ ಬಗ್ಗೆ ಅಸಭ್ಯ ಪದ ಬಳಕೆ ಮಾಡಿದ್ದ ರೋಷನ್ ಬೇಗ್ ವೀಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೆ ಬೇಗ್ ವಿರುದ್ಧ ಎಲ್ಲೆಡೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.