ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 30, 2017
ನ.1 : ಗುರುವಂದನೆ ಹಾಗೂ ರಂಗಪ್ರವೇಶೋತ್ಸವ
ಪೆರ್ಲ: ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ವತಿಯಿಂದ ಯಕ್ಷಗಾನ ಕೇಂದ್ರದಲ್ಲಿ ತರಬೇತಿ ಪಡೆದು ಮೇಳಕ್ಕೆ ಸೇರ್ಪಡೆಗೊಳ್ಳುವ ವಿದ್ಯಾಥರ್ಿಗಳ ಗುರುವಂದನೆ ಹಾಗೂ ರಂಗಪ್ರವೇಶೋತ್ಸವ ನ.1 ರಂದು ಬುಧವಾರ ಪೆರ್ಲದ ಶ್ರೀ ಸತ್ಯನಾರಾಯಣ ಮಂದಿರದಲ್ಲಿ ಜರುಗಲಿದೆ.
ಅಂದು ಅಪರಾಹ್ನ 3.00 ಗಂಟೆಗೆ ಶ್ರೀ ಸ.ನಾ.ಹೈಸ್ಕೂಲ್ ಪ್ರಬಂಧಕ ಶ್ರೀಕೃಷ್ಣ ವಿಶ್ವಾಮಿತ್ರ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಡಾ.ಎಸ್.ಎನ್.ಭಟ್ ಉದ್ಘಾಟಿಸಲಿರುವರು. ಶ್ರೀ ಸ.ನಾ.ಹೈಸ್ಕೂಲ್ ಮುಖ್ಯ ಶಿಕ್ಷಕ ಬಿ.ರಾಜೇಂದ್ರ, ಅಧ್ಯಾಪಕರು ಮತ್ತು ಭಾಗವತರಾದ ಸತೀಶ್ ಪುಣಿಚಿತ್ತಾಯ ಉಪಸ್ಥಿತರಿರುವರು. 3.30ರಿಂದ ವೀರವೆಷ್ಣವ ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.