ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 31, 2017
ಗಡಿನಾಡಿನ ಪ್ರತಿಭೆ ಉಪಾಸನಾ ಪಂಜರಿಕೆ ಮತ್ತು ಚೇತನ್ ಯಾದವ್ ನೆಟ್ಟಣಿಗೆ ಜಿಲ್ಲಾ ರಾಜ್ಯೋತ್ಸವದ ಗರಿ.
ಬದಿಯಡ್ಕ: ಕನರ್ಾಟಕ ರಾಜ್ಯೋತ್ಸದ ಶುಭ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ನೀಡುವ ದಕ್ಷಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಸಾಧಕ ಪುರಸ್ಕಾರಕ್ಕೆ ಕಾಸರಗೋಡಿನ ಬಾಲಪ್ರತಿಭೆಗಳಾದ ಉಪಾಸನಾ ಪಂಜರಿಕೆ ಮತ್ತು ಚೇತನ್ ಯಾದವ್ ನೆಟ್ಟಣಿಗೆ ಆಯ್ಕೆಯಾಗಿರುತ್ತಾರೆ. ಅರವಿಂದ-ಚಂದ್ರಿಕಾ ಪಂಜರಿಕೆ ದಂಪತಿಗಳ ಪುತ್ರಿ ಉಪಾಸನಾ ಎಳೆಯ ವಯಸ್ಸಿನಲ್ಲಿಯೇ ಯಕ್ಷಗಾನ ಕಲೆಯನ್ನು ಕರಗತಮಾಡಿಕೊಂಡು ಬಾಲ ಕಲಾವಿದೆಯಾಗಿ ರೂಪುಗೊಂಡಿರುವ, ಈಗಾಗಲೇ ಸುಮಾರು 100ರಷ್ಟು ವೇದಿಕೆಗಳಲ್ಲಿ ಪ್ರದರ್ಶನವನ್ನು ನೀಡುವುದರ ಮೂಲಕ ಜನಮನಗೆದ್ದಿರುವ ಬಾಲಪ್ರತಿಭೆ. ಬಯಲಾಟಗಳಲ್ಲದೆ ಮೇಳದ ಆಟಗಳಲ್ಲೂ ಗೆಜ್ಜೆಕಟ್ಟಿ ಸೈ ಎನಿಸಿಕೊಂಡಿದ್ದು ಬಾಲಕಲಾವಿದೆಯಾಗಿ, ಭರವಸೆಯನ್ನು ಮೂಡಿಸುತ್ತಿದ್ದಾಳೆ. ಅಪ್ಪಯ್ಯ ಯಾದವ್-ಇಂದಿರಾ ನೆಟ್ಟಣಿಗೆ ದಂಪತಿಗಳ ಮಗನಾದ ಚೇತನ್ ಗುರುಕುಲ ಶಿಕ್ಷಣವನ್ನು ಅಭ್ಯಸಿಸುತ್ತಿದ್ದು ಭಗವದ್ಗೀತೆ, ವೇದ, ಪೂಜಾ ನಿಯಮಗಳು ಕರಗತಮಾಡಿಕೊಂಡೊದ್ದಾನೆ. ಸಂಪೂರ್ಣ ಭಾರತೀಯ ಪಾರಂಪರಿಕ ಶಿಕ್ಷಣವನ್ನು ಪಡೆಯುತ್ತಿದ್ದು ಯೋಗ ಹಾಗೂ ಬೌದ್ಧಿಕ್ಗಳ ಮೂಲಕ ಸಮಾಜಸೇವೆಯಲ್ಲೂ ತೊಡಗಿಸಿಕೊಂಡಿದ್ದಾನೆ.