ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 16, 2017
ವಣ್ಣಾಂಚಡವಿನಲ್ಲಿ ಅಪಘಾತ ಸೂಚನಾ ಫಲಕ
ಮುಳ್ಳೇರಿಯ: ಅಪಘಾತಗಳು ಪದೇ ಪದೇ ಸಂಭವಿಸುತ್ತಿರುವ ಚೆರ್ಕಳ-ಜಾಲ್ಸೂರ್ ರಸ್ತೆಯಲ್ಲಿ ಕಾರಡ್ಕ ಸಮೀಪದ ವಣ್ಣಾಂಚಡವು ತಿರುವಿನಲ್ಲಿ ಮುಳ್ಳೇರಿಯ ಎಯುಪಿ ಶಾಲೆಯ ಸೀಡ್ ವಿದ್ಯಾಥರ್ಿಗಳು ಅಪಘಾತ ಸೂಚನಾ ಫಲಕವನ್ನು ನೆಟ್ಟು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವಣ್ಣಾಂಚಡವು ತಿರುವಿನಲ್ಲಿ ಕಳೆದ ಒಂದು ತಿಂಗಳಲ್ಲಿ 10ಕ್ಕೂ ಅಧಿಕ ಅಪಘಾತಗಳು ಸಂಭವಿಸಿವೆ. ಇಲ್ಲಿ ಮಕ್ಕಳು ಎರಡು ಫಲಕಗಳನ್ನು ಸ್ಥಾಪಿಸಿದ್ದಾರೆ. ಆದೂರು ಪೊಲೀಸ್ ಠಾಣೆಯ ಸಬ್ ಇನ್ಸ್ಫೆಕ್ಟರ್ ಪ್ರಶೋಬ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರಡ್ಕ ಗ್ರಾಮ ಪಂಚಾಯಿತಿ ಸದಸ್ಯ ವಿಜಯ ಕುಮಾರ್ ಅವರು ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಸದಸ್ಯ ತಂಬಾನ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೇಶವ ಮಣಿಯಾಣಿ, ಮುಖ್ಯ ಶಿಕ್ಷಕ ಅಶೋಕ ಅರಳಿತ್ತಾಯ, ಸಂಯೋಜಕಿ ಎಂ.ಸಾವಿತ್ರಿ ಟೀಚರ್, ಶಿಕ್ಷಕ ಅಬ್ದುಲ್ ರಹಿಮಾನ್, ಟಿ.ಕೃಷ್ಣನ್, ಯು.ಮನೋಹರ, ಎಂ.ಚಂದ್ರನ್, ರಾಮಚಂದ್ರ ಮಣಿಯಾಣಿ, ಅಂಜಲಿ ಬಾಬು, ಪ್ರಜ್ಞಾ, ಪ್ರಜಿತಾ, ವೈಷ್ಣವ್, ಧನುಶ್, ಸುಜೇಶ್ ಮೊದಲಾದವರು ನೇತೃತ್ವ ನೀಡಿದರು.
ಅಪಾಯಕಾರಿಯಾದ ಇಳಿಜಾರಿನ ಇಲ್ಲಿನ ತಿರುವಿನಲ್ಲಿ ಅಪಾಯ ಸೂಚನೆಯನ್ನು ಕಡೆಗಣಿಸಿ ವಾಹನಗಳ ಅತಿ ವೇಗದ ಓಡಾಟವೇ ಅಪಘಾತಗಳಿಗೆಲ್ಲಾ ಕಾರಣವಾಗುತ್ತಿದೆ. ಹೀಗಾಗಿ ಮಕ್ಕಳು ಇಂತಹಾ ಕಾರ್ಯಗಳ ಮೂಲಕ ಹೃದಯಕ್ಕೆ ತಟ್ಟುವ ರೀತಿಯಲ್ಲಿ ಸಂದೇಶ ನೀಡುತ್ತಿರುವುದು ಶ್ಲಾಘನೀಯವಾಗಿದೆ ಮತ್ತು ಮಾದರಿಯಾಗಿದೆ ಎಂದು ಇನ್ಸ್ಫೆಕ್ಟರ್ ಪ್ರಶೋಬ್ ಹೇಳಿದರು.