ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 30, 2017
ಮವ್ವಾರಿನಲ್ಲಿ ಪ್ರತಿಭಾ ಚೇತನ ಕಾರ್ಯಕ್ರಮ
ಮುಳ್ಳೇರಿಯ : ವಿದ್ಯಾಥರ್ಿಗಳಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಬೆಳಕಿಗೆ ತಂದು ಪ್ರಕಟಪಡಿಸುವುದು ಹಾಗೂ ಹೊಸ ವಿಚಾರಗಳ ಬಗ್ಗೆ ಅನ್ವೇಷಣೆ ಮತ್ತು ಅಧ್ಯಯನ ಮಾಡಲು ಪ್ರೇರೇಪಿಸುವ ಪ್ರಯತ್ನ ಸಂಘ ಸಂಸ್ಥೆಗಳಿಂದ ನಡೆಯುತ್ತಿರುವುದು ಶ್ಲಾಘನೀಯ ವಿಚಾರವೆಂದು ಮಾನ್ಯ ಗ್ಲೋಬಲ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಸ್ಮಿತಾ ಹೇಳಿದರು.
ಅವರು ಭಾನುವಾರ ಮವ್ವಾರು ಷಡಾನನ ಯುವಕ ಸಂಘ ಹಾಗೂ ಗ್ರಂಥಾಲಯದಲ್ಲಿ ಜರಗಿದ ಪ್ರತಿಭಾ ಚೇತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಂಗವಾಗಿ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಹೈಸ್ಕೂಲ್, ಹೈಯರ್ ಸೆಕೆಂಡರಿ ಹಾಗೂ ಸಾರ್ವಜನಿಕರಿಗಾಗಿ ದೇಶಭಕ್ತಿಗೀತೆ, ಪ್ರಬಂಧ ಹಾಗೂ ಭಾಷಣ ಸ್ಪಧರ್ೆಗಳನ್ನು ನಡೆಸಲಾಯಿತು. ಸ್ಪಧರ್ೆಗಳಲ್ಲಿ ಎ.ಯು.ಪಿ ಶಾಲೆ ಮವ್ವಾರು., ಎ.ಎಲ್.ಪಿ ಶಾಲೆ ಮರಿಕ್ಕಾನ, ಎ.ಎಲ್.ಪಿ ಶಾಲೆ ಪಣಿಯೆ, ಎ.ಎಲ್.ಪಿ ಶಾಲೆ ಮರಿಕ್ಕಾನ, ಎಸ್.ಎ.ಪಿ.ಎ.ಎಲ್.ಪಿ ಶಾಲೆ ಅಗಲ್ಪಾಡಿ, ವಿದ್ಯಾಶ್ರೀ ವಿದ್ಯಾಲಯ ಮುಳ್ಳೇರಿಯ, ಭಾರತೀ ವಿದ್ಯಾಪೀಠ ಬದಿಯಡ್ಕ ಹಾಗೂ ಶ್ರೀ ಅನ್ನಪೂಣರ್ೇಶ್ವರಿ ಹೈಸ್ಕೂಲ್ ಮತ್ತು ಹೈಯರ್ ಸೆಕೆಂಡರಿ ಅಗಲ್ಪಾಡಿಯ ವಿದ್ಯಾಥರ್ಿಗಳು ಭಾಗವಹಿಸಿದರು. ಸ್ಪಧರ್ೆಗಳಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಪಡೆದ ವಿಜೇತರ ಹೆಸರನ್ನೂ ಘೋಷಿಸಲಾಯಿತು. ಸ್ಪಧರ್ೆಗಳಿಗೆ ತೀಪರ್ುಗಾರರಾಗಿ ವಾಣಿಶ್ರೀ ಟೀಚರ್, ಸುಮತಿ ಟೀಚರ್, ಕು.ಭವ್ಯಶ್ರೀ ಎಂ.ಜಿ., ಕು.ಭವ್ಯ ಎಂ., ಮನುರಾಜ್ ಹಾಗೂ ಅನುರಾಜ್ ಸಹಕರಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಂಥಾಲಯದ ಅಧ್ಯಕ್ಷ ಕೃಷ್ಣಮೂತರ್ಿ ವಹಿಸಿದರು. ಗಂಗಾಧರ ಮಾಸ್ತರ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಗ್ರಂಥಾಲಯದ ಕಾರ್ಯದಶರ್ಿ ಸದಾಶಿವ ಕೆ ವಂದಿಸಿದರು.