ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 13, 2017
ಕೈಗಾರಿಕಾ ಕೇಂದ್ರದ ಅವಗಣನೆ ಕೊನೆಗೊಳಿಸಲು ಆಗ್ರಹ
ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೈಗಾರಿಕಾ ರಂಗವು ಹಿಂದುಳಿದಿರುವ ಬಗ್ಗೆ ಸಂಪೂರ್ಣ ವಿವರವನ್ನು ಕೈಗಾರಿಕಾ ಖಾತೆ ಸಚಿವ ಎ.ಸಿ.ಮೊಯ್ದೀನ್ರಿಗೆ ಜಿಲ್ಲಾ ಪಂಚಾಯತ್ ಅ`್ಯಕ್ಷ ಎ.ಜಿ.ಸಿ.ಬಶೀರ್ ಮನವಿ ಮೂಲಕ ತಿಳಿಸಿದ್ದಾರೆ. ಅಲ್ಲದೆ ಈ ಕುರಿತು ಪರಿಹಾರ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಇತರ ವಲಯಗಳಲ್ಲಿ ಜಿಲ್ಲೆಯು ಹಿಂದುಳಿದಿರುವಂತೆ ಕೈಗಾರಿಕಾ ರಂಗದಲ್ಲೂ ಹಿಂದುಳಿದಿದೆ. ಕೈಗಾರಿಕಾ ರಂಗವನ್ನು ಸಕ್ರಿಯಗೊಳಿಸಬೇಕಾದ ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ನೌಕರರ ಅಭಾವದಿಂದಾಗಿ ಅಪಾರ ಸಮಸ್ಯೆ ಸೃಷ್ಟಿಯಾಗಿದೆ. ಇಬ್ಬರು ಮೆನೇಜರ್ಗಳ ಹುದ್ದೆ ಕೂಡ ಖಾಲಿಯಿದೆ ಎಂದು ಅವರು ತಿಳಿಸಿದ್ದಾರೆ.
ಡೆಪ್ಯೂಟಿ ಡೈರೆಕ್ಟರ್ ವಗರ್ಾವಣೆಗೊಂಡು ತೆರಳಿ ತಿಂಗಳುಗಳೇ ಕಳೆದಿವೆ. ಹೊಸ ಡೆಪ್ಯೂಟಿ ಡೈರೆಕ್ಟರ್ಗಳನ್ನು ರಾಜ್ಯದ 13 ಜಿಲ್ಲೆಗಳಿಗೂ ನೇಮಕಗೊಳಿಸಿದ್ದರೂ, ಕಾಸರಗೋಡಿಗೆ ಮಾತ್ರ ನೇಮಕಾತಿ ಮಾಡಿಲ್ಲ. ಇದರಿಂದಾಗಿ ಕಾಸರಗೋಡು ಜಿಲ್ಲೆಯು ಕೇರಳದಲ್ಲಿಲ್ಲವೇ ಎಂಬ ಸಂಶಯ ಮೂಡಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದಲ್ಲೇ ಅತ್ಯಂತ ಕಡಿಮೆ ಕೈಗಾರಿಕೆಗಳಿರುವುದು ಕಾಸರಗೋಡು ಜಿಲ್ಲೆಯಲ್ಲಾಗಿದೆ. ಈ ಹಿನ್ನೆಲೆಯಲ್ಲಿ ಕೈಗಾರಿಕಾ ಕೇಂದ್ರದೊಂದಿಗಿರುವ ನಿರ್ಲಕ್ಷ್ಯ ಧೋರಣೆ ಕೊನೆಗೊಳಿಸಿ ಡೆಪ್ಯೂಟಿ ಡೈರೆಕ್ಟರ್, ಮೆನೇಜರ್, ಕ್ಲಾಕರ್್ ಹುದ್ದೆಗಳಿಗೆ ಅಗತ್ಯದ ನೌಕರರನ್ನು ನೇಮಕಗೊಳಿಸಲು ತುತರ್ು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಅ`್ಯಕ್ಷರು ಕೇರಳ ಕೈಗಾರಿಕಾ ಸಚಿವರಿಗೆ ನೀಡಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.