ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 19, 2017
ತುಳು ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ತುಳುನಾಡೋಚ್ಛಯದ ಪ್ರಧಾನ ದ್ಯೇಯವಾಗಿರಲಿ- ನಿಟ್ಟೆ ಶಶಿಧರ ಶೆಟ್ಟಿ
ಬದಿಯಡ್ಕ: ಪಿಲಿಕುಳದ ತುಳು ಸಂಸ್ಕೃತಿ ಗ್ರಾಮದಲ್ಲಿ ಡಿ.23,24 ರಂದು ನಡೆಯುವ ತುಳುನಾಡೋಚ್ಛಯ-2017 ರ ವಿವಿಧ ಸಮಿತಿಗಳ ಸಂಚಾಲಕರ ಆಯ್ಕೆ ಸಭೆಯು ತುಳುನಾಡ ರಕ್ಷಣಾ ವೇದಿಕೆಯ ಕಛೇರಿಯಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆ ವಹಿಸಿದ ಅಖಿಲ ಭಾತರ ತುಳು ಒಕ್ಕೂಟದ ಪ್ರಧಾನ ಕಾರ್ಯದಶರ್ಿ ನಿಟ್ಟೆ ಶಶಿಧರ ಶೆಟ್ಟಿ ಮಾತನಾಡಿ ತುಳುನಾಡಿಗೆ, ತುಳು ಭಾಷೆಗೆ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ಬೇಕೆಂದೂ, ಕನರ್ಾಟಕದಲ್ಲಿ ತುಳು ಭಾಷೆಗೆ ಪ್ರತ್ಯೇಕ ಸ್ಥಾನಮಾನ ಕಲ್ಪಿಸಬೇಕೆಂದೂ, ಈ ನಿಟ್ಟಿನಲ್ಲಿ 2017ರ ತುಳುನಾಡೋಚ್ಛಯದ ಪ್ರಧಾನ ಧ್ಯೇಯೋದ್ದೇಶವಾಗಲಿ ಎಂದು ಅಭಿಪ್ರಾಯಪಟ್ಟರು.
ತುಳುನಾಡೋಚ್ಛಯದ ಪ್ರಧಾನ ಸಂಚಾಲಕ ಮತ್ತು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಮಾತನಾಡಿ ತುಳುನಾಡೋಚ್ಛಯವು ತುಳುನಾಡಿನ ಸಮಸ್ತ ಜಾತಿ,ಮತ,ಭಾಷೆಯವರ ಸಮ್ಮೇಳನವಾಗಬೇಕೆಂದೂ, ಈ ನಾಡಿನ ಸೌಹಾರ್ಧತೆಯ ಪ್ರತೀಕವಾಗಬೇಕು ಎಂದರು. ಕಾರ್ಯಕ್ರಮಕ್ಕೆ ನಾಡಿನೆಲ್ಲೆಡೆ ಉತ್ತಮ ಸಹಕಾರ ದೊರೆಯುತ್ತಿದ್ದು ತುಳುನಾಡೋಚ್ಛಯವು ಒಂದು ಐತಿಹಾಸಿಕ ಕಾರ್ಯಕ್ರಮವಾಗುವುದರಲ್ಲಿ ಸಂಶಯವಿಲ್ಲ ಎಂದರು. ತುಳುನಾಡೋಚ್ಛಯ ಸಮಿತಿ ಪ್ರಧಾನ ಕಾರ್ಯದಶರ್ಿ ಶಮೀನಾ ಆಳ್ವ ಮೂಲ್ಕಿ ತುಳುನಾಡೋಚ್ಛಯ ಕಾರ್ಯಕ್ರಮದ ರೂಪುರೇಶೆಗಳ ಪಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಆನಂದ ಅಮೀನ್ ಅಡ್ಯಾರ್, ದಿನೇಶ್ ಕಾಮತ್ ಬೆಂಗಳೂರು, ಅಬ್ದುಲ್ ರಶೀದ್, ಪ್ರಶಾಂತ್ ಭಟ್ ಕಡಬ, ಜಿ.ವಿ.ಎಸ್.ಉಳ್ಳಾಲ್, ಸಿರಾಜ್ ಅಡ್ಕರೆ, ನಿಶಾದ್ ಯೆಮ್ಮೆಕೆರೆ, ಶ್ರೀಕಾಂತ್ ಸಾಲ್ಯಾನ್ ಕುದ್ರೋಳಿ ಬೆಂಗ್ರೆ, ಭೂಷಣ್ ಕುಲಾಲ್, ಆರ್.ಕೆ. ಗಂಗಾಧರ ಅತ್ತಾವರ್, ಹರೀಶ್ ಕುಮಾರ್ ಶೆಟ್ಟಿ, ಶೈಝ್, ರಕ್ಷಿತ್ ಕೆ, ಪಿ.ನೇಮು ಕೊಟ್ಟಾರಿ, ಕಡಬ ದಿನೇಶ್ ರೈ, ಶಿವ್ ಶೆಟ್ಟಿ, ಪ್ರಜ್ವಲ್ ಆಳ್ವ, ಮೋಹನ್ದಾಸ್ ರೈ, ಭಾರತಿ ಬಿ ರೈ, ಗೀತಾ ಜೆ ಹೆಗ್ಡೆ, ಜ್ಯೋತಿ ಜೈನ್, ರೇಶ್ಮಾ ಎಸ್ ಉಳ್ಳಾಲ್, ಕಾಂತಿ ಶೆಟ್ಟಿ ಮೊದಲಾದವರನ್ನು ವಿವಿಧ ಸಮಿತಿಗಳ ಸಂಚಾಲಕರನ್ನಾಗಿ ಆಯ್ಕೆಮಾಡಲಾಯಿತು.
ತುಳುನಾಡೋಚ್ಛಯ ಸಮಿತಿಯ ಕಾಯರ್ಾಲಯವು ಮಾರ್ನಮಿಕಟ್ಟೆಯಲ್ಲಿ ನವಂಬರ್ 1ರಂದು ಸಾಯಂಕಾಯ 4.20ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಡಾ.ರಾಜೇಶ್ ಆಳ್ವ ಸ್ವಾಗತಿಸಿ, ಭಾಸ್ಕರ ಕುಂಬ್ಳೆ ವಂದಿಸಿದರು. ಹರ್ಷ ರೈ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು.