ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 30, 2017
ಹಸ್ತ ಎಂದೂ ಶುದ್ಧವಾಗಿರಲಿ : ವಿ.ಪಿ.ಅಬ್ದುಲ್ ಖಾದರ್ ಹಾಜಿ
ಕುಂಬಳೆ: ವಿಶ್ವ ಕೈತೊಳೆಯುವ ದಿನ ಎಂಬ ಆಚರಣೆ ಎಂದಾಗ ಬಹಳಷ್ಟು ಮಂದಿಗೆ ಆಶ್ಚರ್ಯವಾಗಬಹುದು. ಆದರೆ ಆಗಾಗ ಕೈಗಳನ್ನು ತೊಳೆದು ಶುದ್ಧವಾಗಿಡುವುದರ ಪ್ರಾಧಾನ್ಯತೆಯನ್ನು ಅರಿತುಕೊಂಡು ಬದುಕಿನಲ್ಲಿ ಅಳವಡಿಸುವುದನ್ನು ನೆನಪಿಸುವುದಕ್ಕಾಗಿ ವಿಶ್ವ ಹಸ್ತ ಶುದ್ಧಿ ದಿನವನ್ನು ಆಚರಿಸಲಾಗುತ್ತದೆ. ಅದು ಶಾರೀರಿಕವಾಗಿಯೂ ನೈತಿಕವಾಗಿಯೂ ನಮ್ಮ ಹಸ್ತ ಶುದ್ಧವಾಗಿರುವಂತೆ ನೋಡಿಕೊಳ್ಳಬೇಕೆಂಬ ಸಂದೇಶವನ್ನು ನೀಡುತ್ತದೆ ಎಂದು ಕುಂಬಳೆ ಗ್ರಾಮ ಪಂಚಾಯತು ಸದಸ್ಯ ವಿ.ಪಿ.ಅಬ್ದುಲ್ ಖಾದರ್ ಹಾಜಿ ಹೇಳಿದರು.
ಅವರು ಪೇರಾಲು ಕಿರಿಯ ಬುನಾದಿ ಶಾಲೆಯಲ್ಲಿ ವಿಶ್ವ ಹಸ್ತ ಶುದ್ಧೀಕರಣ ದಿನಾಚರಣೆಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಅದರ ಅಂಗವಾಗಿ ಶಾಲೆಯಲ್ಲಿ ನೂತನವಾಗಿ ನಿಮರ್ಿಸಲಾದ ನಳ್ಳಿಗಳ ಉದ್ಘಾಟನೆಯನ್ನೂ ನೆರವೇರಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮುಹಮ್ಮದ್ ಬಿ.ಎ. ಪೇರಾಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಶಾಲಾ ಮುಖ್ಯೋಪಾಧ್ಯಾಯ ಗುರುಮೂತರ್ಿ ಸ್ವಾಗತಿಸಿ, ಹಿರಿಯ ಅಧ್ಯಾಪಕ ರಹಿಮಾನ್ ಮಾಸ್ಟರ್ ವಂದಿಸಿದರು.