ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 10, 2017
ಕಡಿಮೆ ಅವಧಿಯಲ್ಲೂ ಯುದ್ಧಕ್ಕೆ ವಾಯುಪಡೆ ಸಿದ್ಧ
ಹಿಂಡನ್ (ಉತ್ತರ ಪ್ರದೇಶ): `ಅತ್ಯಂತ ಕಡಿಮೆ ಅವಧಿಯಲ್ಲೂ ಭಾರತೀಯ ವಾಯುಪಡೆ ಯುದ್ಧಕ್ಕೆ ಸನ್ನದ್ಧವಾಗಲಿದೆ' ಎಂದು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿ.ಎಸ್. ಧನೋ ತಿಳಿಸಿದ್ದಾರೆ.
ಇಲ್ಲಿನ ವಾಯು ನೆಲೆಯಲ್ಲಿ ನಡೆದ ಭಾರತೀಯ ವಾಯುಪಡೆಯ 85ನೇ ವಾಷರ್ಿಕೋತ್ಸವದಲ್ಲಿ ಮಾತನಾಡಿದ ಅವರು, `ದೇಶದ ಭದ್ರತೆಗೆ ಎದುರಾಗುವ ಯಾವುದೇ ರೀತಿಯ ಸವಾಲುಗಳನ್ನು ಎದುರಿಸಲು ವಾಯುಪಡೆ ಸಜ್ಜಾಗಿದೆ. ವಿವಿಧ ರೀತಿಯ ಕಾಯರ್ಾಚರಣೆಗಳ ಮೂಲಕ ಶತ್ರುಗಳನ್ನು ಹಿಮ್ಮೆಟ್ಟಿಸುತ್ತೇವೆ. ವಾಯುಪಡೆ ಯೋಧರು ಎಲ್ಲ ರೀತಿಯ ಪರಿಸ್ಥಿತಿ ಎದುರಿಸಲು ಸದಾ ಸನ್ನದ್ಧರಾಗಿದ್ದಾರೆ' ಎಂದು ಭರವಸೆ ನೀಡಿದರು.
`ಪ್ರಸ್ತುತ ಭೌಗೋಳಿಕ ಮತ್ತು ರಾಜಕೀಯ ವಾತಾವರಣ ಅನಿಶ್ಚಿತತೆಯಿಂದ ಕೂಡಿದೆ. ಹೀಗಾಗಿ, ವಾಯುಪಡೆ ಕಡಿಮೆ ಅವಧಿಯಲ್ಲಿ ತಕ್ಷಣದ ಯುದ್ಧವನ್ನು ಎದುರಿಸುವ ಸನ್ನಿವೇಶವೂ ಸೃಷ್ಟಿಯಾಗಬಹುದು. ಇದಕ್ಕಾಗಿ ಸದಾ ವಾಯು ಪಡೆ ಸಿದ್ಧವಾಗಿರುವುದು ಅನಿವಾರ್ಯವಾಗಿದೆ' ಎಂದು ತಿಳಿಸಿದರು.
ದೋಕಲಾ ಪ್ರದೇಶದಲ್ಲಿನ ಬಿಕ್ಕಟ್ಟು ಮತ್ತು ಜಮ್ಮು=ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನ ಭಯೋತ್ಪಾದನೆ ಚಟುವಟಿಕೆಗಳಿಗೆ ನೀಡುತ್ತಿರುವ ಬೆಂಬಲವನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ಅವರು ಈ ಹೇಳಿಕೆ ನೀಡಿದ್ದಾರೆ.
`ದೇಶದ ರಕ್ಷಣಾ ಸಾಮಥ್ರ್ಯ ಮತ್ತಷ್ಟು ಬಲವರ್ಧನೆಗೊಳಿಸಲು ವಾಯುಪಡೆ, ಸೇನೆ ಮತ್ತು ನೌಕಾ ಪಡೆಗಳು ಜಂಟಿಯಾಗಿ ಯೋಜನೆಗಳನ್ನು ಕೈಗೊಳ್ಳ
ಬೇಕು. ಜಂಟಿ ಯೋಜನೆ ಮತ್ತು ಕಾಯರ್ಾಚರಣೆ ಮೂಲಕ ಪರಿಣಾಮಕಾರಿ ಫಲಿತಾಂಶ ಪಡೆದುಕೊಳ್ಳಬಹುದು' ಎಂದು ಅಭಿಪ್ರಾಯಪಟ್ಟರು