ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 11, 2017
ಅ.25ಕ್ಕೆ ಜಂಟಿ ಅಧಿವೇಶನ: ರಾಷ್ಟ್ರಪತಿ ಕೋವಿಂದ್ ಭಾಗಿ
ನವದೆಹಲಿ: ವಿಧಾನಸೌಧದ ವಜ್ರಮಹೋತ್ಸವದ ಅಂಗವಾಗಿ ಇದೇ 25ರಂದು ವಿಧಾನಮಂಡಲದ ಜಂಟಿ ಅಧಿವೇಶನ ನಡೆಯಲಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ್ ಇದರಲ್ಲಿ ಭಾಗವಹಿಸಲಿದ್ದಾರೆ.
ವಿಧಾನಸಭೆಯ ಸ್ಪೀಕರ್ ಕೆ.ಬಿ. ಕೋಳಿವಾಡ ನೇತೃತ್ವದ ನಿಯೋಗ ಕೋವಿಂದ್ ಅವರಿಗೆ ಸೋಮವಾರ ಅಧಿಕೃತ ಆಹ್ವಾನ ಆಹ್ವಾನ ನೀಡಿತು. ವಿಧಾನಸೌಧದ ವಜ್ರಮಹೋತ್ಸವ ಕಾರ್ಯಕ್ರಮವನ್ನು ಈ ತಿಂಗಳೇ ಆಯೋಜಿಸಲು ನಿರ್ಧರಿಸಲಾಗಿದೆ. ಈ ವೇಳೆ ನಡೆಯಲಿರುವ ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ಭಾಗಿಯಾಗುವಂತೆ ರಾಷ್ಟ್ರಪತಿಯವರಿಗೆ ಮನವಿ ಮಾಡಲಾಯಿತು. ರಾಜ್ಯ ಸಕರ್ಾರದ ಆಹ್ವಾನಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ರಾಷ್ಟ್ರಪತಿಯವರು ಇದೇ 25ರಂದು ಜಂಟಿ ಅಧಿವೇಶನ ಆಯೋಜಿಸುವಂತೆ ಸಲಹೆ ನೀಡಿದ್ದು, ಭಾಗಿಯಾಗುವ ಭರವಸೆ ನೀಡಿದ್ದಾರೆ ಎಂದು ಕೆ.ಬಿ ಕೋಳಿವಾಡ ಸುದ್ದಿಗಾರರಿಗೆ ತಿಳಿಸಿದರು.
ದೇಶದ ವಿವಿಧ ರಾಜ್ಯಗಳ ವಿಧಾನಸಭೆಗಳ ಕಟ್ಟಡಗಳಲ್ಲಿ ಕನರ್ಾಟಕದ ವಿಧಾನಸೌಧದ ಕಟ್ಟಡ ಅತ್ಯಂತ ಆಕರ್ಷಣೀಯವಾಗಿದ್ದು, ವಾಸ್ತು ವೈಭವದಿಂದ ಕೂಡಿದೆ. ಆ ಸೌಧದ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಸಂತಸದ ವಿಷಯ ಎಂದು ರಾಷ್ಟ್ರಪತಿಯವರು ಹೇಳಿದ್ದಾಗಿ ಅವರು ವಿವರಿಸಿದರು.
ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂತರ್ಿ, ಸದಸ್ಯರಾದ ಐವಾನ್ ಡಿಸೋಜಾ, ಗಣೇಶ್ ಕಾಣರ್ಿಕ್ ಹಾಗೂ ವಿಧಾನ ಮಂಡಲದ ಅಧಿಕಾರಿಗಳು ಈ ಸಂದರ್ಭ ಹಾಜರಿದ್ದರು