ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 20, 2017
ತುಳುನಾಡ ಬಲಿಯೇಂದ್ರ ಹಬ್ಬ
ಬದಿಯಡ್ಕ: ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಬಲಿಯೇಂದ್ರ ಹಬ್ಬವನ್ನು ಬುಧವಾರ ಸಂಜೆ ಆಚರಿಸಲಾಯಿತು. ಬಲಿಯೇಂದ್ರ ಚಕ್ರವತರ್ಿಯ ಪ್ರತಿಕೃತಿಯಲ್ಲಿ ಇರಿಸಲಾಗಿದ್ದ ಹಣತೆಯನ್ನು ಉರಿಸುವ ಮೂಲಕ ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೈಲಾಸಮೂತರ್ಿಯವರು ಬೆಳಕಿನ ಹಬ್ಬಕ್ಕೆ ಚಾಲನೆ ನೀಡಿದರು. ಜ್ಞಾನವೆಂಬ ಬೆಳಕು ನಮ್ಮೆಲ್ಲರ ಮನವನ್ನು ಬೆಳಗಲಿ. ಬಲಿಯೇಂದ್ರ ಚಕ್ರವತರ್ಿ ನಮ್ಮ ನಾಡಿಗೆ ಬರುವ ಈ ದಿನ, ಆತನ ಪ್ರಜಾಪ್ರೀತಿ-ಗುಣನಡತೆಗಳು ನಮ್ಮ ಜೀವನವನಕ್ಕೆ ಆದರ್ಶವಾಗಿರಲಿ ಎಂದು ಎಲ್ಲರಿಗೂ ಶುಭ ಹಾರೈಸಿದರು.
ಹಿರಿಯ ಶಿಕ್ಷಣ ಸೂಪರಿಂಟೆಂಡೆಂಟ್ ಗೋಪಾಲಕೃಷ್ಣ ಭಟ್, ನೂರುಲ್ ಅಬ್ಸರ್, ಕೃಷ್ಣರಾಜ, ಶ್ರೀಶ ಪಂಜಿತ್ತಡ್ಕ, ದಿವ್ಯಶ್ರೀ, ರಮ್ಯ, ಮೊಹಮ್ಮದ್ ಶೇಕ್, ರಮೇಶ್, ಸಂಧ್ಯಾ, ರವಿಚಂದ್ರ, ನಾರಾಯಣ ಬಾರಡ್ಕ, ಸಮನ್ವಿ ಉಪಸ್ಥಿತರಿದ್ದರು. ಬಾಳೆದಿಂಡು ಉಪಯೋಗಿಸಿ ಆಕರ್ಷಕವಾಗಿ ಬಲಿಯೇಂದ್ರ ಪ್ರತಿಕೃತಿ ತಯಾರಿಸಲಾಗಿತ್ತು. ಬಳಿಕ ಕಚೇರಿಯನ್ನು ಹಣತೆ ಬೆಳಕುಗಳಿಂದ ಶೃಂಗರಿಸಲಾಯಿತು. ತುಳುನಾಡ ಸಂಪ್ರದಾಯದಂತೆ ಸಿಹಿಯವಲಕ್ಕಿ ಹಾಗೂ ಪಾನಕ ವಿತರಣೆ ನಡೆಯಿತು.