HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಗಾನ ಪಯಣಕ್ಕೆ ಮೈಸೂರಿನಲ್ಲಿ ಅಂತ್ಯ ಹಾಡಲಿದ್ದಾರೆ ಗಾನಕೋಗಿಲೆ ಎಸ್. ಜಾನಕಿ! ಮೈಸೂರು : ಗಾಯನ ಕೇತ್ರದಲ್ಲಿ ಭಾರತ ಮಾತ್ರವಲ್ಲದೆ, ವಿಶ್ವದ ಅನೇಕ ರಾಷ್ಟ್ರಗಳಲ್ಲಿ ತಮ್ಮದೇ ಆದ ಅಭಿಮಾನಿಗಳ ಬೃಹತ್ ಪಡೆಯನ್ನೇ ಹೊಂದಿರುವ ಹಿರಿಯ ಬಹುಭಾಷಾ ಗಾಯಕಿ ಎಸ್. ಜಾನಕಿ ಅವರು ಸಾಂಸ್ಕೃತಿಕ ವಿದಾಯ ಹೇಳಲಿದ್ದಾರೆ. ಎಸ್.ಜಾನಕಿ ಅವರು ಕೊನೆಯ ಕಾರ್ಯಕ್ರಮಕ್ಕೆ ಅ.28 ರಂದು ಮೈಸೂರು ವಿಶ್ವವಿದ್ಯಾನಿಲಯದ ಬಯಲು ರಂಗಮಂದಿರ ಸಾಕ್ಷಿಯಾಗಲಿದೆ. ಹೌದು, ಈ ಕುರಿತು ಸ್ವತಃ ಎಸ್. ಜಾನಕಿಯವರೇ ತಿಳಿಸಿದ್ದಾರೆ. ಅವರು ನಾನು ಸಂಗೀತ ಕಲಿತಿಲ್ಲ. ಕೇವಲ ಹತ್ತು ತಿಂಗಳಷ್ಟೇ ಸಂಗೀತ ಕಲಿಯಲು ಹೋಗಿದ್ದೆ. ಆದರೆ ದೈವದತ್ತವಾಗಿ ಬಂದ ಕೊಡುಗೆಯಿಂದ ಯಾವುದೇ ಶೈಲಿ ಹಾಡುಗಳನ್ನು ಕೊಟ್ಟಳು ಸರಾಗವಾಗಿ ಹಾಡಿದ್ದೇನೆ. ಕೆಲವರಿಗೆ ದೈವದತ್ತವಾಗಿ ಉತ್ತಮ ಧ್ವನಿ ಇರುತ್ತದೆ. ಅಂತಹ ಅವರು ಸರಾಗವಾಗಿ ಹಾಡುತ್ತಾರೆ ಎಂದರು. ಪ್ರಸಿದ್ಧ ಸಂಗೀತ ನಿದರ್ೇಶಕರು ನನ್ನಿಂದ ಒಳ್ಳೆಯ ಹಾಡುಗಳನ್ನು ಹಾಡಿಸಿದ್ದಾರೆ. ಅದರ ಬಗ್ಗೆ ನನಗೆ ಸಂತೃಪ್ತಿಯಿದೆ. ನನಗೀಗ 80 ವರ್ಷ ವಯಸ್ಸು. ಇನ್ನೂ ಹಾಡಬಾರದು ಈಗ ಹಾಡುವುದನ್ನು ನಿಲ್ಲಿಸಿದರೆ ಚೆಂದ ಅನಿಸುತ್ತದೆ. ಆದ್ದರಿಂದ ಗಾಯನಕ್ಕೆ ವಿದಾಯ ಹೇಳುತ್ತಿದ್ದೇನೆ. ಈಗ ಹಾಡುವವರು ಅನೇಕ ಮಂದಿ ಇದ್ದಾರೆ. ಇಂದಿನ ಮಕ್ಕಳು ಅದ್ಭುತವಾಗಿ ಹಾಡುತ್ತಿದ್ದಾರೆ. ರಿಯಾಲಿಟಿ ಶೋಗಳಲ್ಲಿ ಮಕ್ಕಳು ಹಾಡುವುದನ್ನು ನೋಡಿದ್ದೇನೆ. ಮಕ್ಕಳಿಂದಲೇ ಕಲಿಯುವ ಅನೇಕ ವಿಷಯಗಳಿವೆ ಎಂದರು. 1952ರಲ್ಲಿ ಜಿ. ಕೆ ವೆಂಕಟೇಶ್ ಅವರು ಮೈಸೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಿ. ಬಿ ಶ್ರೀನಿವಾಸ್ ಅವರೊಂದಿಗೆ ಹಾಡಿದ್ದೇ. ಆದರೆ ಆ ಕಾರ್ಯಕ್ರಮ ನಡೆದ ಸ್ಥಳದ ಬಗ್ಗೆ ನನಗೆ ನೆನಪಿಲ್ಲ. ನಾಲ್ಕು ರಸ್ತೆಗಳು ಸೇರುವ ಸ್ಥಳದಲ್ಲಿದ್ದ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮವನ್ನು ವೀಕ್ಷಿಸಲು ಭಾರಿ ಸಂಖ್ಯೆಯಲ್ಲಿ ಸಂಗೀತ ಪ್ರಿಯರು ಸೇರಿದ್ದರು. ಅನಂತರ ನಾನು ಮೈಸೂರಿನ ಯಾವುದೇ ಕಾರ್ಯಕ್ರಮದಲ್ಲಿ ಹಾಡಿರಲಿಲ್ಲ. ನನ್ನ ಮಕ್ಕಳಂತಿರುವ ನವೀನ್, ಪ್ರವೀಣ್ ಮತ್ತು ಪವನ್ ಅವರು ಕಳೆದ ಹತ್ತು ವರ್ಷಗಳಿಂದಲೂ ಮೈಸೂರಿನಲ್ಲಿ ಕಾರ್ಯಕ್ರಮ ನಡೆಸಿಕೊಡುವಂತೆ ಕೇಳುತ್ತಿದ್ದರು. ಹಲವು ಅಡೆತಡೆಗಳಿಂದ ಅದು ಈಡೇರಲಿಲ್ಲ. ಅವರ ಮೇಲಿನ ಪ್ರೀತಿಗಾಗಿ ಅಕ್ಟೋಬರ್ 28 ರಂದು ಸಂಜೆ ಆರು ಗಂಟೆಗೆ ಹಾಡುತ್ತಿದ್ದೇನೆ. ಅದುವೇ ನನ್ನ ಕಟ್ಟ ಕಡೆಯ ಕಾರ್ಯಕ್ರಮವಾಗಿರುತ್ತದೆ ಎಂದು ಅವರು ಸ್ಪಷ್ಟವಾಗಿ ನುಡಿದರು. ವಯಸ್ಸಾದ ಹಿನ್ನೆಲೆಯಲ್ಲಿ ಗಾಯನದಿಂದ ಹಿಂದೆ ಸರಿಯುತ್ತಿದ್ದೇನೆ. ಮೈಸೂರಿನ ಕಾರ್ಯಕ್ರಮದ ನಂತರ ಯಾವುದೇ ಕಾರ್ಯಕ್ರಮದಲ್ಲೂ ಮುಖ್ಯ ಅತಿಥಿಯಾಗಿಯೂ ಸಹ ಭಾಗವಹಿಸುವುದಿಲ್ಲ . ಟಿವಿ ಹಾಗೂ ಪತ್ರಿಕೆಗಳಿಗೆ ಸಂದರ್ಶನವನ್ನು ನೀಡುವುದಿಲ್ಲ ಎಂದು ಅವರು ತಿಳಿಸಿದರು. ಮೈಸೂರಿನ ನಂಟು ನೆನಪಿಸಿಕೊಂಡ ಗಾನ ಕೋಗಿಲೆ: ಸಾಂಸ್ಕೃತಿಕ ನಗರಿ ಮೈಸೂರಿಗೆ ನಾನು ಆಗಾಗ್ಗೆ ಬಂದು ಹೋಗಿದ್ದೇನೆ. ನಾಲ್ಕು ವರ್ಷದ ಹಿಂದೆ ಮೈಸೂರಿಗೆ ಬಂದು ಇಲ್ಲಿನ ಮಕ್ಕಳೊಂದಿಗೆ ಮೆಟ್ಟಿಲುಗಳ ಮೂಲಕ ಚಾಮುಂಡಿ ಬೆಟ್ಟವನ್ನು ಹತ್ತಿ ದೇವಿಯ ದರ್ಶನ ಪಡೆದಿದ್ದೇನೆ. ಅರಮನೆಯ ಸೊಬಗನ್ನು ಕಣ್ತುಂಬಿಕೊಂಡಿದ್ದೇನೆ. ಕೆ ಆರ್ ಎಸ್ ನ್ನು ವೀಕ್ಷಿಸಿದ್ದೇನೆ. ಮೈಸೂರು ಒಂದು ಸುಂದರ ನಗರ ಎಂದು ಅವರು ಬಣ್ಣಿಸಿದರು. ದೇಶದಲ್ಲಿಯೇ ಉತ್ತಮ ವಿಶ್ವವಿದ್ಯಾನಿಲಯ ಎಂಬ ಕೀತರ್ಿಗೆ ಪಾತ್ರವಾಗಿರುವ ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ್ದು ಹೆಮ್ಮೆ ತಂದಿದೆ ಎಂದ ಅವರು, ಮೈಸೂರಿನ ಕಾರ್ಯಕ್ರಮಕ್ಕೆ ಸಂಗೀತ ಪ್ರಿಯರನ್ನು ನನ್ನ ಅಭಿಮಾನಿಗಳನ್ನು ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಕಾರ್ಯಕ್ರಮಕ್ಕೆ ತಮಿಳುನಾಡು, ಆಂಧ್ರ ಮತ್ತು ಕೇರಳದಿಂದಲೂ ನನ್ನ ಅಭಿಮಾನಿಗಳು ಬರುವುದಾಗಿ ತಿಳಿಸಿದ್ದಾರೆ ಇದು ನನಗೆ ಸಂತಸ ತಂದಿದೆ ಎಂದು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries