ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 31, 2017
ಪೆರ್ಲ : ಗೋವಿನ ಮೂಲಕ ಕನರ್ಾಟಕ ರಾಜ್ಯವಲ್ಲದೆ, ಇಡೀ ಪ್ರಪಂಚ ಎಚ್ಚೆತ್ತುಕೊಳ್ಳುವಂತೆ ಮಾಡಿದ ರಾಘವೇಶ್ವರ ಶ್ರೀಗಳಲ್ಲಿಗೆ ಮಾನ್ಯ ಪ್ರಧಾನ ಮಂತ್ರಿಗಳೇ ಮುಂದೊಂದು ದಿನ ಆಗಮಿಸುವ ದಿನ ಸನ್ನಿಹಿತವಾಗಿದೆ. ಧರ್ಮ ರಕ್ಷಣೆಗಾಗಿ ಸಮರ್ಪಣಾ ಭಾವದಿಂದ ದುಡಿಯುವ ಪೂಜನೀಯ ಗುರುಗಳನ್ನು ಷಡ್ಯಂತ್ರದಲ್ಲಿ ಸಿಲುಕಿಸಲು ಪ್ರಯತ್ನಿಸಿದ ಎಲ್ಲರೂ ಇಂದು ನಾಚಿ ಸಮಾಜದ ಎದುರು ತಲೆ ತಗ್ಗಿಸುವಂತಹ ಪರಿಸ್ಥಿತಿ ನಿಮರ್ಾಣವಾಗಿದೆ. ಪೂಜ್ಯರ ಆಂತರಿಕವಾದ ಸಂಸ್ಕಾರದಿಂದ ಇದೆಲ್ಲ ಸಾಧ್ಯವಾಗಿದೆ ಎಂದು ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೌರವಾಧ್ಯಕ್ಷ, ಧಾಮರ್ಿಕ ಮುಂದಾಳು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಭಾನುವಾರ ಬಜಕೂಡ್ಲು ಅಮೃತಧಾರಾ ಗೋಶಾಲೆಯ `ಸಾಕೇತ' ಮಂಟಪದಲ್ಲಿ ಮುಳ್ಳೇರಿಯ ಹವ್ಯಕ ಮಂಡಲದ ನೇತೃತ್ವದಲ್ಲಿ ನಡೆದ ಶ್ರೀರಾಮಟ್ಟಾಭಿಷೇಕ ಮಹೋತ್ಸವದ ಸಂದರ್ಭದಲ್ಲಿ ಮಾತನಾಡುತ್ತಾ ಅಭಿಪ್ರಾಯಪಟ್ಟರು.
ಸತ್ ಚಿಂತನೆಗಳಿಂದ ಮನುಷ್ಯ ಉತ್ತಮ ದಾರಿಯೆಡೆಗೆ ಸಾಗಬಲ್ಲನು. ಭಾರತ ದೇಶವು ತಾಯಂದಿರಿಗೆ ಪೂಜನೀಯ ಸ್ಥಾನವನ್ನು ನೀಡಿದ ದೇಶವಾಗಿದೆ. ತಾಯಂದಿರು ಏನನ್ನು ಮಾಡಬಹುದು ಎಂಬುದನ್ನು ಇಲ್ಲಿಯ ತಾಯಂದಿರು ಸಾಧಿಸಿ ತೋರಿಸಿದ್ದಾರೆ. ಕಾರ್ಯಕರ್ತರ ಶ್ರಮದ ಸಾರ್ಥಕ ಫಲದಿಂದ ಬಜಕೂಡ್ಲು ಗೋಶಾಲೆಯೀಗ ಅಯೋಧ್ಯೆಯ `ಸಾಕೇತ'ಪುರವಾಗಿ ಗೋಚರವಾಗುತ್ತಿದೆ. ಎಲ್ಲೆಡೆಗೆ ಧರ್ಮಸಂದೇಶವನ್ನು ರವಾನೆ ಮಾಡುವ ಪುಣ್ಯ ಭೂಮಿಯಾಗಿ ಈ ಮಣ್ಣು ಮಾರ್ಪಡುವುದರಲ್ಲಿ ಸಂದೇಹವಿಲ್ಲ. ಅದಕ್ಕೆ ಪೂರಕವಾಗಿ ರಾಮಾಯಣ ನವಾಹ ನಡೆದಿದೆ. ರಾಮಾಯಣ ಪಾರಾಯಣದ ಮುಖಾಂತರ ಶ್ರೀರಾಮಚಂದ್ರನ ಪಟ್ಟಾಭಿಷೇಕ ಮಹೋತ್ಸವವು ಇಡೀ ಸಮಾಜಕ್ಕೆ ಉಪಯುಕ್ತವಾಗುವ ರೀತಿಯಲ್ಲಿ ಇಲ್ಲಿ ಸನ್ನಿಹಿತವಾಗಿದೆ. ಭವಿಷ್ಯತ್ತಿನಲ್ಲಿ ನಮ್ಮ ಮೇಲಿರುವ ಜವಾಬ್ದಾರಿ ಎಂದರೆ ಇಡೀ ಹಿಂದೂ ಸಮಾಜವನ್ನು ಸೇರಿಸಿಕೊಂಡು ನಾವು ಇಲ್ಲಿ ಮತ್ತೊಮ್ಮೆ ಅಯೋಧ್ಯೆಯ ಪುಣ್ಯಭೂಮಿಯನ್ನು ನೆನಪು ಮಾಡಬೇಕಿದೆ. ಆಧ್ಯಾತ್ಮಿಕ ಚಿಂತನೆಯ ಕೊರತೆ, ಧಾಮರ್ಿಕ ವಿಚಾರದ ಅರಿವಿನ ಕೊರತೆಯಿಂದಾಗಿ ಒಂದು ಭಾಗದಿಂದ ಅಕ್ರಮಿಗಳು ಗೋವಿನ ಹತ್ಯೆಯನ್ನು ಮಾಡುತ್ತಿದ್ದರೆ, ಮತ್ತೊಂದೆಡೆ ಸಹೋದರಿಯರ ಸಂಸ್ಕಾರವನ್ನು ಹತ್ಯೆಮಾಡುವಂತಹ ಪ್ರಯತ್ನದಲ್ಲಿ ಮುಂದುವರಿಯುವ ಕಾಲದಲ್ಲಿ ಭಾರತೀಯ ಸಂಸ್ಕಾರದ ಉಳಿವಿಗೋಸ್ಕರವಾಗಿ, ಸಮಾಜದ ಉಳಿವಿಗಾಗಿ, ಇಡೀ ಪ್ರಪಂಚದ ಉಳಿವಿಗಾಗಿ ಗೋವಿನ ಮುಖಾಂತರ ಸಾಧನೆ ಮಾಡುವಂತಹ ಸಂಕಲ್ಪವನ್ನಿರಿಸಿಕೊಂಡಿರುವ ಪೂಜನೀಯ ರಾಘವೇಶ್ವರ ಶ್ರೀಗಳ ಕನಸು ಇಂದು ಸಮಾಜದಲ್ಲಿ ಸಮರ್ಪಣಾ ಭಾವದಲ್ಲಿ ತೊಡಗಿಸಿಕೊಂಡಿರುವುದರಿಂದ ಪೂರ್ಣವಾಗಿ ನಮಗೆ ಒದಗಿ ಬರಲು ಅವಕಾಶವಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ರಾಮಾಯಣ ಪಾರಾಯಣದಲ್ಲಿ ಪಾಲ್ಗೊಂಡ ಮುಳ್ಳೇರಿಯ ಹವ್ಯಕ ಮಂಡಲದ ವಿವಿಧ ವಲಯಗಳ ಪಾರಾಯಣಕರ್ತರನ್ನು ಗೌರವಿಸಲಾಯಿತು. ವೇದಮೂತರ್ಿ ಪಳ್ಳತ್ತಡ್ಕ ಪರಮೇಶ್ವರ ಭಟ್, ಬಿ.ಜಿ.ರಾಮಭಟ್, ಈಶ್ವರಿ ಬೇರ್ಕಡವು, ಹರಿಪ್ರಸಾದ ಪೆರಿಯಪ್ಪು, ಪ್ರೊ.ಶ್ರೀಕೃಷ್ಣ ಭಟ್ ಮೊದಲಾದವರು ಉಪಸ್ಥಿತರಿದ್ದರು.