ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 14, 2017
ಅಳಿವಿನಂಚಿನ ಸಸ್ಯಗಳ ಕುರಿತ ಅಧ್ಯಯನ ಶಿಬಿರ
ಕಾಸರಗೋಡು: ಕಾಸರಗೋಡು ಸರಕಾರಿ ಕಾಲೇಜಿನ ಭೂಮಿತ್ರ ಸೇನಾ ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆಯ ಸಹಕಾರದೊಂದಿಗೆ ಮೂರು ದಿನಗಳ ಪರಿಸರ ಅಧ್ಯಯನ ಶಿಬಿರವನ್ನು ಎಣ್ಮಕಜೆ ಪಂಚಾಯತು ಬೆದ್ರಂಪಳ್ಳದಲ್ಲಿ ಹಮ್ಮಿಕೊಂಡಿತು.
ಭೂಮಿತ್ರ ಸೇನಾ ಕ್ಲಬ್ ಸಂಯೋಜಕ ಪ್ರೊ.ಮಹಮ್ಮದಾಲಿ ಕೆ.ಪೆರ್ಲ ಅವರ ನಿವಾಸದಲ್ಲಿ ನಡೆಸಿದ ಶಿಬಿರದಲ್ಲಿ 55 ವಿದ್ಯಾಥರ್ಿಗಳು ಹಾಗೂ ಪ್ರಾಧ್ಯಾಪಕರು ಭಾಗವಹಿಸಿದರು. ಶಿಬಿರದ ಅಂಗವಾಗಿ ಟ್ರಕ್ಕಿಂಗ್ ಹಾಗೂ ತರಗತಿಗಳನ್ನು ಹಮ್ಮಿಕೊಳ್ಳಲಾಯಿತು. ಟ್ರಕ್ಕಿಂಗ್ ವೇಳೆ ಪಶ್ಚಿಮ ಘಟ್ಟದ ಅಳಿವಿನಂಚಿನ ಸಸ್ಯಗಳ ಕುರಿತಾಗಿ ವಿಶೇಷ ಮಾಹಿತಿಯನ್ನು ಒದಗಿಸಲಾಯಿತು. ಜತೆಗೆ ಅಂತರ್ಜಲ, ಮರುಪೂರಣ, ವಿವಿಧ ತರದ ಔಷಧ ಸಸ್ಯಗಳು, ಫಲಪುಷ್ಪಗಳ ಕುರಿತಾಗಿ ಮಾಹಿತಿಯನ್ನು ಒದಗಿಸಲಾಯಿತು.
ಊರಿನ ಹಿರಿಯ ವ್ಯಕ್ತಿಗಳನ್ನು ಟ್ರಕ್ಕಿಂಗ್ ವೇಳೆ ಸಂದರ್ಶನ ಮಾಡಿ ಮರಗಳ ಔಷಧ ಗುಣಗಳು, ಅವುಗಳ ನಂಬಿಕೆಗಳ ಕುರಿತು ದಾಖಲಾತಿಯನ್ನು ನಡೆಸಲಾಯಿತು. ಶಿಬಿರದ ಉದ್ಘಾಟನೆಯನ್ನು ಎಣ್ಮಕಜೆ ಗ್ರಾಮ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷೆ ಆಯಿಷಾ ಪೆರ್ಲ ನಿರ್ವಹಿಸಿದರು. ಕಾಲೇಜು ಪ್ರಾಂಶುಪಾಲ ಡಾ.ಅರವಿಂದ ಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ.ಟಿ.ವಿನಯನ್ ಉಪಸ್ಥಿತರಿದ್ದರು. ಶಿಬಿರದ ಸಮಾರೋಪವನ್ನು ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷೆ ರೂಪವಾಣಿ ಆರ್.ಭಟ್ ನಿರ್ವಹಿಸಿದರು. ಪ್ರೊ.ಮಹಮ್ಮದಾಲಿ ಕೆ.ಪೆರ್ಲ ಅಧ್ಯಕ್ಷತೆ ವಹಿಸಿದರು. ಎಣ್ಮಕಜೆ ಗ್ರಾಮ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಉದಯ ಚೆಟ್ಟಿಯಾರ್, ಪಂಚಾಯತು ಸದಸ್ಯೆ ಮಾಲತಿ ರೈ, ಮಹಮ್ಮದಾಲಿ ಪೆರ್ಲ, ಪ್ರಾಧ್ಯಾಪಕರುಗಳಾದ ಪ್ರೊ.ಶ್ರೀದೇವ್, ಪ್ರೊ.ಪವಿತಾ ಮೊಂತೆರೊ, ಪ್ರೊ.ಜ್ಯೋತಿ ಉಪಸ್ಥಿತರಿದ್ದರು. ಉದ್ಘಾಟನೆ ಹಾಗೂ ಸಮಾರೋಪ ವಿಶಿಷ್ಟ ಶೈಲಿಯಲ್ಲಾಗಿತ್ತು. ಹುಣಸೆ ಗಿಡಕ್ಕೆ ನೀರು ಹಾಯಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಲಾಯಿತು. ಭಾಗವಹಿಸಿದ ಅತಿಥಿಗಳಿಗೆ ಸ್ಮರಣಿಕೆಯ ರೂಪದಲ್ಲಿ ಹೊನ್ನೆ ಗಿಡಗಳನ್ನು ನೀಡಲಾಯಿತು.
ಎನ್ನೆಸ್ಸೆಸ್ - ಭೂಮಿತ್ರ ಸೇನಾ ಕಾರ್ಯದಶರ್ಿಗಳಾದ ಶ್ರೀಜಿತ್, ಶೀಬಾ, ಪ್ರಶಾಂತ್, ಬೈಜೇಶ್, ಅಕ್ಷತಾ, ಅನಿಲ್ ಕುಮಾರ್, ಶಿಬಾಬ್, ಹರಿಣಿ, ವೈಶಾಖ್, ರಜೀಶಾ, ಅಮೃತಾ, ಅಖಿಲ್, ಸ್ವಪ್ನಾ, ಶ್ರೀಶಿಲ್ಪಾ, ಮನೀಶ್ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು.