ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 31, 2017
ಪ್ರತಿಭಾ ದಿನಾಚರಣೆ
ಮಂಜೇಶ್ವರ: ವಿದ್ಯಾಥರ್ಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸಿ, ವೇದಿಕೆ ಕಲ್ಪಿಸುವ ಶಾಲಾ ಚಟುವಟಿಕೆಗಳು ಅಗತ್ಯ. ವಿದ್ಯಾಥರ್ಿಗಳು ಇಂತಹ ಅವಕಾಶಗಳನ್ನು ಸದುಪಯೋಗಪಡಿಸಬೇಕು ಎಮದು ಮೀಯಪದವು ವಿದ್ಯಾವರ್ಧಕ ವಿದ್ಯಾಸಂಸ್ಥೆಗಳ ಸಂಚಾಲಕ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೊಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಜೇಶ್ವರ ಶ್ರೀಮದ್ ಅನಂತೇಶ್ವರ ಶಾಲೆಯಲ್ಲಿ ಕಲೋತ್ಸವದ ಅಂಗವಾಗಿ ಮಂಗಳವಾರ ನಡೆದ ಪ್ರತಿಭಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಪ್ರಬಂಧಕ ಎಂ.ದಿನೇಶ್ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಗ್ರಾ.ಪಂ. ಸದಸ್ಯೆ ಸುಪ್ರಿಯಾ ಶೆಣೈ, ಶಾಲಾ ಪ್ರಾಂಶುಪಾಲೆ ಕೃಷ್ಣಕುಮಾರಿ, ಉಸ್ತುವಾರಿ ಪ್ರಾಂಶುಪಾಲ ಕಿರಣ್ ಕುಮಾರ್ ಮಂಜೇಶ್ವರ ಉಪಸ್ಥಿತರಿದ್ದು ಮಾತನಾಡಿದರು. ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ವಿಜೇತ ವಿದ್ಯಾಥರ್ಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ನೂತನ ಕಟ್ಟಡ ನಿಮರ್ಾಣಕ್ಕೆ ಕಾರಣೀಭೂತರಾದ ಎಂ.ದಿನೇಶ್ ಶೆಣೈ ಯವರನ್ನು ಈ ಸಂದರ್ಭ ಗೌರವಿಸಲಾಯಿತು. ಕಿರಣ್ ಕುಮಾರ್ ಸ್ವಾಗತಿಇಸ, ಶಮರ್ಿಳಾ ಟೀಚರ್ ವಂದಿಸಿದರು. ಸಫ್ವಾನ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿವಿಧ ಸಾಂಸ್ಕೃತಿಕ ವೈವಿಧ್ಯಗಳು ನಡೆಯಿತು.