ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 31, 2017
ಸರಕಾರದ ಮಾನದಂಡಗಳನುಸಾರ ವಿದ್ಯುತ್ ಸಂಪರ್ಕ ನೀಡುವುದನ್ನು ಕಟ್ಟುನಿಟ್ಟುಗೊಳಿಸಬೇಕು-ಶಾಸಕ ರಝಾಕ್.
ಕುಂಬಳೆ: ಕೇರಳದ ಅತ್ಯುತ್ತರ ಭಾಗದಲಲಿರುವ ಕಾಸರಗೊಡು ಜಿಲ್ಲೆಗೆ ಸರಕಾರದ ಬಹುತೇಕ ಯೋಜನೆಗಳು ತಲಪುವಲ್ಲಿ ತೀವ್ರ ಹಿನ್ನಡೆಯಿದೆ. ನೂತನ ತಂತ್ರಜ್ಞಾನ, ಯೋಜನೆಗಳು ಗ್ರಾಮೀಣ ಪ್ರದೇಶಕ್ಕೆ ತಲಪುವಲ್ಲಿ ವ್ಯಾಪಕ ವಿಳಂಬ ಮತ್ತು ಸಮರ್ಥ ಅಧಿಕಾರಿಗಳ ಕೊರತೆ ಎದುರಿಸುತ್ತಿದೆ ಎಂದು ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕೇರಳ ಇಲೆಕ್ಟ್ರಿಕಲ್ ವಯರ್ಮೆನ್ ಆಂಡ್ ಸೂಪರ್ ವೈಸರ್ಸ್ ಅಸೋಸಿಯೇಶನ್(ಕೆಇಡಬ್ಲುಎಸ್ಎ) ರಾಜ್ಯ ಸಮ್ಮೇಳನದ ಪೂರ್ವಭಾವಿಯಾಗಿ ಕುಂಬಳೆಯಲ್ಲಿ ಸೋಮವಾರ ಸಂಜೆ ನಡೆದ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರದ ಕಠಿಣ ಕಾನೂನುಗಳ ಮೂಲಕ ಅಪರಾಧ, ಅಪಘಾತಗಳನ್ನು ನಿಯಂತ್ರಿಸಬಹುದಾದರೂ, ಅವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಲ್ಲಿ ಸಮರ್ಥ ಅಧಿಕಾರಿಗಳ ಕೊರತೆ ಕಂಡುಬರುತ್ತಿದೆ. ಈ ಬಗ್ಗೆ ಜನಜಾಗೃತಿ ಮೂಡಿಸುವಲ್ಲಿ ಅಸೋಸಿಯೇಶನ್ ನಿರ್ವಹಿಸುವ ಜವಾಬ್ದಾರಿಯುತ ಪಾತ್ರ ಸ್ತುತ್ಯರ್ಹವಾದುದು ಎಂದು ತಿಳಿಸಿದ ಅವರು, ಮನೆಗಳ ವಿದ್ಯುತ್ತೀಕರಣದ ಸಂದರ್ಭ ಸರಕಾರ ನಿಗದಿಪಡಿಸಿದ ಮಾನದಂಡಗಳಿಗನುಸಾರವಾಗಿ ಮಾತ್ರ ಪರವಾನಿಗೆ ನೀಡುವ ಬಗ್ಗೆ ಅಸೋಸಿಯೇಶನ್ ಕಾರ್ಯನಿರತವಾಗಬೇಕು ಎಂದು ಅವರು ತಿಳಿಸಿದರು.
ಅಸೋಸಿಯೇಶನ್ ಜಿಲ್ಲಾಧ್ಯಕ್ಷ ಮ್ಯಾಥ್ಯು ಜೋನ್ ಅಧ್ಯಕ್ಷತೆ ವಹಿಸಿದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಅಸೋಸಿಯೇಶನ್ ರಾಜ್ಯಾಧ್ಯಕ್ಷ ವಿ.ಎಸ್.ಸಜೀವನ್ ಮಾತನಾಡಿ, ಸರಕಾರದ ಅಂಗೀಕಾರವಿಲ್ಲದ ಅನನುಭವಿ ವಿದ್ಯುತ್ ವಯರಿಂಗ್ ಕಾಮರ್ಿಕರಿಂದ ವ್ಯಾಪಕ ಅಪಾಯ, ನಾಶ-ನಷ್ಟಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದರೂ ನಾಗರಿಕರು ಗಂಭೀರವಾಗಿ ಪರಿಗಣಿಸದಿರುವುದು ಆತಂಕಕಾರಿ ಬೆಳವಣಿಗೆ ಎಂದು ತಿಳಿಸಿದರು. ಪರವಾನಿಗೆ ಇರುವ ವಯರಿಂಗ್ ಕಾಮರ್ಿಕರಿಂದ ಮನೆ ಸಹಿತ ಕಟ್ಟಡಗಳ ವಿದ್ಯುತ್ತೀಕರಣ ಕಾಮಗಾರಿ ನಡೆಸುವ ಬಗ್ಗೆ, ಗುಣಮಟ್ಟದ ವಿದ್ಯುತ್ ಉಪಕರಣಗಳನ್ನು ಸ್ಥಾಪಿಸುವುದೇ ಮೊದಲಾದ ಗಮನಾರ್ಹ ವಿಷಯಗಳಲ್ಲಿ ಅಸೋಸಿಯೇಶನ್ ಸಮಾಜದೊಂದಿಗೆ ಒಂದಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯ ಪ್ರಧಾನ ಕಾರ್ಯದಶರ್ಿ ಪಿ.ತಂಬಾನ್ ಸಂಘಟನಾ ವಿವರಗಳ ಬಗ್ಗೆ ಮಾತನಾಡಿದರು. ರಾಜ್ಯ ಕೋಶಾಧಿಕಾರಿ ವಿ.ವಿ.ಪ್ರಸನ್ನಕುಮಾರ್, ಕುಂಬಳೆ ಗ್ರಾಮ ಪಂಚಾಯತು ಸದಸ್ಯ ರಮೇಶ್ ಭಟ್, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಕುಂಬಳೆ ಘಟಕಾಧ್ಯಕ್ಷ ವಿಕ್ರಂ ಪೈ ಶುಭಾಶಂಸನೆಗೈದರು.
ಈ ಸಂದರ್ಭ ಸಂಘಟನೆ ವತಿಯಿಂದ ವಿತರಿಸಲಾಗುವ ಜೀವ ಕಾರುಣ್ಯ ಸಹಾಯ ನಿಧಿ, ಚಿಕಿತ್ಸಾ ಸಹಾಯ, ಎ.ವಿ.ಸುಕುಮಾರನ್ ಸ್ಮಾರಕ ಸಹಾಯಗಳ ವಿತರಣೆಯನನು ಕುಂಬಳೆ ಗ್ರಾಮ ಪಂಚಾಯತು ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್, ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಟಿ.ವಿ.ಕುಮಾರನ್ ಹಾಗು ಜಿಲ್ಲಾ ಕಾರ್ಯದಶರ್ಿ ಟಿ.ಅನಿಲ್ ಕುಮಾರ್ ವಿತರಿಸಿದರು.
ಸಂಘಟನೆಯ ಜಿಲ್ಲಾ ರಕ್ಷಾಧಿಕಾರಿ ಕೃಷ್ಣನ್ ಕೋಟೋಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಅಬ್ದುಲ್ಲ ವಂದಿಸಿದರು. ಜಿಲ್ಲಾ ಸಮ್ಮೇಳನದ ಅಂಗವಾಗಿ ಬೆಳಿಗ್ಗೆ ಧ್ವಜಾರೋಹಣ, ವಿವಿಧ ವಿಷಯಗಳ ಚಚರ್ೆ, ಗುಣಮಟ್ಟದ ವಿದ್ಯುತ್ ಉಪಕರಣಗಳ ಮಾರ್ಗದಶರ್ಿ ಪ್ರದರ್ಶನ, ಹಾಗು ಸಮ್ಮೇಳನದ ಭಾಗವಾಗಿ ಕುಂಬಳೆ ಪೇಟೆಯಲ್ಲಿ ಬೃಹತ್ ಮೆರವಣಿಗೆ ನಡೆಯಿತು.