ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 12, 2017
ಉಪ್ಪಳ: ವಿದ್ಯಾಥರ್ಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಪ್ರಾತ್ಸಾಹ ಅಗತ್ಯವಿದೆ. ವಿದ್ಯಾಥರ್ಿಗಳಲ್ಲಿರುವ ಸುಫ್ತ ಪ್ರತಿಭೆಯ ಅನಾವರಣಕ್ಕೆ ಯುವಜನೋತ್ಸವಗಳು ದಾರಿಮಾಡಿಕೊಡುತ್ತವೆ ಎಂದು ಪ್ರಾಂಶುಪಾಲ ಕುಂಞಿಕೃಷ್ಣನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪೈವಳಿಕೆ ಕಾಯರ್ಕಟ್ಟೆಯ ಸರಕಾರಿ ಫ್ರೌಢಶಾಲೆಯಲ್ಲಿ ಬುಧವಾರ ನಡೆದ ಹಾಲಿ ವರ್ಷದ ಶಾಲಾ ಯುವಜನೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ, ಹೈಯರ್ ಸೆಕೆಂಡರಿ ವಿಭಾಗದ ಹಿರಿಯ ಶಿಕ್ಷಕ ಸುರೇಶ್ ಉಪಸ್ಥಿತರಿದ್ದು ಶುಭಾಶಂಸನೆಗೈದರು. ಕಿರಿಯ ಪ್ರಾಥಮಿಕ ಶಾಲಾ ರಕ್ಷಕ ಶಿಕ್ಷಕ ಸಂಘದ ಅಹಮ್ಮದಾಲಿ, ಮಾತೃಸಂಘದ ಅಧ್ಯಕ್ಷೆ ರೋಹಿಣಿ, ಉಪಾಧ್ಯಕ್ಷೆ ನಫೀಸಾ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ವೆಂಕಟರಮಣ ನಾಯಕ್ ಸ್ವಾಗತಿಸಿ, ಶಿಕ್ಷಕ ಧಮರ್ೇಂದ್ರ ಆಚಾರ್ಯ ವಂದಿಸಿದರು. ಶಿಕ್ಷಕರಾದ ಸಂಜೀವ ಮಾಸ್ತರ್ ಹಾಗು ಬಾಬುರಾಜ್ ಕಾರ್ಯಕ್ರಮ ನಿರೂಪಿಸಿದರು.