ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 06, 2017
ಏರ್ ಟೆಲ್ ನಿಂದ ಹೊಸ ಪ್ಲ್ಯಾನ್,ದಿನಕ್ಕೆ 1.5 ಜಿಬಿ ಡೇಟಾ!
ದೆಹಲಿ: ರಿಲಯನ್ಸ್ ಜಿಯೋಗೆ ಪೈಪೋಟಿ ನೀಡಲು ಭಾತರ್ಿ ಏರ್ ಟೆಲ್ ತನ್ನ 349ರುಗಳ ಯೋಜನೆಯಲ್ಲಿ ಸುಧಾರಣೆ ಮಾಡಿದೆ. ಅದೇ ದರಕ್ಕೆ ಹೆಚ್ಚು ಡೇಟಾ ನೀಡಲು ಮುಂದಾಗಿದೆ.
ಇದರ ಜೊತೆಗೆ ಏರ್ ಟೆಲ್ ಮತ್ತೊಂದು ಹೊಸ ಪ್ಲಾನ್ ಪರಿಚಯಿಸಿದೆ. 448 ರೂ. ಗೆ ಅನಿಯಮಿತ ಕರೆ ಮತ್ತು ದಿನಕ್ಕೆ 1 ಜಿ.ಬಿ. ಡೇಟಾವನ್ನು 70 ದಿನಗಳ ಅವಧಿಗೆ ನೀಡಲಿದೆ.
ರಿಲಯನ್ಸ್ ಜಿಯೊ 399 ರೂ. ಪ್ಲಾನ್ ಎದುರಿಸಲು ಏರ್ ಟೆಲ್ ಹೊಸ 448 ರೂ. ಯೋಜನೆಯನ್ನು ಹೊರತಂದಿದೆ. ಆದರೆ, ಈ ಪ್ರೀಪೇಯ್ಡ್ ಯೋಜನೆ ಆಯ್ದ ಗ್ರಾಹಕರಿಗೆ ಮಾತ್ರ ಲಭ್ಯ.
ಇತ್ತೀಚೆಗೆ ವೋಡಾಫೋನ್ 84 ದಿನಗಳ ವ್ಯಾಲಿಡಿಟಿ ಇರುವ 496ರುಗಳ ಪ್ಲ್ಯಾನ್ ತಂದಿತ್ತು. ಐಡಿಯಾ 498ರುಗೆ ಇಂಥದ್ದೇ ಪ್ಲ್ಯಾನ್ ಹೊಂದಿದೆ. ಈ ಕಂಪನಿಗಳ ವಿಲೀನದ ನಂತರ ಅತಿದೊಡ್ಡ ಟೆಲಿಕಾಂ ಕಂಪನಿ ಎಂಬ ಪಟ್ಟದಿಂದ ಏರ್ ಟೆಲ್ ಕೆಳಗಿಳಿಯಬೇಕಾಗುತ್ತದೆ.
448 ರೂ. ಯೋಜನೆ ಹೊಂದಿರುವ ಏರ್ ಟೆಲ್ ಪ್ರೀಪೇಯ್ಡ್ ಚಂದಾದಾರರು ದಿನಕ್ಕೆ 1 ಜಿ.ಬಿ. 3 ಜಿ ಅಥವಾ 4 ಜಿ ಡೇಟಾವನ್ನು 70 ದಿನಗಳವರೆಗೆ ಪಡೆದುಕೊಳ್ಳುತ್ತಾರೆ. ಈ ಅವಧಿಗೆ ಒಟ್ಟು 70 ಜಿ.ಬಿ. ಡೇಟಾ ದಿನಕ್ಕೆ 1 ಮೀರಿದ ಬಳಿಕ ಡೇಟಾ ವೇಗವು 64 ಞಛಠಿ ಗೆ ಇಳಿಯುತ್ತದೆ.
349 ರು ಹೊಸ ಪ್ಲ್ಯಾನ್: ಪ್ರತಿ ದಿನಕ್ಕೆ 1.5 ಜಿಬಿ ಡೇಟಾ, ಅನಿಯಮಿತ ಸ್ಥಳೀಯ ಹಾಗೂ ಎಸ್ಟಿಡಿ ಕರೆಗಳು, 3,000 ಎಸ್ಎಂಎಸ್ ಉಚಿತ. ಆದರೆ, ಈ ಯೋಜನೆಯ ವ್ಯಾಲಿಡಿಟಿ 28ದಿನಗಳು ಮಾತ್ರ. ಅನಿಯಮಿತ ಎಂದಿದ್ದರೂ ದಿನಕ್ಕೆ 250ನಿಮಿಷ ಮಾತ್ರ ಉಚಿತವಾಗಿರುತ್ತದೆ ನಂತರ 10 ಪೈಸೆ ಪ್ರತಿ ಕರೆ ದರದಂತೆ ಶುಲ್ಕ ವಿಧಿಸಲಾಗುತ್ತದೆ.