ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 08, 2017
ಮಲ್ಯ, ಲಲಿತ್ ಹಸ್ತಾಂತರ ಪ್ರಕ್ರಿಯೆ ಚುರುಕಿಗೆ ಮನವಿ
ನವದೆಹಲಿ: ಭಾರತದಿಂದ ಪಲಾಯನ ಮಾಡಿರುವ ಉದ್ಯಮಿಗಳಾದ ವಿಜಯ್ ಮಲ್ಯ, ಲಲಿತ್ ಮೋದಿ ಸೇರಿದಂತೆ 13 ಮಂದಿಯ ಹಸ್ತಾಂತರ ಪ್ರಕ್ರಿಯೆಗೆ ಇನ್ನಷ್ಟು ವೇಗ ನೀಡುವಂತೆ ಬ್ರಿಟನ್ಗೆ ಭಾರತ ಮನವಿ ಮಾಡಿದೆ.
ಕಾಶ್ಮೀರ ಮತ್ತು ಖಲಿಸ್ತಾನದ ಪ್ರತ್ಯೇಕತಾವಾದಿಗಳು ಬ್ರಿಟನ್ ನೆಲವನ್ನು ಬಳಸುವುದಕ್ಕೆ ಅವಕಾಶ ನೀಡದಂತೆಯೂ ಅದು ಕೋರಿದೆ.
ಬ್ರಿಟನ್ನ ವಲಸೆ ಸಚಿವ ಬ್ರಾಂಡನ್ ಲೆವಿಸ್ ಅವರೊಂದಿಗೆ ಸೋಮವಾರ ನವದೆಹಲಿಯಲ್ಲಿ ನಡೆಸಿದ ಮಾತುಕತೆಯ ಸಂದರ್ಭದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಈ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.
ತಲೆ ಮರೆಸಿಕೊಂಡಿರುವ 13 ಜನರ ಹಸ್ತಾಂತರ ಸೇರಿದಂತೆ ಇತರ 16 ಕ್ರಿಮಿನಲ್ಗಳ ವಿಚಾರಣೆಗಾಗಿ ಕಾನೂನಿನ ನೆರವು ನೀಡುವಂತೆಯೂ ಲೆವಿಸ್ ಅವರನ್ನು ರಿಜಿಜು ಕೇಳಿಕೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹತ್ಯೆ ಪ್ರಕರಣಗಳ ಸಂಬಂಧ ಬ್ರಿಟನ್ಗೆ ಬೇಕಾಗಿರುವ ಮೊಹಮ್ಮದ್ ಅಬ್ದುಲ್ ಶಕೂರ್ನ ಹಸ್ತಾಂತರಕ್ಕೆ ಎಲ್ಲ ಸಹಕಾರ ನೀಡುವ ಭರವಸೆಯನ್ನು ರಿಜಿಜು ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ