ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 06, 2017
14 ವಾಹನಗಳನ್ನು ಓಡಿಸಿ ದಾಖಲೆ ಬರೆದ 7 ವರ್ಷದ ಬಾಲಕಿ
ಮೈಸೂರು: 7 ವರ್ಷದ ಬಾಲಕಿಯೊಬ್ಬಳು 14 ವಾಹನಗಳನ್ನು ಚಾಲನೆ ಮಾಡುವ ಮೂಲಕ 'ಗೋಲ್ಡನ್ ಬುಕ್ ಆಫ್ ವಲ್ಡರ್್ ರೆಕಾಡ್ಸರ್್'ನಲ್ಲಿ ದಾಖಲೆ ನಿಮರ್ಿಸಿದ್ದಾಳೆ.
2 ತರಗತಿ ಓದುತ್ತಿರುವ ರಿಫಾ ತಸ್ಕೀನ್ ದಾಖಲೆ ನಿಮರ್ಿಸಿರುವ ಪುಟ್ಟ ಬಾಲಕಿಯಾಗಿದ್ದಾಳೆ. ದ್ವಿಚಕ್ರ ವಾಹನದಿಂದ ಬಹುಚತ್ರದ ಲಾರಿಯ ಸ್ವೀರಿಂಗ್ ಹಿಡಿದ ಕುಳಿತ ಬಾಲಕಿ ದೂಳೆಬ್ಬಿಸುವ ವೇಗದಲ್ಲಿ ಮೈಸೂರಿನ ಈದ್ಗಾ ಮೈದಾನದಲ್ಲಿ ಹಲವು ಸುತ್ತುಗಳನ್ನು ಹಾಕುವ ಮೂಲಕ ನೆರೆದಿದ್ದ ಜನರಲ್ಲಿ ಅಚ್ಚರಿಯನ್ನುಂಟು ಮಾಡಿದಳು. ಬಳಿಕ ಬನ್ನಿಮಂಟಪದ ಸಂತ ಸೋಸೆಫ್ ಶಾಲೆಯ ಆವರಣದಲ್ಲಿ ಒಟ್ಟು 14 ವಾಹನಗಳನ್ನು ಚಾಲನೆ ಮಾಡಿದ್ದಾಳೆ.
'ಗೋಲ್ಡನ್ ಬುಕ್ ಆಫ್ ವಲ್ಡರ್್ ರೆಕಾಡ್ಸರ್್'ನ ತೀಪರ್ುಗಾರ ಸಂತೋಷ್ ಅಗವರ್ಾರ್ ಅವರ ಉಪಸ್ಥಿತಿಯಲ್ಲಿ ರಿಫಾ ತಸ್ಕೀನ್ ವಾಹನ ಚಾಲನೆ ಮಾಡಿದಳು, ಲಾರಿ, ಆ?ಯಂಬುಲೆನ್ಸ್, ದ್ವಿಚಕ್ರ ವಾಹನ ಹಾಗೂ ಕಾರು ಸೇರಿದಂತೆ 14 ವಿವಿಧ ವಾಹನಗಳನ್ನು ಓಡಿಸಿದ್ದಾಳೆ. ಈ ಮೂಲಕ ಅತಿ ಕಿರಿಯ ವಯಸ್ಸಿನಲ್ಲಿ ಬಹುಚತ್ರ ವಾಹನ ಚಾಲನೆ ಮಾಡಿದ ಬಾಲಕಿ ಎಂಬ ಕೀತರ್ಿಗೆ ತಸ್ಕೀನ್ ಪಾತ್ರಳಾಗಿದ್ದಾಳೆಂದು ಸಂತೋಷ್ ಅಗವರ್ಾಲ್ ಅವರು ಘೋಷಣೆ ಮಾಡಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ 'ಗೋಲ್ಡನ್ ಬುಕ್ ಆಫ್ ವಲ್ಡರ್್ ರೆಕಾಡ್ಸರ್್' ಅಧಿಕೃತ ವೆಬ್ ಸೈಟ್'ನಲ್ಲಿ ಬಾಲಕಿಯ ಹೆಸರನ್ನು ಸೇರ್ಪಡೆಗೊಳಿಸಲಾಗುತ್ತದೆ. 2018-19ನೇ ಸಾಲಿನ ವಾಷರ್ಿಕ ನಿಯತಕಾಲಿಕೆಯಲ್ಲೂ ಬಾಲಕಿಯ ಹೆಸರನ್ನು ಪ್ರಕಟಿಸಲಾಗುತ್ತದೆ ಎಂದು ಅಗವರ್ಾಲ್ ಅವರು ತಿಳಿಸಿದ್ದಾರೆ.
ದಾಖಲೆ ಬರೆದಿರುವ ರಿಫಾಗೆ ಪ್ರಸ್ತುತ ತಾತ್ಕಾಲಿಕ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಮುಖ್ಯ ಪ್ರಮಾಣಪತ್ರವನ್ನು ಮುಂದಿನ 2 ವಾರಗಳಲ್ಲಿ ನೀಡಲಾಗುತ್ತದೆ. ವಾಹನಗಳ ಸಂಖ್ಯೆಗಳು, ದಾಖಲೆಯ ಪ್ರಾಮುಖ್ಯತೆ ಸೇರಿದಂತೆ ಇನ್ನಿತರೆ ಮಾಹಿತಿಗಳನ್ನು ಸ್ಥಳೀಯ ಸಾರಿಗೆ ಕಚೇರಿಯಿಂದ ಮಾಹಿತಿಗಳನ್ನು ಪಡೆದು, ಸ್ಥಳೀಯ ಶಾಸಕರ ಅನುಮತಿ ಪತ್ರ ಪಡೆದ ಬಳಿಕ ನೀಡಲಾಗುತ್ತದೆ ಎಂದಿದ್ದಾರೆ.
ತಾನು ಬರೆದಿರುವ ದಾಖಲೆಗೆ ಬಾಲಕಿ ರಿಫಾ ಸಂತಸವನ್ನು ವ್ಯಕ್ತಪಡಿಸಿದ್ದು, ಭವಿಷ್ಯದಲ್ಲಿ ನಾನು ಯುದ್ಧ ಪೈಲಟ್ ಆಗಬೇಕೆಂದು ಬಯಸಿದ್ದೇನೆಂದು ಹೇಳಿಕೊಂಡಿದ್ದಾಳೆ.