ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 29, 2017
ಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ವಿರಾಟ್ ಕೊಹ್ಲಿ ಆಡುವುದು ನಿಧರ್ಾರವಾಗಿಲ್ಲ!
ನಾಗ್ಪುರ: ಪ್ರವಾಸಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದ್ದು ಈ ನಂತರದ ಟಿ20 ಸರಣಿಯಲ್ಲಿ ಕೊಹ್ಲಿ ಆಡುತ್ತಾರಾ ಇಲ್ಲ ಎಂಬುದನ್ನು ತೀಮರ್ಾನಿಸಲಾಗಿಲ್ಲ ಎಂದು ಬಿಸಿಸಿಐನ ಅಧಿಕಾರಿಗಳು ತಿಳಿಸಿದ್ದಾರೆ.
ಆಯ್ಕೆ ಸಮಿತಿಗೆ ವಿರಾಟ್ ಕೊಹ್ಲಿ ತಮಗೆ ವಿಶ್ರಾಂತಿ ಬೇಕು ಎಂಬುದನ್ನು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಟಿ20 ತಂಡವನ್ನು ಘೋಷಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿಸೆಂಬರ್ 12ರ ತನಕ ವಿರಾಟ್ ಕೊಹ್ಲಿ ಅವರು ಕೆಲ ವೈಯಕ್ತಿಕ ಬದ್ಧತೆಗಳನ್ನು ಹೊಂದಿದ್ದಾರೆ. ಆ ನಂತರ ಅವರು ವಿಶ್ರಾಂತಿ ಪಡೆಯುವ ಅಥವಾ ಟಿ20 ಸರಣಿಯಲ್ಲಿ ಆಡುತ್ತಾರಾ ಎಂಬುದು ತಿಳಿಯಲಿದೆ.
ಮುಂದಿನ ವಾರ ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಟೆಸ್ಟ್ ಸರಣಿಗೆ ತಂಡವನ್ನು ಆಯ್ಕೆ ಮಾಡುವ ಸಲುವಾಗಿ ಆಯ್ಕೆ ಸಮಿತಿ ಕೋಚ್ ರವಿಶಾಸ್ತ್ರಿ ಮತ್ತು ವಿರಾಟ್ ಕೊಹ್ಲಿಯನ್ನು ಸಂಪಕರ್ಿಸಲಿದ್ದು ಆ ಸಮಯದಲ್ಲಿ ವಿರಾಟ್ ಕೊಹ್ಲಿ ಆಡುವ ಬಗ್ಗೆ ಇತ್ಯಾರ್ಥವಾಗಲಿದೆ ಎಂದರು.
ಲಂಕಾ ವಿರುದ್ಧದ ಟಿ20 ಸರಣಿ ಡಿಸೆಂಬರ್ 20ರಿಂದ ಪ್ರಾರಂಭವಾಗಲಿದೆ. ಮೊದಲ ಪಂದ್ಯ ಕಟ್ಟಕ್ ನಲ್ಲಿ ನಡೆಯಲಿದ್ದು ಮುಂದಿನ ಪಂದ್ಯಗಳು 22 ಮತ್ತು 24ರಂದು ಇಂದೋರ್ ಮತ್ತು ವಿಶಾಖಪಟ್ಟಂನಲ್ಲಿ ನಡೆಯಲಿವೆ.